ಕೋವಿಡ್ ಸೋಂಕು ತಗ್ಗುತ್ತಿದಂತೆಯೇ ಜನ ಲಸಿಕೆಯನ್ನೇ ಮರೆತಿದ್ದರು. ಮೊದಲ ಡೋಸ್ ಲಸಿಕೆ ಪಡೆದಿದ್ದವರು, ಎರಡನೇ ಡೋಸ್ ಹಾಕಿಸಿಕೊಳ್ಳಲು ಮನಸ್ಸು ಮಾಡಲಿಲ್ಲ. ಆದರೆ ಈಗ ಕೋವಿಡ್ ವೈರಾಣುವಿನ ರೂಪಾಂತರಿ ಒಮಿಕ್ರಾನ್ ಪ್ರತ್ಯಕ್ಷವಾಗುತ್ತಲ್ಲೇ ಲಸಿಕೆ ಪಡೆಯಲು ಮುಗಿಬಿದ್ದಿದ್ದಾರೆ.
ಕೋವಿಡ್ ಲಸಿಕೆಯ ಬಗ್ಗೆ ಉದಾಸೀನ ತೋರುತ್ತಿದ್ದ ಜನ ಈಗ ಲಸಿಕೆ ಪಡೆಯಲು ಸರದಿ ಸಾಲಿನಲ್ಲಿ ಕಾದು ನಿಲ್ಲುತ್ತಿದ್ದಾರೆ.
ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಮುನ್ನ ದಿನಕ್ಕೆ
ಒಂದು ಸಾವಿರ ಲಸಿಕೆ ನೀಡುತ್ತಿದ್ದೆವು. ಕಳೆದ ಎರಡು ತಿಂಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆ 100ಕ್ಕಿಂತ ಕಡಿಮೆಯಾಗಿತ್ತು.ಆದರೆ,ಕಳೆದ ಮೂರು ದಿನಗಳಿಂದ ಮತ್ತೆ ಏರಿಕೆಯಾಗುತ್ತಿದೆ. ಸದ್ಯ 500ಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದರು.
ಓಮಿಕ್ರಾನ್ ರೂಪಾಂತರಿಯ ಹಿನ್ನೆಲೆಯಲ್ಲಿ ಮೂರನೇ ಅಥವಾ ಬೂಸ್ಟರ್ ಡೋಸ್ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಆದರೆ ಬೂಸ್ಟರ್ ಡೋಸ್ ಗಿಂತಲೂ ಗರಿಷ್ಠ ಸಂಖ್ಯೆ ಜನರಿಗೆ 2 ನೇ ಡೋಸ್ ನೀಡುವುದರತ್ತಲೇ ಸರ್ಕಾರ ಗಮನಹರಿಸಬೇಕು. ಆ ಮೂಲಕ ಹೆಚ್ಚಿನ ಜನಸಂಖ್ಯೆಯಲ್ಲಿ ಪ್ರತಿರೋಧಕತೆ ಬೆಳೆಸಬೇಕು ಎಂದು ತಜ್ಞರ ಸಮಿತಿಯು ಸರಕಾರಕ್ಕೆ ಸಲಹೆ ನೀಡಿದೆ.
ಲಸಿಕೆಗೆ ಡಿಮ್ಯಾಂಡ್..
Date: