Wednesday, October 2, 2024
Wednesday, October 2, 2024

Backward Classes Welfare Department ದೀನದಲಿತರ ಪರ ಆಡಳಿತ ನೀಡಿದ ಅರಸು ಅಚ್ಚಳಿಯದ ನೆನಪಾಗಿದ್ದಾರೆ- ಡಾ.ಸಫ್ರಾಜ್ ಚಂದ್ರಗುತ್ತಿ

Date:

Backward Classes Welfare Department ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು ಕಾಯ್ದೆಯ ರೂಪ ಕೊಟ್ಟವರು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಎಂದು ಉಪನ್ಯಾಸಕಿ ಲೇಖಕ ಸಾಹಿತಿ ಸಫ್ರಾಜ್‌ಚಂದ್ರಗುತ್ತಿ ಹೇಳಿದರು.

ಅವರು ಸಾಗರದ ವರದಹಳ್ಳಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಪಿ.ಯು ವಿದ್ಯಾರ್ಥಿಗಳ ನಿಲಯದಲ್ಲಿ ಆಯೋಜಿಸಲಾಗಿದ್ದ ದಿ.ದೇವರಾಜ ಅರಸು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅರಸು ಅವರು ಮುಖ್ಯಮಂತ್ರಿಯಾಗದೇ ಇದ್ದರೇ ಭೂಸುಧಾರಣೆ ಕಾನೂನು ಜಾರಿಗೆ ಬರುತ್ತಿರಲಿಲ್ಲ.ಉಳುವವನೆ ಹೊಲದೊಡೆಯ ಎಂಬ ಹೆಸರಿನಲ್ಲಿ ರಾಜ್ಯದ ಗೇಣ ರೈತರಿಗೆ ಭೂಮಿಯ ಹಕ್ಕು ಕೊಡಿಸಿರುವ ಧೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅರಸು ಅವರ ಬಡವರ ದೀನ ದಲಿತರ ಪರವಾದ ಆಡಳಿತ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ದಾಖಲಾಗಿದೆ ಎಂದರು.

ಮೈಸೂರು ರಾಜ್ಯ ಎಂಬ ಹೆಸರನ್ನು ಬದಲಾಯಿಸಿ ಕರ್ನಾಟಕ ಎಂಬ ಮರುನಾಮಕರಣ ಮಾಡಿದವರು ಮಾಜಿಮುಖ್ಯಮಂತ್ರಿ ದೇವರಾಜು ಅರಸು ಅವರು ಆಡಳಿತ ಭಾಷೆಯನ್ನಾಗಿ ಕನ್ನಡ ಅಳವಡಿಸಿಕೊಳ್ಳಬೇಕು ಎಂದು ಆದೇಶಿಸಿರುವ ಅರಸು ಅವರ ಕನ್ನಡಪರ ಆಡಳಿತವನ್ನು ರಾಷ್ಟçಕವಿ ಕುವೆಂಪು ಸಂತೋಷಪಟ್ಟಿದ್ದರು ಎಂದು ಉಲ್ಲೇಖಿಸಿದರು.

ಅರಸು ಅವರು ಸ್ವತಃ ರೈತರಾಗಿದ್ದವರು. ಭೂಸುಧಾರಣೆ ಕಾಯ್ದೆ ಜಾರಿಗೆ ತಂದ ಅವರು ತಮ್ಮ ಒಡೆತನದಲ್ಲಿರುವ 28 ಎಕರೆ ಕೃಷಿಭೂಮಿಯಲ್ಲಿ ಗೇಣ ಮಾಡುತ್ತಿದ್ದ ಚಲುವಯ್ಯ ಎಂಬ ಉಳುವವನಿಗೆ ತಮ್ಮ ನಾಲ್ಕು ಎಕರೆ ಭೂಮಿಯನ್ನು ಬರೆದು ದಾಖಲೆ ಸಮೇತ ಹಸ್ತಾಂತರಿಸಿ ಈ ಭೂಮಿಗೆ ನೀನೆ ಒಡೆಯ ಎಂದು ಹಾರೈಸಿದ ವಿಶಾಲ ಹೃದಯವಂತ ನಾಯಕರಾಗಿದ್ದವರು ಎಂದು ಅರಸು ಚರಿತ್ರೆಯನ್ನು ಬಿಚ್ಚಿಟ್ಟರು.

Backward Classes Welfare Department ಕರ್ನಾಟಕದಲ್ಲಿ ಹಿಂದುಳಿದ ವರ್ಗದವರು ತಿನ್ನುವ ಅನ್ನದಲ್ಲಿ ಅರಸುರವರ ಋಣ ಇದೆ,ಅವರ ಆಡಳಿತದಲ್ಲಿ ಜೀತಪದ್ದತಿ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ 70 ಸಾವಿರ ಜೀತದಾಳುಗಳ ಬಿಡುಗಡೆಗೊಳಿಸಿರುವ ದೇವರಾಜ ಅರಸು ಅವರು ಈ ರಾಜ್ಯದ ಮೂರು ಮಾಜಿಮುಖ್ಯಮಂತ್ರಿಗಳನ್ನು ಬಂಗಾರಪ್ಪನವರು ಧರ್ಮಸಿಂಗ್,ಎಸ್.ಎಂ.ಕೃಷ್ಣ ಇವರುಗಳನ್ನು ರಾಜಕೀಯಕ್ಕೆ ಕರೆತಂದವರು ಅರಸು ಎನ್ನುವ ಅಂಶವನ್ನು ತಿಳಿಸಿದರು.
ಧೀಮಂತ ನಾಯಕ ಅರಸು ಅವರ ಹೃದಯದಲ್ಲಿ ತಾಯ್ತನ ಇತ್ತು.ನಿರಂತರ ಬಡವರ,ರೈತರ ದೀನ ದಲಿತರ ಪರವಾಗಿ ತುಡಿತ ಕಾಳಜಿ ಆಡಳಿತಾತ್ಮಕವಾಗಿಯೂ ಜಾರಿಯಾಗುತ್ತಿತ್ತು.ಅದರ ಫಲವಾಗಿ ರಾಜಕೀಯ ಹಾಗೂ ಕಾರ್ಯಾಂಗದಲ್ಲಿಯೂ ಹಿಂದುಳಿದವರು ಅಲ್ಪಸಂಖ್ಯಾತರುಗಳು ಸ್ಥಾನ-ಮಾನ ಪಡೆಯುವಲ್ಲಿ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ತಾಲ್ಲೂಕು ವಿಸ್ತರಣಾಧಿಕಾರಿ ಮಂಜಪ್ಪನವರು ಅಧ್ಯಕ್ಷತೆವಹಿಸಿದ್ದಾರೆ.ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಹಿತಕರ ಜೈನ್,ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ ಪಾಲಕರುಗಳಾದ ಚಂದ್ರಪ್ಪ, ಮಹೇಶ್‌ಕುಮಾರ್,ಶಿಲ್ಪಾ,ವೀರನಗೌಡ, ನಿಲಯ ಮೇಲ್ವಿಚಾರಕಿ ಪವಿತ್ರಾ ಟಿ.ಆರ್,ಆಶಾ, ಶ್ವೇತಾ.ಜೆ,ಕಾರ್ಯಕ್ರಮ ಆಯೋಜಕರು ನಿಲಯ ಪಾಲಕರಾದ ತಿಮ್ಮಪ್ಪ ಮೊದಲಾದವರು ಉಪಸ್ಥಿತರಿದ್ದರು.

ಕುಮುದಾ ಪ್ರಾರ್ಥಿಸಿ,ತಿಮ್ಮಪ್ಪ ಸ್ವಾಗತಿಸಿ,ಮನುಜ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...

CM Siddharamaih ಸಿದ್ಧರಾಮಯ್ಯ ರಾಜಿನಾಮೆ ಬೇಡ.ಬೆಂಬಲಿಸಿ ಜನಜಾಥಾ-‘ಅಹಿಂದ’ ಮಹೇಶ್

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬೇಡ....