Thursday, December 18, 2025
Thursday, December 18, 2025

Shivamogga Smart City Limited ಸ್ಮಾರ್ಟ್ ಸಿಟಿ ಕಾಮಗಾರಿ ಹಸ್ತಾಂತರದ ಬಗ್ಗೆ ಸಾರ್ವಜನಿಕ ಪ್ರಕಟಣೆ

Date:

Shivamogga Smart City Limited ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅನುಷ್ಠಾನಗೊಂಡಿರುವ ಕಾಮಗಾರಿಗಳ ಜಂಟಿ ಪರಿವೀಕ್ಷಣೆ ನಡೆಸಲಾಗುವುದು.

ಉಲ್ಲೇಖ (1)ರ ಮಂಜೂರಾತಿ ಅನುಸಾರ ಶಿವಮೊಗ್ಗ ಸ್ಮಾರ್ಟ್ ಸಿಟಿ, ಲಿಮಿಟೆಡ್ (SSCL) ವತಿಯಿಂದ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಪ್ಯಾಕೆಟ್ ಗಳಲ್ಲಿ ಆಯ್ಕೆ ವಾರ್ಡುಗಳಲ್ಲಿ ರಸ್ತೆ, ಚರಂಡಿ, ಮಟ್ ಪಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ್ ವೆನ್ಸಿ, ಸರ್ಕಲ್ ಅಭಿವೃದ್ಧಿ, ಶೌಚಾಲಯ ಇತ್ಯಾದಿಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ.

ಉಲ್ಲೇಖ (2)ರ ಪ್ರಕಾರ, ಸದರಿ ನಿರ್ಮಾಣ ಕಾಮಗಾರಿಗಳನ್ನು ಹಸ್ತಾಂತರಿಸಲು ಪತ್ರಿಸಲಾಗಿದ್ದು, ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ಉಲ್ಲೇಖ (3) ರ ಅನುಸಾರ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ, ಜಂಟಿ ಪರಿವೀಕ್ಷಣೆ ನಡೆಸಿ, ನ್ಯೂನ್ಯತೆ ಇದ್ದಲ್ಲಿ ಸರಿಪಡಿಸಿಕೊಂಡು ಹಸ್ತಾಂತರಿಸಿಕೊಳ್ಳಲು ನಿರ್ಣಯಿಸಿದ್ದು, ಉಲ್ಲೇಖ (4)ರ ಅನುಸಾರ ಹಂತ-ಹಂತವಾಗಿ ಜಂಟಿ ಪರಿವೀಕ್ಷಣೆ ಕೈಗೊಳ್ಳಲು ನಿರ್ಧರಿಸಲಾಗಿರುತ್ತದೆ.

Shivamogga Smart City Limited ಅದರಂತೆ, ಪ್ರಾಥಮಿಕ ಹಂತವಾಗಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅಳವಡಿಸಲಾದ ಭೂಗತ ಕೇಬಲ್, ಬೀದಿ ದೀಪದ ಕಂಬಗಳ ಸಂಬಂಧ ಮೆಸ್ಕಾಂ, ಶಿವಮೊಗ್ಗ ಮಹಾನಗರಪಾಲಿಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ವಾರ್ಡ್ ಸದಸ್ಯರುಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಗುತ್ತಿಗೆದಾರರ ಸಮ್ಮುಖದಲ್ಲಿ, ಈ ವೇಳಾಪಟ್ಟಿಯಂತೆ ಜಂಟಿ ಸ್ಥಳ ಪರಿಶೀಲನೆ, ಸಮೀಕ್ಷೆ ನಡೆಸಿ, ನ್ಯೂನ್ಯತೆ ಗುರುತಿಸಿ ನಂತರದ ದಿನದಲ್ಲಿ ಸರಿಪಡಿಸಿಕೊಳ್ಳಲು ನಿಯಮಾನುಸಾರ ಕ್ರಮವಿಡಲು ಉದ್ದೇಶಿಸಲಾಗಿದೆ.

ದಿನಾಂಕ: 22/08/2023 ರಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಪ್ಯಾಕೇಟ್ -1 – ದುರ್ಗಿಗುಡಿ, ಸವರ್‌ ಲೈನ್‌ ರೋಡ್ ದೇವಸ್ಥಾನದ ಹತ್ತಿರ, ಗಾರ್ಡನ್‌ ಏರಿಯಾ ಗೌರವ್ ಲಾಡ್ಜ್‌ ಎದುರುಗಡೆ, ರ್ಗಾನ್ ಏರಿಯಾ ಸ್ಕಾಪ್ ಪಾಪ್‌ ಎದುರುಗಡೆ,ಜ್ಯೂಯೆಲ್‌ರಾಕ್‌ರಸ್ತೆ, ಪಂಚಮುಖಿ ಆಂಜನೇಯದೇವಸ್ಥಾನದ ಹತ್ತಿರ, ಮಿಷನ್‌ ಕಾಂಪೌಂಡ್, ಪ್ರೈವೇಟ್ ಬಸ್‌ ಸ್ಟ್ಯಾಂಡ್‌ ಎದುರು ಈ ಸ್ಥಳಗಳಲ್ಲಿ ಸಾರ್ವಜನಿಕರನ್ನು ಮೂಖತಃ ಭೇಟಿ ನೀಡಲಾಗುವುದು.

ದಿನಾಂಕ: 23/08/2023 ರಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಪ್ಯಾಕೇಟ್-2 (ಎ) :-ಜೈಲ್‌ ರೋಡ್, ಎಎನ್‌ಕೆ ರಸ್ತೆ, ವೆಂಕಟೇಶ್‌ ನಗರ, ಗಾಂಧಿ ನಗರ, ಚೆನ್ನಪ್ಪಲೇಔಟ್, ರವೀಂದನಗರ, ಅಚ್ಯುತರಾವ್‌ ಲೇಔಟ್, ಗಾಂಧಿನಗರ- ಮುಖ್ಯರಸ್ತೆ,

  • ಪ್ಯಾಕೇಜ್-2 (ಬಿ) :- ಶರಾವತಿ ನಗರ, ಹೊಸಮನೆ, ಕುವೆಂಪು ರಸ್ತೆ, ಲಾಸ್ಟ್ ,ಮೈಲ್ ಕನೆಕ್ಟಿವಿಟಿ (ILMC) ಇಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಾಗುವುದು.

24.08.2023 ರಂದು ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೆ

ಪ್ಯಾಕೇಜ್ (ಎ) :- ಜಯನಗರ, ಬಸವನಗಾಡಿ, ವಿನಾಯಕ ನಗರ, ಹನುಮರಾನಗರ,

25.08.2023 ರಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ
ಪ್ಯಾರೇಜ್-3 (ಬಿ) – ಸೋಮಯ್ಯ ಲೇಔಟ್, ಬಾಪೂಜಿನಗರ, ಬ್ಯಾಂಕ್, ಮೊಹಲ್ಲಾ, ನೋಡಿರಸ್ತೆ, ಎಫ್ ರಾಮಣ್ಣ ರಸ್ತೆ, ಎಸ್‌ ಜುಮ್ ರಸ್ತೆ, ಗುಂಡಪ್ಪ ಶೆಡ್, ಶೇಷಾದ್ರಿಪುರಂ ನಲ್ಲಿ ಸಾರ್ವಜನಿಕನ್ನು ಭೇಟಿ ಮಾಡಲಾಗುವುದು.

ದಯಮಾಡಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ನಿರ್ವಹಿಸಿದ ಭೂಗತ ಕೇಬಲ್, ಬೀದಿದೀಪ ಕಂಬಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ದೂರು, ಸಮಸ್ಯೆ ಇದ್ದಲಿ ಲಿಖಿತವಾಗಿಯಾಗಲಿ ಅಥವಾ ಸದರಿ ದಿನ ಮತ್ತು ಸೂಚಿತ ಸಮಯದಂದು ಸ್ಥಳದಲ್ಲಿ ಹಾಜರಿದ್ದಾಗಲಿ ಪರಿವೀಕ್ಷಣೆಗೆ ಸಹಕರಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...

Department of Agriculture 2026 ಜನವರಿ 6. ಕೃಷಿ ಇಲಾಖೆಯಿಂದ “ಸಿರಿಧಾನ್ಯ & ಮರೆತು ಹೋದ ಖಾದ್ಯಗಳ ಪಾಕ ತಯಾರಿ” ಸ್ಪರ್ಧೆ

Department of Agriculture ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ...

Shivamogga Police ಶಿಕಾರಿಪುರ- ಚುರ್ಚುಗುಂಡಿಯಿಂದ ಯುವಕ ನಾಪತ್ತೆ, ಪೊಲೀಸ್ ಪ್ರಕಟಣೆ

Shivamogga Police ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...