Wednesday, November 6, 2024
Wednesday, November 6, 2024

Akhil Bharatiya Sahitya Parishad Davangere ಸ್ವರಾಜ್ಯ ಸಿಕ್ಕಿದೆ ಆದರೆ ಸುರಾಜ್ಯ ಸಾಧ್ಯವಾಗಿಲ್ಲ- ಎಚ್.ಬಿ.ಮಂಜುನಾಥ್

Date:

Akhil Bharatiya Sahitya Parishad Davangere ಸ್ವತಂತ್ರ ಭಾರತವು ತನ್ನದೇ ಸಂವಿಧಾನ ರಚಿಸಿಕೊಂಡು ಸ್ವರಾಜ್ಯವೇನೋ ಆಯಿತು ಆದರೆ 76 ವರ್ಷಗಳು ಕಳೆದರೂ ಪೂರ್ಣ ‘ಸು ರಾಜ್ಯ’ವಾಗಲು ಇನ್ನೂ ಸಾಧ್ಯವಾಗಿಲ್ಲ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಕಳಕಳಿ ವ್ಯಕ್ತಪಡಿಸಿದರು.

ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಸಮಿತಿಯ ವತಿಯಿಂದ ರಾಜ್ಯಮಟ್ಟದ ಕವಿಗೋಷ್ಠಿ ಆಯ್ಕೆಗಾಗಿ “ಸ್ವರಾಜ್ಯ- ಸು ರಾಜ್ಯ” ಎಂಬ ವಿಷಯವಾಗಿ ಕವನ ವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರಜೆಗಳು ತಮ್ಮ ಹಕ್ಕುಗಳಿಗೆ ಕೊಟ್ಟಷ್ಟೆ ಪ್ರಾಮುಖ್ಯತೆಯನ್ನು ತಮ್ಮ ಕರ್ತವ್ಯಗಳಿಗೂ ಕೊಟ್ಟಾಗ ಮಾತ್ರ ಸುರಾಜ್ಯವಾಗಲು ಸಾಧ್ಯ, ಭ್ರಷ್ಟಾಚಾರ ಎಂಬುದು ಸು ರಾಜ್ಯ ಪರಿಕಲ್ಪನೆಗೆ ಕಡು ವೈರಿ ಇದ್ದಂತೆ ಎಂದರಲ್ಲದೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಹಾಗೂ ಅದರಲ್ಲಿ ದಾವಣಗೆರೆಯ ಪಾತ್ರದ ಅನೇಕ ಮಹತ್ತರ ಘಟ್ಟಗಳನ್ನು ಮಾತಿನಲ್ಲಿ ಚಿತ್ರಿಸಿದರು.

ಭಾರತವೀಗ ವಿಶ್ವದ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು ಆಂತರಿಕವಾಗಿ ಸುರಾಜ್ಯವಾಗಲು ಪ್ರತಿ ಪ್ರಜೆಯೂ ತಮ್ಮ ಪಾತ್ರ ಹಾಗೂ ಕರ್ತವ್ಯದ ಬಗ್ಗೆ ಅರಿತು ನಡೆಯಬೇಕಿದೆ ಎಂದರು. ಕವಿಗೋಷ್ಟಿಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಖ್ಯಾತ ಕವಿ ಲೇಖಕ ಮಹಾಂತೇಶ ನಿಟ್ಟೂರ್ ರವರು ಕವನ ರಚಿಸಬೇಕೆಂದೇ ತೊಡಗಿದಾಗ ಬಾರದ ಅನೇಕ ಉತ್ತಮ ರಚನೆಯು ಸಾಂದರ್ಭಿಕವಾಗಿ ತಕ್ಷಣ ರಚಿಸಿದಾಗ ಬರುವುದುಂಟು, ವಿಶ್ವ ಭ್ರಾತೃತ್ವ ಹೇಳಿರುವ ಭಾರತ ತನ್ನ ವಿವಿಧತೆಯಲ್ಲಿ ಏಕತೆಯನ್ನು ಬರೀ ಮಾತಾಗಿಸದೇ ಸಾಧಿಸಿರುವುದು ವಿಶ್ವದ ಅದ್ಭುತ ದಂತಿದೆ, ವಿಶ್ವಗುರು ಎಂದು ನಮ್ಮ ಬಗ್ಗೆ ನಾವು ಹೇಳುವುದಕ್ಕಿಂತ ಬೇರೆ ಬೇರೆ ದೇಶಗಳೇ ಹೇಳುತ್ತಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ ಎಂದರು.

Akhil Bharatiya Sahitya Parishad Davangere ಜಾತಿ ಮತಗಳ ಆಧಾರಿತ ಸ್ಥಾನಮಾನಗಳನ್ನು ನೀಡುವುದಕ್ಕಿಂತ ಪ್ರಾಮಾಣಿಕತೆ ಅರ್ಹತೆ ಆಧಾರವಾಗಿ ನೀಡುವುದು ಸುರಾಜ್ಯ ಸಾಕಾರಕ್ಕೆ ಅವಶ್ಯ ಎಂದರು.

ಸುನೀತಾ ಪ್ರಕಾಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸಹನಾ ಹಾಡಿದರು. ಪ್ರಶಾಂತ್ ಆಶಯ ನುಡಿಗಳನ್ನು ವ್ಯಕ್ತಪಡಿಸಿದರು. ದಾವಣಗೆರೆ ಹಾಗೂ ವಿವಿಧ ಜಿಲ್ಲೆಗಳಿಂದ ಬಂದ ಕವಿ ಕವ ಯತ್ರಿಯರು ಸ್ವರಚಿತ ಕವನಗಳನ್ನು ವಾಚಿಸಿದರು.

ಕವಯತ್ರಿ ವೀಣಾ ಕೃಷ್ಣಮೂರ್ತಿ, ತಾರೇಶ್, ಸುನೀಲ್,ಮಂಜುನಾಥ ಎಸ್ ಮುಂತಾದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಮಿತಿಯ ಅಮರೇಶ್ ವಂದನೆಗಳನ್ನು ಸಮರ್ಪಿಸಿದರು.

ನಗರದ ರಾಘವೇಂದ್ರ ಪಿಯು ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Janapada Academy 2023 ನೇ ವಾರ್ಷಿಕ ಜಾನಪದ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Janapada Academy 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ...

Department of Youth Empowerment and Sports ರಾಜ್ಯಮಟ್ಟದ ಯುವಜನೋತ್ಸವಕ್ಕೆ ನ.16 ರಂದು ಆಯ್ಕೆ ಪ್ರಕ್ರಿಯೆ

Department of Youth Empowerment and Sports ರಾಜ್ಯ ಮಟ್ಟದ ಯುವಜನೋತ್ಸವಕ್ಕೆ...

Shimoga District Legal Service Authority ನ.7 ರಂದು ತಂಬಾಕು ಮುಕ್ತ ಯುವ ಅಭಿಯಾನ 2.0

Shimoga District Legal Service Authority ಶಿವಮೊಗ್ಗ ಜಿಲ್ಲಾ ಕಾನೂನು...