Friday, December 5, 2025
Friday, December 5, 2025

Haratalu Halappa ಬಹು ವರ್ಷಗಳ ಬೇಡಿಕೆ ಈಡೇರಿಸಿದಕ್ಕೆ ಧನ್ಯವಾದಗಳು.-ಹರತಾಳು ಹಾಲಪ್ಪ.ಮಾಜಿ ಸಚಿವರು

Date:

Haratalu Halappa ಹೊಸನಗರ, ರಿಪ್ಪನಪೇಟೆ, ಹುಂಚ, ಕೋಣಂದೂರು ಹೀಗೆ ಸುತ್ತಮುತ್ತಲಿನ ಊರಿನ ಪ್ರಯಾಣಿಕರು ಅರಸಾಳು ರೈಲ್ವೆ ನಿಲ್ದಾಣ ಸಮೀಪವಿದ್ದರು ರೈಲಿಗಾಗಿ ಆನಂದಪುರ ಹೋಗುವ ಅನಿವಾರ್ಯತೆ ಇತ್ತು.

ಅರಸಾಳು (ಮಾಲ್ಗುಡಿ) ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡುವಂತೆ ಸಾರ್ವಜನಿಕರು ಹಾಗೂ ಪ್ರಯಾಣಿಕರ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಈ ವಿಷಯವನ್ನು ಸಂಸದರಾದ ಬಿ.ವೈ ರಾಘವೇಂದ್ರ ರವರ ಗಮನಕ್ಕೂ ತರಲಾಗಿತ್ತು. ಸಂಸದರ ವಿಶೇಷ ಪ್ರಯತ್ನದಿಂದ ಇನ್ನು ಮುಂದೆ (24-08-2023 ರಿಂದ) ದಿನಾ ನಾಲ್ಕು ಮುಖ್ಯ ರೈಲುಗಳು ಈ ನಿಲ್ದಾಣಗಳಲ್ಲಿ ನಿಲ್ಲಲಿವೆ.

ವೇಳಾಪಟ್ಟಿ ಹೀಗಿದೆ:

ಸಂಜೆಯ ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲು, ಅರಸಾಳು ನಿಲ್ದಾಣದಲ್ಲಿ ಸಂಜೆ 04:03 ಕ್ಕೆ.

​ಬೆಳಗಿನ ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು, ಅರಸಾಳು ನಿಲ್ದಾಣದಲ್ಲಿ 11:48 ಕ್ಕೆ.

ರಾತ್ರಿಯ ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲು, ಅರಸಾಳು ನಿಲ್ದಾಣದಲ್ಲಿ ರಾತ್ರಿ 10:05 ಕ್ಕೆ.

ಮುಂಜಾನೆಯ ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಅರಸಾಳು ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 5.45 ಕ್ಕೆ. ಇದು ಸದ್ಯದ ಮಾಹಿತಿ. ಪರಿಪೂರ್ಣ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆಯು ಸಧ್ಯದಲ್ಲಿಯೇ ಬಿಡುಗಡೆ ಮಾಡಲಿದೆ.

Haratalu Halappa ದಶಕಗಳ ಬೇಡಿಕೆ ಈಡೇರಿಸಿರುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರಿಗೆ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರಿಗೆ, ಸಂಸದರಾದ ಬಿ.ವೈ ರಾಘವೇಂದ್ರ ರವರಿಗೆ ಅನಂತಾನಂತ ಧನ್ಯವಾದಗಳು.

​ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ಈ ನಿಲುಗಡೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದುವರೆಸುವ ಸಾಧ್ಯತೆಗಳಿರುವುದರಿಂದ, ಪ್ರಯಾಣಿಕರು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...