Sri Uttaradi Math ಶ್ರೀಕೃಷ್ಣ ತನ್ನ ಲೀಲೆಗಳ ಮೂಲಕ ದೇವರು ಮಾಡುವ ಮಹಾ ಕಾರ್ಯವನ್ನು, ಮಹಿಮೆಯನ್ನು, ಶಿಕ್ಷಣವನ್ನೂ ಜಗತ್ತಿಗೆ ತಿಳಿಸಿದ್ದಾನೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ ಭಾನುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ವ್ಯಕ್ತಿ ತನಗೆ ಸಿಕ್ಕಿದ್ದನ್ನು ತಾನೊಬ್ಬನೇ ತಿನ್ನಬಾರದು. ಎಲ್ಲರಿಗೆ ಕೊಟ್ಟು ತಿನ್ನಬೇಕು. ಕೇವಲ ಮನುಷ್ಯರಿಗೆ ಮಾತ್ರವಲ್ಲ. ಪ್ರಾಣಿ, ಪಕ್ಷಿಗಳಿಗೂ ಕೊಡಬೇಕು. ಕೋತಿಗಳಿಗೆ, ಬೆಕ್ಕುಗಳಿಗೆ ಹಾಲು ಮೊಸರು ಬೆಣ್ಣೆಯನ್ನು ಕೊಟ್ಟು ಶ್ರೀಕೃಷ್ಣ ಒಬ್ಬರೇ ತಿನ್ನಬಾರದು ಎಂಬ ಶಿಕ್ಷಣ ನೀಡಿದ್ದಾನೆ ಎಂದರು.
ಎಲೆಯ ಮೇಲೆ ಎಲ್ಲವನ್ನೂ ಖಾಲಿ ಮಾಡಬೇಡಿ. ಹಾಗಂತ ಯಥೇಚ್ಛವಾಗಿ ಪದಾರ್ಥವನ್ನು ಚೆಲ್ಲುವುದೂ ಬೇಡ. ಎಲೆಯ ಮೇಲೆ ಸ್ವಲ್ಪ ಸ್ವಲ್ಪ ಉಳಿಸಿದರೆ ಬೇರೆ ಬೇರೆ ಪ್ರಾಣಿಗಳಿಗೂ ಆಹಾರ ಆಗುತ್ತದೆ. ಅದರಿಂದ ಅವುಗಳ ಹೊಟ್ಟೆ ತುಂಬುತ್ತದೆ. ಅವುಗಳ ಜೀವನ ಆಗುತ್ತದೆ. ಇರುವೆ ಮೊದಲಾದ ಎಷ್ಟೋ ಕ್ರಿಮಿಗಳೂ ಬದುಕುತ್ತವೆ ಎಂದರು.
Sri Uttaradi Math ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್ ಮೊದಲಾದವರಿದ್ದರು.