MLA Tammayya ನೂರಾರು ಸಂಖ್ಯೆಯಲ್ಲಿ ವಾಸಿಸುವ ಬಾಲಕ-ಬಾಲಕಿಯರ ಹಾಸ್ಟೆಲ್‌ನ ಕಟ್ಟಡ ಕಾಮಗಾರಿಯನ್ನು ಸಂಪೂರ್ಣ ಗುಣಮಟ್ಟದಿಂದ ಕೂಡಿರುವ ಮೂಲಕ ವಿದ್ಯಾರ್ಥಿಗಳ ಬಳಕೆಗೆ ಶೀಘ್ರವೇ ಪೂರೈಸಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕಮಗಳೂರು ನಗರದ ಬೇಲೂರು ರಸ್ತೆ ಸಮೀಪವಿರುವ ಮುಸ್ಲಿಂ ಹಾಸ್ಟೆಲ್‌ನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಗೊಳಗಾಗದೇ ಸೂಕ್ತ ರೀತಿಯಲ್ಲಿ ಕಾಮಗಾರಿ ಪೂರೈಸಬೇಕು ಎಂದು ಗೃಹ ಮಂಡಳಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಕೇಂದ್ರ ಮತ್ತು ರಾಜ್ಯಸರ್ಕಾರದ ಸಹಕಾರದೊಂದಿಗೆ ಅಲ್ಪಸಂಖ್ಯಾತರ ಬಾಲಕ-ಬಾಲಕಿಯರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಸುಮಾರು 9.5 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಕೆಲಸ ಪ್ರಾರಂಭವಾಗಿದೆ. ಸಂಬoಧ ಪಟ್ಟ ಅಧಿಕಾರಿಗಳು ಶೀಘ್ರವೇ ಕಾಮಗಾರಿ ಕೆಲಸವನ್ನು ಪೂರೈಸಿ ವಿದ್ಯಾರ್ಥಿಗಳ ಬಳಕೆಗೆ ಒದಗಿಸಿಕೊಡಬೇಕು ಎಂದು ಹೇಳಿದರು.
ಕಟ್ಟಡ ಕಾಮಗಾರಿ ಕೆಲಸಕ್ಕೆ ಪ್ರಸ್ತುತ 6 ಕೋಟಿ ರೂ. ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದೆ. ಉಳಿದ ಮೊತ್ತ ಬಿಡುಗಡೆಗೆ ಶೀಘ್ರದಲ್ಲೇ ಪ್ರಯತ್ನ ನಡೆಸಲಾಗುವುದು. ಈ ಸಂಬ0ಧ ಮುಸ್ಲೀಂ ಹಾಸ್ಟೆಲ್ ಸಮಿತಿ ಹಾಗೂ ಮುಖಂಡರುಗಳೊoದಿಗೆ ಬೆಂಗಳೂರಿಗೆ ನಿಯೋಗ ತೆರಳುವ ಮೂಲಕ ಸಂಬoಧಿಸಿದ ಸಚಿವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆಗೆ ಮುಂದಾಗಲಾಗುವುದು ಎಂದರು.
ತಮ್ಮ ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿ ವಾತಾವರಣ ಸೃಷ್ಟಿಸುವ ಸಲುವಾಗಿ ಪ್ರತಿಯೊಂದು ಧರ್ಮದವರಿಗೂ ಸರಿ ಸಮಾನವಾಗಿ ಕೆಲಸ ಮಾಡಲಾಗುತ್ತಿದೆ. ಇತರೆ ನಾಯಕರಂತೆ ಗೋವಾ, ತಮಿಳುನಾಡು ಉಸ್ತುವಾರಿ ವಹಿಸಿ ಕೊಳ್ಳದೇ ಸ್ವಕ್ಷೇತ್ರದಲ್ಲೇ ಬಹುತೇಕ ಸಮಯ ಕಳೆಯುವ ಮೂಲಕ ಕ್ಷೇತ್ರದ ಜನತೆಗೆ ಜವಾಬ್ದಾರಿ ಕೆಲಸ ಮಾಡುವ ಮೂಲಕ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಶಾಹಿದ್ ರಜ್ವಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಕಟ್ಟಡ ಕಾಮಗಾರಿ ಕೆಲಸವು ನಿಧಾನಗತಿಯಲ್ಲಿ ಸಾಗುತ್ತಿದೆ. ಕೂಡಲೇ ಶಾಸಕರು ಸಂಬoಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ಸಮುದಾಯದ ಹಾಸ್ಟೆಲ್‌ನ ಕಾಮಗಾರಿಯನ್ನು ಪೂರೈಸಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಹಾಸ್ಟೆಲ್ ಸಮಿತಿ ಅಧ್ಯಕ್ಷ ಹಾಗೂ ಜಾಗದ ದಾನಿ ಫರಾನ್ ಹುಸೇನ್ ಮಾತನಾಡಿ ಹಾಸ್ಟೆಲ್ ಕಟ್ಟಡ ಕಾಮಗಾರಿ ಕೆಲಸವು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
MLA Tammayya ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿ ಸಹಾಯಕ ಅಭಿಯಂತರರಾದ ಗೀತಾ, ರಕ್ಷಿತ್, ಮುಸ್ಲಿಂ ಹಾಸ್ಟೆಲ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರೆಹಮಾನ್, ಖಜಾಂಚಿ ವಸೀಂ ಜಮೀಲ್, ಕಾರ್ಯದರ್ಶಿ ಜಂಶೀದ್ ಆಲಿ ದಾವೂದ್, ಸದಸ್ಯರುಗಳಾದ ಬಷೀರ್ ಅಹ್ಮದ್, ಮಹಮ್ಮದ್ ದಾವೂದ್, ಫೈರೋಜ್ ಅಹ್ಮದ್, ಶಬ್ಬೀರ್ ಹುಸೇನ್, ಮುಖಂಡರುಗಳಾದ ಜಂಶೀದ್‌ಖಾನ್, ಅಪ್ಸರ್ ಅಹ್ಮದ್ ಮತ್ತಿತರರು ಹಾಜರಿದ್ದರು.