R. Praggnanandhaa ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಚಾಂಪಿಯನ್ ಆಗಿದ್ದು, ಇದರೊಂದಿಗೆ ಚೊಚ್ಚಲ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದ ಪ್ರಜ್ಞಾನಂದ ಅವರಿಗೆ ನಿರಾಸೆಯಾಗಿದೆ.
ನಿನ್ನೆ ನಡೆದ ಚೆಸ್ ವಿಶ್ವಕಪ್ ಫೈನಲ್ನ 2ನೇ ಆಟವೂ ಸಹ ಡ್ರಾನಲ್ಲಿ ಅಂತ್ಯಗೊಂಡಿತ್ತು. ಭಾರತದ ಯುವ ಪ್ರತಿಭೆ ಆರ್. ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲ್‌ಸೆನ್ ಪಂದ್ಯ ಡ್ರಾ ಆದ ಕಾರಣ ಇಂದು ಟೈ ಬ್ರೇಕರ್ ಪಂದ್ಯ ನಡೆಯಿತು.
ಮಂಗಳವಾರ ನಡೆದ ಮೊದಲ ಫೈನಲ್ ಪಂದ್ಯವೂ ಸಹ ಡ್ರಾನಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ 2ನೇ ಪಂದ್ಯ ಡ್ರಾ ಆದ ಕಾರಣ ಟೈಬ್ರೇಕರ್ ಪಂದ್ಯದ ಮೂಲಕ ಫಲಿತಾಂಶ ನಿರ್ಧರವಾಗಲಿದೆ ಎಂದು ಹೇಳಲಾಗಿತ್ತು.
R. Praggnanandhaa ವಿಶ್ವನಾಥನ್ ಆನಂದ್ ನಂತರ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ ಎರಡನೇ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಎನ್ನುವ ಸಾಧನೆಯನ್ನು 18 ವರ್ಷದ ಯುವಕ ಮಾಡಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.
ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಪ್ರಜ್ಞಾನಂದ ಅವರು ಮ್ಯಾಗ್ನಸ್ ಕಾರ್ಲ್‌ಸೆನ್ ಎದುರು ಸೋಲನ್ನಪ್ಪುವ ಮೂಲಕ ರನ್‌ಅಪ್ ಆಗಿದ್ದಾರೆ.