Shivamogga Ambedkar Bhavan ಇಂದು ಅಂದರೆ ಆಗಸ್ಟ್ 27 ರಂದು ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಸಂಜೆ 6 ಗಂಟೆಗೆ ಹವ್ಯಾಸಿ ಗಾಯಕರ ಬಳಗದ ವತಿಯಿಂದ ಕನ್ನಡ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಾಯಕರ ಬಳಗದ ಸದಸ್ಯರಾದ ಬಿಸಿ ನೀಲರಾಜ ಅವರು ಹೇಳಿದ್ದಾರೆ.
Shivamogga Ambedkar Bhavan ಹಳೆಯ ಹಾಡುಗಳನ್ನು ಇಂದಿನ ಯುವ ಪೀಳಿಗೆ ಮರೆಯುತ್ತಿದೆ. ಅವುಗಳನ್ನ ಮರಿಯದೆ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕಿದೆ. ಹೆಚ್ಚು ಯುವಕ ಯುವತಿಯರು ಹವ್ಯಾಸಿ ಹಾಡುಗಾರರಾಗುವ ಮೂಲಕ ಈ ಹಳೆಯ ಗೀತೆಗಳನ್ನು ಹಾಡುವ ಮುಖಾಂತರ ಹಳೆಯ ಗೀತೆಗಳು ಪುನರ್ಜೀವ ನೀಡುವ ಕೆಲಸ ಆಗಬೇಕಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
