Tuesday, November 26, 2024
Tuesday, November 26, 2024

ಸಾವಯವ ಸಿರಿಧಾನ್ಯ ಮೇಳ

Date:

ಅಧಿಕಾರಿಗಳಲ್ಲಿಯೂ ಕೃಷಿ ಬಗ್ಗೆ ಆಸಕ್ತಿ ರೈತೋಪಯೋಗಿ ಭಾವನೆಯಿರುವುದು ಹೆಮ್ಮೆಯ ವಿಷಯವೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಗಳ ಸಂಘದಿಂದ ಕೃಷಿ ಇಲಾಖೆ,ಕೃಷಿಕ ಸಮಾಜದ ಸಹಯೋಗದಲ್ಲಿ “ಸಾವಯವ ಮತ್ತು ಸಿರಿಧಾನ್ಯ” ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಬಹುತೇಕ ಕೆಎಎಸ್ ಅಧಿಕಾರಿಗಳೆಲ್ಲ ನಮ್ಮ ಮಣ್ಣಿನ ಮಕ್ಕಳೇ.ಅಧಿಕಾರಿಗಳಲ್ಲಿಯೂ ಕೃಷಿ ಅದರಲ್ಲಿಯೂ ಸಿರಿಧಾನ್ಯ ಸಾವಯವ ಬಗ್ಗೆ ಆಸಕ್ತಿ ಬಂದಿರುವುದು ಸಂತಸದ ವಿಚಾರ‌.ಸಿರಿಧಾನ್ಯದ ಸಿರಿತನ ಹೆಚ್ಚುತ್ತಿದೆ.ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಆಹಾರದ ಸಿದ್ಧ ಔಷಧಿಯಾಗಿದೆ.ಸಾವಯವ ಬಿಟ್ಟು ಹೆಚ್ಚು ರಾಸಾಯನಿಕ ವಸ್ತು ಬಳಕೆಯಿಂದ ರೈತರು ಹೆಚ್ಚು ಆರೋಗ್ಯಕ್ಕೆ ಖರ್ಚು ಮಾಡುವಂತಹ ಸ್ಥಿತಿ ಉದ್ಭವಿಸಿದೆ.ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಸಿಗುತ್ತಿದ್ದು,ಸರ್ಕಾರ ಕೂಡ ಈ ಜನರ ಆರೋಗ್ಯದ ಹಿತದೃಷ್ಟಿಯಿಂದ ಬಹುಪಯೋಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಕೃಷಿ ಖುಷಿಯಾಗಬೇಕು.ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕೆಂದರು.

ಮೇಳದಲ್ಲಿ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿನಿಗಳು ಪ್ರದರ್ಶನಕ್ಕಿಟ್ಟ ಸಾವಯವ ಕೋಕಮ್ ಸೇರಿದಂತೆ ಮತ್ತಿತ್ತರ ಸಿರಿಧಾನ್ಯದ ಖಾದ್ಯಗಳ ಸ್ವಾದಿಸಿ ಪ್ರೋತ್ಸಾಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...