National Students’ Union of India ಹೊಳೆಹೊನ್ನೂರು ಸರ್ಕಲ್‍ನಲ್ಲಿದ್ದ ಗಾಂಧಿಪ್ರತಿಮೆಯನ್ನು ದ್ವಂಸಗೊಳಿಸಿ ದೇಶವಿರೋಧಿ ಕೃತ್ಯವನ್ನು ಕೆಲ ಕಿಡಿಗೇಡಿಗಳು ನಡೆಸಿದ್ದಾರೆ. ಈ ಕೃತ್ಯವನ್ನು ಶಿವಮೊಗ್ಗ ಗ್ರಾಮಾಂತರ ಎನ್.ಎಸ್.ಯು.ಐ. ತೀವ್ರವಾಗಿ ವಿರೋಧಿಸಿದೆ.
ಮಹಾತ್ಮಾಗಾಂಧಿ ವಿಶ್ವಶಾಂತಿಯನ್ನು ಬಯಸಿದವರು. ಹಾಗಾಗಿಯೇ ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ಶಾಂತಿಯ ಮಾರ್ಗದಿಂದಲೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟು ರಾಷ್ಟ್ರಪಿತ ಎನಿಸಿಕೊಂಡಿದ್ದಾರೆ.
ಈ ನೆಲದ ಸ್ವಾತಂತ್ರ್ಯ ಚಳುವಳಿಯ ಹಿನ್ನಲೆ ತಿಳಿಯದ, ಸಂವಿಧಾನ ಮತ್ತು ಕಾನೂನಿಗ ಬಗ್ಗೆ ಗೌರವ ಇರದ ಕಿಡಿಗೇಡಿಗಳು ನಡುರಾತ್ರಿಯಲ್ಲಿ ರಾಷ್ಟ್ರಪಿತನ ಪ್ರತಿಮೆಯನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ.
ಕಿಡಿಗೇಡಿಗಳ ಈ ಕೃತ್ಯದಿಂದ ನಮಗೆ ಆಘಾತವಾದಂತಾಗಿದ್ದು, ಸಂವಿಧಾನ ಮತ್ತು ಕಾನೂನಿಗ ಬಗ್ಗೆ ಗೌರವ ಇಲ್ಲದ ಕಿಡಿಗೇಡಿಗಳ ಕೃತ್ಯ ಕ್ಷಮಿಸಲಾಗದ್ದಾಗಿದೆ. ಸಮಾಜದಲ್ಲಿ ಶಾಂತಿಯನ್ನು ಕದಡುವ ವಿಧ್ವಂಸಕ ಶಕ್ತಿಗಳಿಂದ ಮಾತ್ರ ಇಂತಹ ಹೀನಕೃತ್ಯ ನಡೆಸಲು ಸಾಧ್ಯ.
ಜಿಲ್ಲಾ ರಕ್ಷಣಾಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು.
National Students’ Union of India ಕೂಡಲೇ ದೇಶದ್ರೋಹಿ ಕೃತ್ಯವನ್ನೆಸಗಿದ ಕಿಡಿಗೇಡಿಗಳನ್ನು ಬಂಧಿಸಬೇಕು. ರಾಷ್ಟ್ರಪಿತನ ಪ್ರತಿಮೆಗಾದ ಅಪಮಾನದಿಂದಾಗಿ ಹೊಳೆಹೊನ್ನೂರಿನಲ್ಲಿ ಬೂದಿಮುಚ್ಚಿದ ಕೆಂಡದ ವಾತಾವರಣವಿದ್ದು, ಯಾವುದೇ ರೀತಿಯ ಅಶಾಂತಿ ಸೃಷ್ಟಿಯಾಗದಂತೆ ಕಟ್ಟೆಚ್ಚರ ವಹಿಸಬೇಕು.
ಕಿಡಿಗೇಡಿಗಳನ್ನು ಬಂಧಿಸಿ, ಮುಂದಿನ ದಿನಗಳಲ್ಲಿ ಯಾರೊಬ್ಬರೂ ರಾಷ್ಟ್ರಪಿತ ಸೇರಿದಂತೆ ಯಾವುದೇ ಮಹಾನ್ ನಾಯಕರಿಗೆ ಅಪಮಾನವಾಗುವಂತೆ ನಡೆದುಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಲಾಯಿತು.
ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಜಯ, ಕಾರ್ಯಧ್ಯಕ್ಷ ರವಿಕಟಿಕೆರೆ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ J ಶೆಟ್ಟಿ, ಧನರಾಜ್, ಚಂದ್ರೋಜಿ ರಾವ್, ಪ್ರದೀಪ,ಅಶೋಕ, ಕೀರ್ತಿ, ಸಾಗರ್, ಸುಜನ್, ನಿಖಿಲಾ, ವಿಷ್ಣು, ಸೂರಜ್ ದೇವಿ ಕುಮಾರ್, ಕಾರ್ತಿಕ್, ಮಣಿ ಹಾಗೂ ಸಾಕಷ್ಟು ಕಾರ್ಯಕರ್ತರು ಇದ್ದರು.