Saturday, December 6, 2025
Saturday, December 6, 2025

Indian Medical Association ವೈದ್ಯರು ಔಷಧ ಚೀಟಿಗಳನ್ನ ಕನ್ನಡದಲ್ಲಿ ಬರೆದರೆ ಒಳ್ಳೆಯದು- ಡಿ.ಮಂಜುನಾಥ್

Date:

Indian Medical Association ಕರ್ನಾಟಕದಲ್ಲಿ ಎಲ್ಲಾ ಸೌಲಭ್ಯ ಇದೆ. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.

ಅವರು, ಶಿವಮೊಗ್ಗದಲ್ಲಿ ಕನ್ನಡ ವೈದ್ಯ ಬರಹಗಾರರ 4ನೇಯ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿ, ಇಂದು ಕನ್ನಡ ಪತ್ರಿಕೆಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆ. ಆದರೆ ವೈದ್ಯರು ಕನ್ನಡದಲ್ಲಿ ಅತ್ಯಂತ ಮೌಲಿಕ ಕೃತಿ ತಂದು ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುತ್ತಿರುವುದು ಸಂತಸದ ವಿಷಯ ಎಂದರು.

ಪ್ಲೇಗ್ ರೋಗದಿಂದ ತಮ್ಮ ಮನೆಯಲ್ಲಿ ಸಹೋದರರು ಮೃತ ಪಟ್ಟಿದ್ದು ನೋಡಿ ನಾ.ಸು. ಹರ್ಡಿಕರ್ ಅವರು ವೈದ್ಯಕೀಯ ಶಿಕ್ಷಣ ಮಾಡುತ್ತಾರೆ. ಆದರೆ ಗಾಂಧೀಜಿಯವರು ಮೊದಲು ದೇಶ ಸ್ವಾತಂತ್ರ್ಯ ಪಡೆಯಲಿ ನಂತರ ಅನೇಕ ಜನ ವೈದ್ಯರು ತಯಾರಾಗುತ್ತಾರೆ ಎಂದು ಹೇಳಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಮಾಡುತ್ತಾರೆ. ಆದರೆ ಗಾಂಧಿ ಕನಸು ನನಸಾಗಿದೆ. ಇಂದು ವೈದ್ಯರು ಸಾಕಷ್ಟಿದ್ದಾರೆ. ಆದರೆ ಹಂದಿಗೋಡು ಕಾಯಿಲೆ ಮಂಗನ ಕಾಯಿಲೆಗೆ ಇಂದು ಔಷದಿ ಸಿಕ್ಕಿಲ್ಲ. ಅನೇಕ ಆಸ್ಪತ್ರೆಗಳಲ್ಲಿ ಸರಿಯಾದ ಕಾಯಿಲೆ ಯಾವುದೆಂದು ಗುರುತಿಸದೆ ಚಿಕಿತ್ಸೆ ನೀಡಿ ರೋಗಿಗಳ ಪ್ರಾಣಕ್ಕೆ ಕುತ್ತು ತರುವಂತೆ ಆಗಿದೆ.ಎಂದು ಸ್ವ ಅನುಭವ ಹೇಳಿದರು.

ಹಾಗಾಗಿ ವೈದ್ಯರು ತಾವು ಕೊಡುವ ಚೀಟಿಯನ್ನು ಕನ್ನಡದಲ್ಲಿ ಅರ್ಥವಾಗುವಂತೆ ಬರೆದರೆ ಒಳ್ಳೆಯದು ಎಂದರು.

Indian Medical Association ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವಾಧ್ಯಕ್ಷರಾದ ಡಾ.ಕೆ.ಆರ್.ಶ್ರೀಧರ್ ವಹಿಸಿದ್ದರು. ವೇದಿಕೆಯಲ್ಲಿ ಡಾ .ರಕ್ಷಾರಾವ್, ಡಾ ಅರುಣ್ ಡಾ. ಗುರುದತ್ ಡಾ. ವಿನಯ ಶ್ರೀನಿವಾಸ್, ಡಾ.ಶುಭ್ರತಾ ಹಾಗೂ ಡಾ. ಶಿವಾನಂದ ಕುಬಸದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bangalore Television Centre ಕಲಾತ್ಮಕ ಧಾರಾವಾಹಿ ನಿರ್ಮಾಣ & ಫೋಕ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ

Bangalore Television Centre ಬೆಂಗಳೂರು ದೂರದರ್ಶನ ಕೇಂದ್ರವು ನಿರ್ಮಿಸಲಿರುವ ಕಲಾತ್ಮಕ ಧಾರಾವಾಹಿಯನ್ನು...

ಭಗವದ್ಗೀತೆ ಪಠ್ಯದಲ್ಲಿ ಅಳವಡಿಸಲು ಸಚಿವ ಕುಮಾರಣ್ಣ ಬರೆದ ಪತ್ರಕ್ಕೆ ಅಶೋಕ ಜಿ.ಭಟ್ ಕೃತಜ್ಞತೆ

ಶಿವಮೊಗ್ಗದಲ್ಲಿ ಇತ್ತೀಚೆಗೆ ಭಗವದ್ಗೀತಾ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ರಾಜ್ಯಮಟ್ಟದ ಬೃಹತ್ಸಮಾರಂಭದಲ್ಲಿ ವಿವಿಧ...

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...