ಲೇ: ಎನ್.ಜಯಭೀಮ ಜೊಯಿಸ್.
ಶಿವಮೊಗ್ಗ
Sri Raghavendra Swami Aradhana ತಂಜಾವೂರು ,ದಕ್ಷಿಣಭಾರತದ ರಾಜಕೀಯದಲ್ಲಿ ಏರುಪೇರಾಗಿ ತಂಜಾವೂರು ರಾಜ್ಯವು ಘೋರಯುದ್ಧವನ್ನು ಎದುರಿಸಬೇಕಾಗಿ ಬಂದು ಬಹಳ ಕಷ್ಟನಷ್ಟಗಳಿಗೆತುತ್ತಾಗ ಬೇಕಾಯಿತು.ಹಿಂದಿನ ಅರಸರುಗಳುರಾಜಗುರುಗಳಾದಶ್ರೀವಿಜಯೀಂದ್ರ
ತೀರ್ಥರು ಮತ್ತು ಶ್ರೀಸುಧೀಂದ್ರತೀರ್ಥ ಗುರುಗಳ ಮಾರ್ಗದರ್ಶನ ಮತ್ತು ಉಪದೇಶದಂತೆ ನಡೆದು ಒಳ್ಳೆಯಅರಸರೆಂದುಹೆಸರುಯಪಡೆದಿದ್ದರು.ರಘು
ನಾಥ ಭೂಪಾಲನ ಮಗವಿಜಯರಾಘವಭೂಪಾಲನು ಮಿತ್ರರಾಜ್ಯಗಳೊಡನೆಒಳ್ಳೆಯಸಂಬಂಧವನ್ನಿಟ್ಟು
ಕೊಳ್ಳದಿದ್ದುದರಿಂದಯುದ್ಧದಲ್ಲಿಸೋಲನ್ನನುಭವಿಸಬೇಕಾಯಿತು.ಕ್ರಿಶ1641-42ಹಾಗೆಜರುಗಿದಈಯುದ್ಧದಲ್ಲಿ ವಿಜಯರಾಘವ ಭೂಪಾಲನ ಜೀವವುಳಿದಿದ್ದೇ ಕಷ್ಟವಾಗಿತ್ತು,ದೈವಯೋಗದಿಂದ ಮತ್ತು ಶ್ರೀರಾಘವೇಂದ್ರತೀರ್ಥ ಗುರುಗಳ ಅನುಗ್ರಹ ಆಶೀರ್ವಾದದಿಂದ ಸೋತ ವಿಜಯರಾಘವ ಭೂಪಾಲನಿಗು ಮತ್ತು ಜಯಶಾಲಿಗಳಾದ ರಾಜ್ಯಗಳಿಗೂ ಮಧ್ಯಸ್ಥಿಕೆಯಿಂದ ಯುದ್ಧ ಮುಕ್ತಾಯವಾಯಿತು.ಆದರೆ ತಂಜಾವೂರಿನಲ್ಲಿದ್ದ ದವಸ ಧಾನ್ಯ ಸಿರಿಸಂಪತ್ತೆಲ್ಲವೂ ಲೂಟಿಯಾಗಿ ಹೋಯಿತು.ಅದೇ ಸಮಯಕ್ಕೆ ಸರಿಯಾಗಿ ಮಳೆಇಲ್ಲದೆ ಬೆಳೆಗಳೆಲ್ಲವೂ ನಾಶವಾಗಿ ತಂಜಾವೂರು ಪ್ರಾಂತ್ಯ ಘೋರ ದುರ್ಭಿಕ್ಷಕ್ಕೊಳಗಾಯಿತು.
ತಂಜಾವೂರಿನ ರಾಜನಾಗಿದ್ದ ವಿಜಯರಾಘವ ಭೂಪಾಲನು ಪ್ರಜೆಗಳಹಿತೈಷಿಯೂ,ಉದಾರಮನಸ್ಸು ಹೊಂದಿದವನೂ ಆಗಿದ್ದನು.ಅವನು ತನ್ನ ರಾಜ
ಭಂಡಾರದಲ್ಲಿದ್ದ ಧನಕನಕಾದಿ ವಸ್ತುಗಳನ್ನೆಲ್ಲಾ ಉಪಯೋಗಿಸಿ ತನ್ನರಾಜ್ಯದ ಪ್ರಜೆಗಳಿಗೆ ಆಹಾರವನ್ನೊದಗಿಸಲಾರಂಭಿಸಿದನು.ಭೀಕರ ಕ್ಷಾಮಕ್ಕೀಡಾದ ದೊಡ್ಡ ರಾಜ್ಯದ ಜನರಿಗೆ ಎಷ್ಟುದಿನ
ರಾಜ ಭಂಡಾರ ಸಹಾಯ ಮಾಡಲು ಸಾಧ್ಯ.ರಾಜ ಭಂಡಾರ ಬರಿದಾಗುತ್ತಾ ಬಂತು.ಪ್ರಜೆಗಳಲ್ಲಿ ಅಶಾಂತಿ
ಮತ್ತು ಹಾಹಾಕಾರಗಳುಂಟಾದವು.ರಾಜನಿಗೆ ಅವನ
ರಾಜ್ಯದಹಿತೈಷಿಗಳುಶ್ರೀರಾಘವೇಂದ್ರಗುರೂಉಸಾರ್ವಭೌಮರನ್ನುಮೊರೆಹೋಗಲುಸಲಹೆನೀಡಿದರು.
ಆಗ ಈ ಕ್ಷಾಮದ ಸಮಸ್ಯೆಪರಿಹಾರವಾಗಬಹುದೆಂದು ರಾಜನಿಗೆ ತಿಳಿಸಿದರು.ರಾಜನಿಗೆ ತನ್ನ ತಂದೆ ,ತಾತ ಇವರುಗಳು ಶ್ರೀರಾಯರಿಂದ ಅನುಗ್ರಹಪಡೆದಿದ್ದ ಸಂದರ್ಭಗಳು ನೆನಪಾಯಿತು.”ಅವನಿಗೆ ಈ ಮೊದಲೇ ಶ್ರೀರಾಯರಂತಹ ಮಹಾನುಭಾವರ ಮಾರ್ಗದರ್ಶನದಲ್ಲಿ ನಡೆದಿದ್ದರೆ ಬಹುಶ:ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲವೇನೋ ಎಂಬ ಅರಿವು ಅವನಿಗೆ
ಮೂಡುತ್ತದೆ”.ಕೊನೆಗೆ ತನ್ನ ಆಪ್ತ ರಾಜ ಪರಿವಾರದೊಂದಿಗೆ ಕುಂಭಕೋಣಕ್ಕೆ ಬಂದು ರಾಯರ ಪಾದವನ್ನು ಹಿಡಿದು ಕಣ್ಣೀರುಸುರಿಸಿತನ್ನರಾಜ್ಯಕ್ಕೆ,ತನ್ನ ಪ್ರಜೆಗಳಿಗೆ ಬಂದೊದಗಿರುವ ಕಷ್ಟಗಳನ್ನು ಹೇಳಿಕೊಂಡು,ಈ ಕಷ್ಟದಿಂದ ಪಾರುಮಾಡಿ ರಾಜ್ಯದ ಜನರನ್ನು ಕಾಪಾಡಬೇಕೆಂದು ಪ್ರಾರ್ಥಿಸಿದನು.
ರಾಜನು ತನ್ನ ಅಳಲು ತೋಡಿಕೊಂಡದ್ದಕ್ಕೆ “ಶ್ರೀಗುರುರಾಜರು ಕ್ಷಣಕಾಲ ಧ್ಯಾನ ಮಗ್ನರಾದರು.
ಗುರುಗಳಿಗೆ ಕ್ಷಾಮದ ಭೀಕರತೆ ಗೋಚರವಾಯಿತು.
ಅದು ಬೇಗ ಮುಗಿಯುವುದಿಲ್ಲವೆಂಬುದನ್ನೂ ಮನಗಂಡು ರಾಜನಿಗೆ ,ನಿನ್ನ ರಾಜ್ಯಕ್ಕೆಬಂದೊದಗಿರುವ ಕಷ್ಟವನ್ನುಕೇಳಿನಮಗೆಬಹಳವ್ಯಸನವಾಗಿದೆ.ಧರ್ಮದಿಂದ ರಾಜ್ಯಭಾರ ಮಾಡುತ್ತಿರುವ ನೀನೂ ನಮ್ಮ ಅನುಗ್ರಹಕ್ಕೆ ಪಾತ್ರನಾಗಿರುವೆ.ಪ್ರಜೆಗಳ ಕಷ್ಟವನ್ನು ಪರಿಹರಿಸಿರುವುದು ರಾಜನಾದ ನಿನ್ನ ಕರ್ತವ್ಯ,ಹಾಗೂ ಎಲ್ಲ ಜೀವರಾಶಿಯ ಕ್ಷೇಮವನ್ನು ನೋಡುವ ಗುರುಗಳಾದ ನಮ್ಮ ಕರ್ತವ್ಯವೂ ಆಗಿದೆ” ಎಂದು ಹೇಳಿದರು.ಶ್ರೀಮೂಲರಾಮನ ದಯದಿಂದ ಸಮಸ್ಯೆ
ಪರಿಹಾರವಾಗುವುದೆಂಬ ನಂಬಿಕೆ ನಮಗಿದೆ ,ನಾವು
ತಂಜಾವೂರಿಗೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ
ಪರಿಹರೋಪಾಯವನ್ನು ಚಿಂತಿಸುತ್ತೇವೆ.ಒಳ್ಳೆಯ
ಫಲಿತಾಂಶವನ್ನು ಕೊಡುವಂತೆ ಮೂಲರಾಮನಲ್ಲಿ
ಪ್ರಾರ್ಥಿಸೋಣ ಎಂದು ಹೇಳಿ ರಾಜನನ್ನು ಮತ್ತು ಅವನ ಪರಿವಾರದವರನ್ನು ಆಶೀರ್ವದಿಸಿ ಕಳಿಸಿಕೊಟ್ಟರು.ಮಾರನೇ ದಿನವೇ ಶ್ರೀಗಳವರು ಮಹಾಸಂಸ್ಥಾನದಲ್ಲಿದ್ದಬೆಳ್ಳಿಬಂಗಾರ,ನವರತ್ನಾಭರಣಾದಿಗಳು,ಅಪರಿಮಿತ ಧನ,ತಮ್ಮಲ್ಲಿದ್ದ ಸಮಸ್ತ ದವಸ ಧಾನ್ಯಗಳನ್ನು ಬಂಡಿಗಳಲ್ಲಿತುಂಬಿಸಿಕೊಂಡು ಕಡಿಮೆ ಪರಿವಾರದೊಡನೆ ತಂಜಾವೂರಿಗೆ ಬಂದರು.ತಂಜಾವೂರಿನ ರಾಜನು ಭಕ್ತಿಯಿಂದ ಗುರುಗಳನ್ನು ಸ್ವಾಗತಿಸಿ ಅವರಿಗೆ ಬಿಡಾರ
ಮಾಡಿಸಿದ.ಗುರುಗಳು ತಾವು ಜೊತೆಯಲ್ಲಿ ತಂದಿದ್ದ
ವಸ್ತುಗಳೆಲ್ಲವನ್ನೂ ರಾಜನಿಗೆ ಕೊಟ್ಟು ಮಹಾರಾಜ
ಮೊದಲು ಈ ವಸ್ತುಗಳನ್ನು ತೆಗೆದುಕೊಂಡು ಪ್ರಜೆಗಳಿಗೆ ಆಹಾರವನ್ನು ಒದಗಿಸುವ ಏರ್ಪಾಡುಮಾಡು ಎಂದು ಹೇಳಿದರು.ಶ್ರೀಗಳವರ
ಕಾರುಣ್ಯವನ್ನು ಕಂಡು ರಾಜನು ಆನಂದತುಂದಿಲನಾಗಿ
ಗುರುಗಳಿಗೆ ಜನರ ಕ್ಷೇಮದ ಬಗ್ಗೆ ಇರುವ ಕಾಳಜಿಯನ್ನು ಕಂಡ ರಾಜನು ಗುರುದೇವ ಇದೆಲ್ಲಾ
ಮಠದ ಸ್ವತ್ತು ಹೇಗೆ ಸ್ವೀಕರಿಸಲಿ ಎಂದು ಹೇಳಿದ
ರಾಜನಿಗೆ ಗುರುಗಳು “ಗುರುಪೀಠಗಳಿರುವುದು ಏತಕ್ಕಾಗಿ?ದೇಶದ ಜನರು ಸಂಕಷ್ಟದಲ್ಲಿರುವಾಗ ಅವರ ಉಪಯೋಗಕ್ಕೆ ಬಾರದ ಆಸ್ತಿಪಾಸ್ತಿಗಳಿಂದ
ಏನು ಪ್ರಯೋಜನ?ಮತ್ತು ಇವೆಲ್ಲವನ್ನು ಸಮರ್ಪಿಸಿರುವರು ಅನೇಕ ರಾಜರು,ರಾಜರಾಗಿದ್ದ ನಿನ್ನ ತಂದೆ,ತಾತನವರುಗಳು.ಇವು ಪ್ರಜೆಗಳಿಗಾಗಿ
ಸದುಪಯೋಗವಾಗುತ್ತಿದೆಯೆಂದು ನಮಗೆ ಸಂತೋಷ
ವಾಗುತ್ತಿದೆ.
ಗುರುಗಳು”ಜನರು ಸಂತುಷ್ಟರಾದರೆ ಜನಾರ್ಧನನು ಸಂತುಷ್ಟ ನಾಗುವನು”ಎಂದು ರಾಜನಿಗೆ ಹೇಳಿದರು.
ಇದೂ ಶ್ರೀಹರಿಯ ಸೇವೆಯೆಂದೇ ಭಾವಿಸಿದ್ದೇವೆ.
ನೀನು ಏನೂ ಯೋಚನೆ ಮಾಡದೆ ನೀನು ನಾವು
ತಂದಿರುವ ವಸ್ತುಗಳಿಂದ ಬರುವ ಧನದಿಂದ ಸಮಸ್ತ
ಪ್ರಜೆಗಳಿಗೂ ಆಹಾರ ಒದಗಿಸು.ಇದು ಕೆಲವು ದಿವಸಕ್ಕೆ ಸಾಕಾಗ ಬಹುದು.ನೋಡೋಣ ಇದು ಮುಗಿಯುವ ಹೊತ್ತಿಗೆ ಶ್ರೀಹರಿಯು ಇನ್ನೂ ಅನುಕೂಲ ಮಾಡಿಕೊಟ್ಟಾನು” ಎಂದು ರಾಜನಿಗೆ ಹೇಳಿದರು.
ಗುರುಗಳ ಈ ಉದಾರ ಸ್ವಭಾವವನ್ನು ತಿಳಿದ ರಾಜ್ಯದ
ಜನರು ಗುರುಗಳನ್ನು ತಮ್ಮ ಭಾಗದ ದೇವರೆಂದೇ ತಿಳಿದರು.
ಮಾರನೆಯ ದಿನ ಗುರುಗಳು ರಾಜನ ಧಾನ್ಯ ಸಂಗ್ರಹದ ಸ್ಥಳಕ್ಕೆ ಹೋಗಿ ಅಲ್ಲಿ ಕೇವಲ ಒಂದೈದಾರು
ದಿವಸಗಳಿಗಾಗುವಷ್ಟು ಮಾತ್ರ ಧಾನ್ಯವಿರುವುದನ್ನು
ಕಂಡು ಆ ಧಾನ್ಯಗಳ ಮೇಲೆಯೇ ಬೀಜಾಕ್ಷರಗಳನ್ನು
ಬರೆದು,ಮೂರುದಿನಪರ್ಯಂತಅವಿಚ್ಛಿನ್ನವಾಗಿ,ಉಪವಾಸದಿಂದ ಮಂತ್ರಗಳನ್ನು ಜಪಿಸುತ್ತಾ ಕುಳಿತು ಬಿಟ್ಟರು.ರಾಜ್ಯದಲ್ಲಿನ ಸಾವಿರಾರು ಜನರುಗುರುಗಳಿದ್ದ ಧಾನ್ಯಾಗಾರದ ಮುಂದೆ ಬಂದುಸೇರಿದರು.ನಾಲ್ಕನೆಯ ದಿನ ಸೂರ್ಯನು ಉದಯಿಸುತ್ತಿದ್ದಂತೆಯೇ ಧಾನ್ಯಾಗಾರದಲ್ಲಿ ಒಂದುಅದ್ಭುತ ಪವಾಡ ಸದೃಶವಾದ ಮಹಿಮೆ ನಡೆಯಿತು.
ಏನಾಶ್ಚರ್ಯ,ಬರಿದಾಗಿದ್ದ ಧಾನ್ಯಾಗಾರ ಧಾನ್ಯದ ರಾಶಿಯಿಂದ ತುಂಬಿತುಳುಕ ಹತ್ತಿತು.ಈ ಅಚ್ಚರಿಯನ್ನು
ಕಂಡ ರಾಜ ಮತ್ತು ಜನರು ಭಕ್ತಿ,ಆನಂದ ಉತ್ಸಾಹದಿಂದ “ಜಯಜಯಶ್ರೀರಾಘವೇಂದ್ರಗುರು
ಸಾರ್ವಭೌಮ”ಎಂದು ಹರ್ಷದ ಧ್ವನಿ ಮಾಡಿದರು.
ಶ್ರೀಗುರುರಾಯರ ಭಕ್ತಿಗೆ ಪ್ರಸನ್ನಳಾದ ಧಾನ್ಯ ಲಕ್ಷ್ಮಿಯು ರಾಜನನ್ನು ಅನುಗ್ರಹಿಸಿ ಧಾನ್ಯಾಗಾರವನ್ನು
ಧಾನ್ಯರಾಶಿಯಿಂದ ತುಂಬಿ ಕಾರುಣ್ಯ ಬೀರಿದಳು.ಹೀಗೆ
ಗುರುಗಳು ತಮ್ಮ ತಪಶ್ಯಕ್ತಿ ಮತ್ತು ಮಂತ್ರ ಸಿದ್ಧಿಯಿಂದ
ತಂಜಾವೂರಿನ ರಾಜನ ಧಾನ್ಯಾಗಾರದಲ್ಲಿ ಧಾನ್ಯ ಅಕ್ಷಯವಾಗುವಂತೆ ಮಾಡಿದರು.
Sri Raghavendra Swami Aradhana ಇಂತಹ ಕಾರುಣ್ಯಮಯಿ ಗುರುಗಳನ್ನು ನಾವೂ ಸ್ಮರಣೆಮಾಡಿ ಭಕ್ತಿಯ ನಮನಗಳನ್ನು ಅರ್ಪಿಸಿ
ಅನುಗ್ರಹ ಪಡೆಯೋಣ.