Shivamogga Smart City ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡುವ 2022ನೇ ಸಾಲಿನ ಅತ್ಯುತ್ತಮ ‘ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿ’ಯಲ್ಲಿ ಇಂದೋರ್ ಮೊದಲ ಸ್ಥಾನ ಪಡೆದುಕೊಂಡಿದೆ. ಅನುಕ್ರಮವಾಗಿ ಸೂರತ್ ಹಾಗೂ ಆಗ್ರಾ ನಗರಗಳಿಗೆ ಎರಡನೇ ಮತ್ತು ಮೂರನೇ ಸ್ಥಾನ ಸಿಕ್ಕಿದೆ. ಹಾಗೆಯೇ ರಾಜ್ಯದಿಂದ ಮೂರು ನಗರಗಳು ಪ್ರಶಸ್ತಿಗೆ ಭಾಜನವಾಗಿವೆ. ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗ, ನವೀನ ಕಲ್ಪನೆ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಹಾಗೂ ವಲಯ ಸ್ಮಾರ್ಟ್ ಸಿಟಿ ವಿಭಾಗದಲ್ಲಿ ಬೆಳಗಾವಿ ಆಯ್ಕೆಯಾಗಿದೆ
ಇತರೆ ವಿಭಿನ್ನ ವಿಭಾಗದಲ್ಲಿ ಇತರೆ ನಗರಗಳು 66 ಪ್ರಶಸ್ತಿಗಳನ್ನು ಪಡೆದಿವೆ. ಉತ್ತಮ ರಾಜ್ಯ ಪ್ರಶಸ್ತಿಯಲ್ಲಿ ಮಧ್ಯಪ್ರದೇಶಕ್ಕೆ ಮೊದಲ ಸ್ಥಾನ ಸಿಕ್ಕಿದೆ. ಎರಡನೇ ಸ್ಥಾನ ತಮಿಳುನಾಡಿಗೆ ಬಂದಿದೆ. ಇದೇ ರೀತಿ ಮೂರನೇ ಸ್ಥಾನವನ್ನು ರಾಜಸ್ಥಾನ ಹಾಗೂ ಉತ್ತರಪ್ರದೇಶ ಜಂಟಿಯಾಗಿ ಪಡೆದಿವೆ.
Shivamogga Smart City ಕೇಂದ್ರಾಡಳಿತ ವಿಭಾಗದಲ್ಲಿ ಚಂಡೀಗಢ ಮೊದಲ ಸ್ಥಾನವನ್ನು ಪಡೆದಿದೆ. ಇ-ಆಡಳಿತ ಸೇವೆಯನ್ನು ಗುರುತಿಸಿ ಉತ್ತಮ ಸರ್ಕಾರದ ವಿಭಾಗದಲ್ಲಿ ಮತ್ತೊಂದು ಪ್ರಶಸ್ತಿ ಕೊಡಲಾಗಿದೆ. ನರೇಂದ್ರ ಮೋದಿ ಅವರ ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿಯಲ್ಲಿ ಸುಮಾರು 100 ಸಿಟಿಗಳು ಅಭಿವೃದ್ದಿಯಾಗಿವೆ. ಇದರಲ್ಲಿ ರಾಜ್ಯದ ಮೂರು ನಗರಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.