Raghavendra Aradhana ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ದಿನಾಂಕ 31 -8-2023 ರಿಂದ 02-09-2023. ಪ್ರತಿ ವರ್ಷದಂತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹ ಐದನೇಯ ಮಂತ್ರಾಲಯ ಭರಮಸಾಗರದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.
ದಿನಾಂಕ 31-8-2023 ರಂದು ಶ್ರೀ ಗುರು ರಾಯರ ಆರಾಧನಾ ಕಳಸ ಸ್ಥಾಪನೆ, ಪೂರ್ವಾರಾಧನೆ ಪೂಜಾಕಲಾಪಗಳು, ಪಂಚಾಮೃತಾಬಿಷೇಕ, ಪ್ರಸಾದ ವಿತರಣೆ. ನೆಡೆಯಿತು. ಸಂಜೆ ಸ್ಥಳೀಯ ದುರ್ಗಾಭಿಕಾ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಿನಾಂಕ 01-09-2023 ರಂದು ಮಧ್ಯ ಆರಾಧನೆ , ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ರುದ್ದರಾಭಿಷೇಕ, ನೂತನ ವಸ್ರ್ರಾಧಾರಣೆ, ಗುರುಬಿಕ್ಷ, ಗುರು ಪಾದಕೆ ಪೂಜೆ, ಪುಷ್ಪ ಅಲಂಕಾರ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ. ಮಧ್ಯ ಆರಾಧನಾ ಪೂಜಾಕಲಾಪಗಳು, ಪ್ರಸಾದ ವಿತರಣೆ. ನೆಡೆಯಿತು. ಸಂಜೆ ಗುರುದರ್ಶನದ ಭಕ್ತರಿಂದ ಭಕ್ತಿ ಸಂಗೀತ ಮತ್ತು ಭಜನೆ ಆಯೋಜಿಸಲಾಗಿತ್ತು.
ದಿನಾಂಕ 02-09-2023 ರಂದು ಶನಿವಾರ , ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಉತ್ತರ ಆರಾಧನೆ ವಿಶೇಷವಾಗಿ ಶ್ರೀ ರಾಯರ ಬೃಂದಾವನ ಕ್ಕೆ ರುದ್ರಾಭಿಷೇಕ ಮಹಿಳೆಯರಿಂದ ಸುಮಂಗಲಿ ಪೂಜೆ, ಅರಿಷಿಣ ಕುಂಕುಮ ಸಮರ್ಪಣೆ, ಶ್ರೀ ಸತ್ಯನಾರಾಯಣ ಪೂಜೆ, ಸರ್ವ ಸಮರೋಪನೋತ್ಸವ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ, ಪ್ರಸಾದ ವಿತರಣೆ. ನೆರವೇರಿತು.
ಸಂಜೆ ಭರಮಸಾಗರದ ಸಾಯಿ ಙಕ್ತ ಮಂಡಲಿಯ ಸದಸ್ಯರಿಂದ ಸಾಯಿ ಭಜನೆ ಕಾರ್ಯಕ್ರಮ ಭಕ್ತರಿಂದ ಭಕ್ತಿ ಗೀತೆಗಳು, ಗುರು ಭಜನೆ ಮತ್ತು ಮಂಗಳಾರತಿ ಲಾಲಿ ಸೇವೆಯನ್ನು ನೆರವೇರಿಸಲಾಯಿತು.
ಭರಮಸಾಗರದ ರಾಯರ ವಿಶ್ರಾಂತಿ ಗೃಹ ಕ್ಕೆ ಜಾತಿಬೇದವಿಲ್ಲದೆ ನಂಬಿ ಬಂದ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದಂತೆ ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕರಾದ ಶ್ರೀ ಚಂದ್ರಪ್ಪ ನವರು ಸಹ ಪ್ರತಿವರ್ಷದಂತೆ ಕಾರ್ಯಕ್ರಮದಲ್ಲಿ ಹಾಜರಾಗಿ ಆಶೀರ್ವಾದ ಪಡೆದರು.
Raghavendra Aradhana ಮುರುಳಿಧರ್ ನಾಡಿಗೇರ್
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹ , ಐದನೇಯ ಮಂತ್ರಾಲಯ. ಭರಮಸಾಗರ
ಚಿತ್ರದುರ್ಗ ತಾ ಮತ್ತು ಜಿಲ್ಲೆ