World Cup 2023 ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿ ಗೆ ಭಾರತದ ತಂಡ ಪ್ರಕಟಿಸಲಾಗಿದೆ.
ಕರ್ನಾಟಕದ ಕೆ.ಎಲ್.ರಾಹುಲ್ ಗೆ ಸ್ಥಾನ ಸಿಕ್ಕಿದೆ
ರೋಹಿತ್ ಶರ್ಮ ಕ್ಯಾಪ್ಟನ್. ವಿರಾಟ್ ಕೊಹ್ಲಿ,ಹಾರ್ದಿಕ್ ಪಾಂಡ್ಯ,ಶುಭ್ ಮನ್ ಗಿಲ್, ಇಷಾನ್ ಕಿಶನ್,
ಸೂರ್ಯಕುಮಾರ್ ಯಾದವ್,ಕೆ.ಎಲ್ ರಾಹುಲ್,ರವೀಂದ್ರ ಜಡೇಜ,ಶ್ರೇಯಸ್ ಐಯ್ಯರ್,ಜಸ್ಪ್ರೀತ್ ಬುಮ್ರಾ, ಮೊಹ್ಮದ್ ಶಮಿ ಮೊಹ್ಮದ್ ಸಿರಾಜ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮತ್ತು ಶಾರ್ದೂಲ್ ಠಾಕೂರ್. ತಂಡದಲ್ಲಿದ್ದಾರೆ.
ಮೇಲ್ನೋಟಕ್ಕೆ ಬಲಿಷ್ಠ ತಂಡವೇ ಆಗಿದೆ. ಆದರೆ ಪ್ರಸ್ತುತ ಏಷ್ಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಮೊದಲ ನಾಕು ಮಂದಿ ಬ್ಯಾಟರ್ ಗಳ ಆಟದಗತಿ ನೋಡಿದರೆ ಇವರು ಹೀಗೇ ಆಡಿದರೆ ಹೇಗೆ ? ಎಂದು ಹೌಹಾರುವಂತೆ ಮಾಡುತ್ತದೆ. ಕ್ಯಾಪ್ಟನ್ ರೋಹಿತ್ ಅವರು ಹಾರ್ದಿಕ್ ಅವರ ಮೇಲೇ ಹೆಚ್ಚು ಒತ್ತಡ ನೀಡುವಂತೆ
ಮಾತಾಡಿದ್ದಾರೆ.
ಜಡೆಜ ಕೂಡ ಕಚ್ಚಿಕೊಂಡು ಆಡುವ ಬ್ಯಾಟರ್.ಬೌಲಿಂಗ್ ನಲ್ಲಿ ಆತ್ಮವಿಶ್ವಾಸ ಇರುವ ಆಲ್ ರೌಂಡರ್
ಸೂರ್ಯಕುಮಾರ್ ಒಬ್ಬ ಹಾರ್ಡ್ ಹಿಟ್ಟರ್. ಲಯ ಕಂಡುಕೊಳ್ಳಬೇಕಾದದ್ದು ಶ್ರೇಯಸ್ ಅಯ್ಯರ್. ಶುಭ್ಮನ್ ಗಿಲ್ ಮೇಲೆ ಭರವಸೆ ಇದೆ.ಅಷ್ಟೇ ಭರವಸೆ ಕಿಶನ್ ಮೇಲೂ ಇಟ್ಟುಕೊಳ್ಳಬಹುದಾಗಿದೆ.
ಕೆ.ಎಲ್.ರಾಹುಲ್ ಹೊಡೆತಕ್ಕೆ ದುಡುಕಿ ವಿಕೆಟ್ ಬಿಡಬಾರದು.
ಕೊಹ್ಲಿ ಎಂದಿನಂತೆ ಆಡಿದರೆ ಸಾಕು. ಅತೀ ಆತ್ಮವಿಶ್ವಾಸ ಕೈಕೊಡಬಹುದು..
ಶರ್ಮ ಒಳ್ಳೆ ಓಪನರ್ ಕೂಡ.
ಇನ್ನು ಬೌಲಿಂಗ್ ಇಲಾಖೆಯಲ್ಲಿ ಬುಮ್ರಾ ಬ್ಯಾಂಕ್ ಡಿಡಿ ಇದ್ದಂತೆ.ವಿಕೆಟ್ ಗ್ಯಾರಂಟಿ.
World Cup 2023 ಕುಲ್ದೀಪ್ ಯಾದವ್ ಬುದ್ದಿವಂತಿಕೆಯುಳ್ಳ ಬೌಲರ್. ಅಕ್ಷರ್ ಪಟೆಲ್ ,ಶಾರ್ದೂಲ್ ಅವರನ್ನ ನೆಚ್ಚಿಕೊಳ್ಳಬಹುದು.
ಸಿರಾಜ್ ಮೊದಲ ಎಸೆತಗಳಲ್ಲೇ ಮೋಡಿ ಮಾಡಬಹುದು.ಜೊತೆ ಶಮಿ ಇನ್ನೇನು ಬೇಕು?
ಕ್ರಿಕೆಟ್ ಗುಟ್ಟು ಇರೋದೇ ಫೀಲ್ಡಿಂಗ್ ನಲ್ಲಿ. ಅದೊಂದು ಸರಿಯಿದ್ರೆ, ಸಾಕು
ಬೆಸ್ಟ್ ಆಫ್ ಲಕ್ ಇಂಡಿಯ.