Revenue Department ಅಕ್ರಮ ಭೂ ಮಂಜೂರಾತಿ ಸಂಬಂಧ ತನಿಖಾ ತಂಡವನ್ನು ರಚಿಸಿದ್ದು ಈ ನೆಪದಲ್ಲಿ ಬಡವರು, ದಲಿತರು ಕೂಲಿಕಾರ್ಮಿಕರಿಗೆ ಒಕ್ಕಲೆಬ್ಬಿಸದಂತೆ ತನಿಖೆ ನಡೆಸಬೇಕು ಎಂದು ರಾಜ್ಯ ಬ್ಲೂ ಆರ್ಮಿ ಸಂಘಟನೆ ಮುಖಂಡರುಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಬ್ಲೂ ಆರ್ಮಿಕ ಮುಖಂಡರುಗಳು ಭೂ ಅಕ್ರಮವನ್ನು ತನಿಖೆ ನಡೆಸಲು ತಂಡ ರಚಿಸಿದ್ದು ಸ್ವಾಗತಾರ್ಹ. ಇದರಲ್ಲಿ ಅಕ್ರಮ ಭೂ ಕಬಳಿಕೆದಾರರು ಬಾಗಿಯಾಗಿರುವ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಬ್ಲೂ ಆರ್ಮಿ ರಾಜ್ಯಾದ್ಯಕ್ಷ ಶೂದ್ರ ಶ್ರೀನಿವಾಸ್ ಕಡೂರು ತಾಲ್ಲೂಕಿನಲ್ಲಿ ಇದು ವರೆಗೂ ಅರ್ಹ ಫಲಾನುಭವಿಗಳಿಗೆ ಎಲ್ಲಾ ಸ್ಥಳೀಯ ಶಾಸಕರು ಸಾಗುವಳಿ ಚೀಟಿ ನೀಡುವಲ್ಲಿ ಶ್ರಮವಹಿಸಿದ್ದಾರೆ. ಈ ಭಾಗವು ಬರಪೀಡಿತ ಬಯಲು ಪ್ರದೇಶವಾಗಿದ್ದು ಸುಮಾರು ವರ್ಷಗಳಿಂದ ಜಮೀನು ಸಾಗು ಮಾಡಿಕೊಂಡ ಪರಿಣಾಮ ರೈತರಿಗೆ ಸಾಗುವಳಿ ಚೀಟಿ ದೊರೆತಿದೆ ಎಂದರು.
Revenue Department ಸ್ವಾತಂತ್ರ್ಯದ ನಂತರದಲ್ಲಿ ಕಡೂರು ತಾಲ್ಲೂಕಿನಲ್ಲಿ ಸಾಗುವಳಿ ಚೀಟಿ ನೀಡುತ್ತಾ ಬಂದಿದೆ. ಆದರೆ ದಿಢೀರ್ ಕಡೂರು ತಾಲ್ಲೂಕಿಗೆ ಬಂದಿರುವ ತನಿಖಾ ತಂಡ ಹುಲಿ ಸಂರಕ್ಷಣೆಗೆ ಜಮೀನು ಮೀಸಲಿಡಲಾಗಿದೆ ಎಂದು 2017 ರಿಂದಲೂ ತನಿಖೆ ನಡೆಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ತಾಲ್ಲೂಕು ಹಾಗೂ ಜಿಲ್ಲಾಡಳಿತ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ತನಿಖಾ ತಂಡ ರಚನೆ ಮಾಡಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಅಕ್ರಮವಾಗಿ ಭೂಮಿ ಮಂಜೂರಾಗಿದ್ದರೆ ಭೂಮಿಯನ್ನು ಸರ್ಕಾರ ವಾಪಸ್ ಪಡೆದು ತಪ್ಪಿತಸ್ಥ ಅಧಿಕಾರಿ ಗಳಿಗೆ ಶಿಕ್ಷೆ ನೀಡಲಿ. ಇದನ್ನು ಹೊರತುಪಡಿಸಿ ತನಿಖಾ ನೆಪದಲ್ಲಿ ಅರ್ಹ ಫಲಾನುಭವಿಗಳಿಗೆ ತೊಂದರೆ ನೀಡದಂತೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯಸಮ್ಮತ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಬಡವರಪರ ಎನ್ನುವ ಕಾಂಗ್ರೆಸ್ ಸರ್ಕಾರ ರೈತರ ಜಮೀನು ಕಿತ್ತುಕೊಳ್ಳುವುದನ್ನು ಸಂಘಟನೆ ತೀವ್ರ ಖಂಡಿ ಸುತ್ತದೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿ ಭೂ ಅಕ್ರಮ ನಡೆದಿದ್ದು ರಾಜ್ಯಾದ್ಯಂತ ಭೂಕಬಳಿಕೆ ತನಿಖೆ ನಡೆಸು ವಂತೆ ಒತ್ತಾಯಿಸಿದೆ. ಒಂದು ವೇಳೆ ಅರ್ಹ ರೈತರಿಗೆ ಅನ್ಯಾಯವಾದರೆ ಸಂಘಟನೆ ಉಗ್ರ ಹೋರಾಟ ರೂಪಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬ್ಲೂ ಆರ್ಮಿ ಜಿಲ್ಲಾದ್ಯಕ್ಷ ಕೆ.ವೈ.ವಾಸು, ತಾಲ್ಲೂಕು ಅಧ್ಯಕ್ಷ ಗಂಗಾರಾಜು, ಮುಖಂಡರು ಗಳಾದ ಸಗುನಪ್ಪ, ಹುಲ್ಲೇಹಳ್ಳಿ, ಬೀರೂರು ರುದ್ರಪ್ಪ, ಕಡೂರಹಳ್ಳಿ ಪ್ರಶಾಂತ್, ರಂಗಸ್ವಾಮಿ, ಕೇದಿಗೆರೆ ಬಸವರಾಜ, ಎಮ್ಮೆದೊಡ್ಡಿ ಪ್ರಕಾಶ್, ಬಾಣೂರು ಸುರೇಶ್, ತಿಮ್ಮಯ್ಯ, ನಂಜುಂಡ, ರಘು ಚಿಕ್ಕಂಗಳ ಮತ್ತಿತರರು ಹಾಜರಿದ್ದರು.