ಟ್ವಿಟರ್ ನ ನೂತನ ಸಿಇಒ ಪರಾಗ್ ಅಗರ್ವಾಲ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ನಂತರ ಕಾರ್ಯಕಾರಿ ಮಂಡಳಿಯ ಪುನರ್ ರಚನೆ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪನಿಯ ವಿನ್ಯಾಸ ವಿಭಾಗದ ಮುಖ್ಯಸ್ಥ ಡಾಂಟ್ಲ್ ಡೇವಿಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮೈಕೆಲ್ ಮೋಂಟನೊ ರಾಜೀನಾಮೆ ನೀಡಿದ್ದಾರೆ. ಕಂಪನಿಯ ಉತ್ತರದಾಯಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ವಹಣೆಯ ಅಧ್ಯಕ್ಷತೆ ಸುಧಾರಿಸಲು ಪುನರ್ ರಚನೆಯಾಗುತ್ತದೆ ಎಂದು ಕಂಪನಿ ಹೇಳಿದೆ.
ಪರಾಗ್ ಅಗರ್ವಾಲ್ ಅವರು ಟ್ಟೀಟರ್ ನ ನೂತನ ಸಿಇಒ ಆದ ಬಳಿಕ “ಪ್ರತಿಭಾವಂತ ಭಾರತೀಯರು ವಿದೇಶಕ್ಕೆ ತೆರಳಿ ಅಲ್ಲಿನ ಕಂಪನಿಗಳ ಉನ್ನತ ಹುದ್ದೆಗಳನ್ನು ಹೊಂದುವುದು ತಪ್ಪಲ್ಲ” ಎಂದು ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೇ ಪರಾಗ್ ಅವರು ಭಾರತದ ಬ್ರ್ಯಾಂಡ್ ಗಳ ರಾಯಭಾರಿಗಳಂತೆ, ವಿದೇಶಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಭಾರತೀಯರ ಬಗ್ಗೆ ಕಳವಳಕ್ಕಿಂತ, ಅವರನ್ನು ಭಾರತಕ್ಕೆ ಮರಳುವಂತೆ ಒತ್ತಾಯಿಸುವುದಕ್ಕಿಂತ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲಿಸುವುದು ಸೂಕ್ತ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.