News Week
Magazine PRO

Company

Friday, April 18, 2025

Indian Medical Association ಇಂದಿನ ಸಮಾಜಕ್ಕೆ ಅಂಗಾಂಗ ದಾನದ ಅವಶ್ಯಕತೆ ಇದೆ – ಶ್ರೀಮತಿ ಶ್ರೀಕಲಾ ಜೆ.ಶೆಟ್ಟಿ

Date:

Indian Medical Association ವಿಶ್ವದಾದ್ಯಂತ ಪ್ರತೀ ವರ್ಷ ಆಗಸ್ಟ್ 13ನೇ ದಿನವನ್ನು ಅಂಗಾಂಗ ದಾನದ ದಿನವನ್ನಾಗಿ ಆಚರಿಸಲಾಗುತ್ತದೆ. ಅಂಗಾಂಗ ವೈಫಲ್ಯದಿಂದ ಬಳಲುವವರಿಗೆ ಅಂಗಾಂಗ ದಾನ ಹೊಸ ಬದುಕನ್ನು ನೀಡುತ್ತದೆ. ಒಬ್ಬ ಮೃತದಾನಿ ಎಂಟು ಜನರಿಗೆ ಜೀವದಾನ ಮಾಡಬಹುದಲ್ಲದೆ 75 ಜನರ ಜೀವನದಲ್ಲಿ ಸುಧಾರಣೆಯನ್ನು ತರಬಹುದಾಗಿದೆ. ಈ ಮಹತ್ವವನ್ನು ಸಾರುವ ದಿನವಿದು. ಸಾವಿನ ನಂತರವೂ ಬದುಕನ್ನು ಸಂಭ್ರಮಿಸುವ ಈ ಪುನ್ಯ ಕಾರ್ಯದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವನ್ನು ಮೂಡಿಸಿ ಅದರ ಬಗೆಗಿನ ತಪ್ಪು ಕಲ್ಪನೆಗಳನ್ನು, ಪೂರ್ವಗ್ರಹಗಳನ್ನು ನಿವಾರಿಸಿ ಅಂಗಾಂಗ ದಾನಕ್ಕೆ ಪ್ರೇರೇಪಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.

ಈ ವರ್ಷದ ಧ್ಯೇಯ ವಾಕ್ಯ: “ಅಂಗಾಂಗ ದಾನ ಮಾಡಿ; ಜೀವಗಳನ್ನು ಉಳಿಸಿ”. ಶಿವಮೊಗ್ಗದ ಶ್ರೀಮತಿ ಶ್ರೀಕಲಾ ಶೆಟ್ಟಿ ಇವರು ಹತ್ತು ವರ್ಷಗಳ ಹಿಂದೆಯೇ ತಮ್ಮ ಲಿವರನ್ನು ನಾದಿನಿಯ ಮಗಳಿಗೆ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಇಂತಹ ದಾನಿಯನ್ನು ಈ ಅಂಗಾಂಗ ದಾನ ದಿನದಂದು ಪರಿಚಯಿಸಲು ಹೆಮ್ಮೆಯಾಗುತ್ತದೆ.

ಶ್ರೀಮತಿ ಶ್ರೀಕಲಾ ಶೆಟ್ಟಿರವರಿಗೆ ಸ್ವಾಗತ. ನಿಮ್ಮ ಪರಿಚಯವನ್ನು… ಬಾಲ್ಯ ಶಿಕ್ಷಣ ಹವ್ಯಾಸಗಳ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?

ನಾನು ಶ್ರೀಕಲಾ ಶೆಟ್ಟಿ.
ಹುಟ್ಟಿದ್ದು, ಬೆಳೆದಿದ್ದು ಬೊಂಬಾಯಿಯಲ್ಲಿ. ನನ್ನ ಶಿಕ್ಷಣವು ಅಲ್ಲೇ ಆಯಿತು. ಮುಂಬೈ ಯೂನಿವರ್ಸಿಟಿಯಲ್ಲಿ ಎಂಎ ಸೋಷಿಯಾಲಜಿ ಮಾಡಿದ್ದೇನೆ. ಆರೋಗ್ಯ, ವ್ಯಾಯಾಮಗಳ ಬಗ್ಗೆ ಯಾವಾಗಲೂ ಕಾಳಜಿ ಇತ್ತು. ವಾಲಿಬಾಲ್ ಕ್ಯಾಪ್ಟನ್ ಆಗಿದ್ದೆ. ಚಾರಣದ ಸೊಸೈಟಿಯ ಕಾರ್ಯದರ್ಶಿಯೂ ಆಗಿದ್ದೆ. ಈಗಲೂ ಯೋಗ ಮತ್ತು ವ್ಯಾಯಾಮದ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ಹಾತೊರೆಯುತ್ತೇನೆ. ಡಾ|| ಜೈ ಕುಮಾರ್ ಶೆಟ್ಟಿ ಅವರೊಂದಿಗೆ ಮದುವೆಯಾದ ಮೇಲೆ 1994ರಲ್ಲಿ ಶಿವಮೊಗ್ಗಕ್ಕೆ ಬಂದು ನೆಲೆಸಿದೆ. ಪತಿ ಸ್ತ್ರೀರೋಗ ತಜ್ಞರು. ನನಗೊಬ್ಬಳೇ ಮಗಳು – ಡಾ|| ಸೃಷ್ಟಿ ಶೆಟ್ಟಿ. ಆಕೆ ಫಿಸಿಷಿಯನ್.

ಈ ಅಂಗಾಂಗ ದಾನದ ಬಗ್ಗೆ, ನೀವು ಮೊದಲು ಕೇಳಿದ್ದು ಯಾವಾಗ?

ನನಗೆ ಮೃತ ವ್ಯಕ್ತಿಯ ಅಂಗಾಂಗ ದಾನದ ಬಗ್ಗೆ ಚಿಕ್ಕ ವಯಸ್ಸಿನಲ್ಲಿ ಕೇಳಿ ಗೊತ್ತಿತ್ತು. ಕಿಡ್ನಿ ಮತ್ತು ಕಣ್ಣು ದಾನದ ಬಗ್ಗೆ ಮಾಧ್ಯಮಗಳ ಮೂಲಕ ಓದಿ ಕೇಳಿ ತಿಳಿದುಕೊಂಡಿದ್ದೆ ಆದರೆ ಲಿವರ್ ದಾನದ ಬಗ್ಗೆ ಏನೂ ಗೊತ್ತಿರಲಿಲ್ಲ.

ನೀವೇ ಅಂಗಾಂಗ ದಾನ ಮಾಡುವ ಸಂದರ್ಭ ಒದಗಿ ಬಂದದ್ದು ಹೇಗೆ?

Indian Medical Association ಹತ್ತು ವರ್ಷಗಳ ಹಿಂದೆ, ನನ್ನ ಪತಿಯ ಅಕ್ಕನ ಮಗಳು ಜಾಂಡೀಸ್ ಖಾಯಿಲೆಗೆ ತುತ್ತಾಗಿ ಚೆನ್ನೈನ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಳು. ಅವಳನ್ನು ನೋಡಿ ಬರಲು ಹೋಗಿದ್ದೆವು. ಅಲ್ಲಿನ ವೈದ್ಯರು ಆಕೆ ಎಂಡ್ ಸ್ಟೇಜ್ ಲಿವರ್ ಕಾಯಿಲೆಯಲ್ಲಿ ಇದ್ದಾಳೆಂದು ನಮಗೆ ತಿಳಿಸಿದಾಗ ಅಘಾತವಾಯಿತು. ಆಕಗೆ ಹೊಸ ಲಿವರ್‌ನ ಅವಶ್ಯಕತೆ ಇದೆ ಎಂತಲೂ, ಹೊಸ ಲಿವರ್ ಒಂದೇ ಅವಳನ್ನು ಬದುಕುಳಿಸುವ ಮಾರ್ಗವೆಂದು ತಿಳಿಸಿಬಿಟ್ಟರು. ರಿಜಿಸ್ಟರ್ ಮಾಡಿಸಿ ದಾನಿಗಳಿಗೆ ಕಾಯುವ ಆಪ್ಷನ್ ಅನ್ನು ಸೂಚಿಸಿದರು. ಆದರೆ ಇದು ಒಂದು ವರ್ಷಕ್ಕೂ ಮಿಗಿಲಾಗಿ ಕಾಯಬೇಕಾಗಬಹುದೆಂದೂ ಅಷ್ಟರಲ್ಲಿ ಅವಳ ಸ್ಥಿತಿ ವಿಷಮಗೊಂಡೀತು ಎಂದೂ ತಿಳಿಸಿದರು. ಆಗಲೇ ನನಗೆ ಜೀವಂತ ವ್ಯಕ್ತಿಯು ತನ್ನ ಲಿವರ್ ದಾನ ಮಾಡಬಹುದು ಎಂಬುದರ ಬಗ್ಗೆ ತಿಳಿದಿದ್ದು. ಆಗ ನಾನು ಮತ್ತು ಕೆಲವರು ಲಿವರ್ ದಾನಕ್ಕೆ ಮುಂದಾದೆವು. ನಮ್ಮೆಲ್ಲರ ರಕ್ತಪರೀಕ್ಷೆಗಳು, ಬಯಾಪ್ಸಿಗಳು ಎಲ್ಲವೂ ನಡೆದು, ಕಡೆಗೆ ನನ್ನ ಲಿವರ್ ಒಂದೇ ಆಕೆಯ ಲಿವರ್‌ನೊಂದಿಗೆ ಮ್ಯಾಚ್ ಆಗುತ್ತದೆ ಎಂದು ತಿಳಿಸಿದರು.

ನಿಮ್ಮ ಆಪ್ತ ಕುಟುಂಬದವರ ಅಂದರೆ ಪತಿ, ಒಬ್ಬಳೇ ಮಗಳು ಸೃಷ್ಟಿಯ ಪ್ರತಿಕ್ರಿಯೆ ಹೇಗಿತ್ತು?

ನನ್ನ ಪತಿಗೆ ಮೊದಲು ಆಶ್ಚರ್ಯವಾಗಿತ್ತು ಯಾವುದೋ ಭಾವಾವೇಶಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಭಾವಿಸಿದ್ದರು. ನಾನು ನಿರ್ಧಾರ ಹಿಂತೆಗೆದುಕೊಳ್ಳಬಹುದೆAದೂ ಆಶಿಸಿದ್ದರು. ನಾನು ನಿರ್ಧಾರ ಬದಲಾಯಿಸದೆ ಇದ್ದಾಗ ಚಿಂತೆಗೀಡಾದರು. ಕಾಂಪ್ಲಿಕೇಷನ್‌ಗಳ ಬಗ್ಗೆ ಪೂರ್ಣ ತಿಳುವಳಿಕೆ ಇಲ್ಲದೆ ಈಗ ಕೊಟ್ಟು ಆನಂತರ ನಾನು ಪರಿತಪಿಸಬಾರದೆಂದು ಪರಿಪರಿಯಾಗಿ ಬೇಡಿಕೊಂಡರು. ನಾನು ವೈದ್ಯಕೀಯ ಓದಿಲ್ಲದಿದ್ದರೂ ಆ ದಾನದಿಂದ ಒದಗಬಹುದಾದ ರಿಸ್ಕ್ಗಳ ಬಗ್ಗೆ ಸಂಪೂರ್ಣವಾಗಿ ಅರಿತಿದ್ದೆ. ಆ ರಿಸ್ಕ್ಗಳು ಗೌಣವೆಂದೂ ಅರ್ಥ ಮಾಡಿಕೊಂಡಿದ್ದೆ. ನಮ್ಮ ಕುಟುಂಬದ ಗೆಳೆಯರೂ ಕೂಡ ನನ್ನನ್ನು ತಡೆಯಲು ಪ್ರಯತ್ನಿಸಿದ್ದರು. ನನ್ನ ಮಗಳೊಬ್ಬಳೇ ನನ್ನ ನಿರ್ಧಾರವನ್ನು ಪೂರ್ಣ ಮನಸ್ಸಿನಿಂದ ಬೆಂಬಲಿಸಿದವಳು. ಅವಳು ಕೇಳಿದ್ದು ಒಂದೇ ಪ್ರಶ್ನೆ: ‘ಅವಳ ಜಾಗದಲ್ಲಿ ನಾನಿದ್ದಿದ್ದರೆ’? ಎಂದು. ನನಗೆ ಧೈರ್ಯ ತುಂಬಿ ಶಾರ್ಜಾಗೆ ಪ್ರಯಾಣ ಬೆಳೆಸಿದಳು. ಅವಳು ಅಂತರಾಷ್ಟ್ರೀಯ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೋಗುತ್ತಿದ್ದಳು.

ಈ ಶಸ್ತ್ರಚಿಕಿತ್ಸೆಯ ಸಾಧಕ ಬಾಧಕಗಳ ಸಂಪೂರ್ಣ ಅರಿವಿತ್ತೆ ನಿಮಗೆ? ಯಾರಾದರೂ ತಿಳಿಸಿ ಹೇಳಿದ್ದರೇ? ಹಾಗೆಯೇ ಆ ಪ್ರೊಸಿಜರ್‌ಗಳ ಬಗ್ಗೆ ಒಂದು ಕಿರು ನೋಟ ಕೊಡಲು ಸಾಧ್ಯವೇ?

ಹೌದು ಇತ್ತು. ಸಂಪೂರ್ಣ ಅರಿವಿತ್ತು. ನೋಡಿ ಜೀವನದಲ್ಲಿ ಎಲ್ಲವೂ… ಬರೀ ಶೇರ್ ಮಾರ್ಕೆಟ್‌ನಲ್ಲಿ ಅಲ್ಲ… ಎಲ್ಲವೂ ರಿಸ್ಕ್ ಬೆನಿಪಿಟ್ ಬ್ಯಾಲೆನ್ಸ್ ಮೇಲೆ ಹೋಗೋದು ಒಂದನ್ನ ಪಡೆದುಕೊಳ್ಳಬೇಕಾದರೆ ಮತ್ತೊಂದನ್ನು ಬಿಡಬೇಕಾಗುತ್ತದೆ ಅಲ್ಲವೇ? ಪ್ರೊಸಿಜರ್ ಬಗ್ಗೆ ಹೇಳುವುದಾದರೆ ಅಂಗಾAಗದ ಅಗತ್ಯವಿರುವ ವ್ಯಕ್ತಿ ಮೊದಲೇ ಅಂಗಾಂಗ ಕಸಿಯ ಲಿಸ್ಟ್ನಲ್ಲಿ ಇರುತ್ತಾರೆ. ಇವರ ಬ್ಲಡ್ ಗ್ರೂಪ್, ಟಿಶ್ಯು ಆಂಟಿ ಬಾಡಿ ಮತ್ತು ಹಲವು ಟೆಸ್ಟ÷್ಗಳಿಗೆ ಹೊಂದಾಣ ಕೆಯಾಗುವ ವ್ಯಕ್ತಿಯ ಅಂಗಾಂಗಗಳು ದೇಹದ ಹೊರಗೆ ನಾಲ್ಕು ಗಂಟೆಗಿಂತ ಹೆಚ್ಚು ಇದ್ದರೆ ಹಾಳಾಗುತ್ತವಲ್ಲ ಅದಕ್ಕೆ. ಇತ್ತ ಜೀವಂತ ಡೋನರ್ ಸಿಕ್ಕಿದರೆ ಸಂಪೂರ್ಣ ಚೆಕಪ್ ಆಗಿರುತ್ತದೆ. ಆತನ ದೈಹಿಕ, ಮಾನಸಿಕ ಸ್ವಾಸ್ಥö್ಯದ ಪರೀಕ್ಷೆ ಮಾಡುತ್ತಾರೆ. ಸಾಮಾಜಿಕ ಸ್ಥಿತಿಗತಿಯನ್ನು ಅಳೆಯುತ್ತಾರೆ. ಯಾವುದಾದರೂ ಒತ್ತಾಯಕ್ಕೆ, ಆಮೀಷಕ್ಕೆ ಮಣ ದಿದ್ದೇವೆಯೇ ಎ೦ದು ಬಾರಿ ಬಾರಿ ಚೆಕ್ ಮಾಡುತ್ತಾರೆ. ಮೊದಲು ಕೂಲ೦ಕುಶವಾಗಿ ಶಸ್ತçಚಿಕಿತ್ಸೆಯ ಬಗ್ಗೆ ಅದರ ಕಾ೦ಪ್ಲಿಕೇಶನ್ಗಳು ಇದರ ಬಗ್ಗೆ ವಿವರಿಸಿ ಹೇಳುತ್ತಾರೆ. ಇದಕ್ಕೆಲ್ಲ ಒಪ್ಪಿದ ಮೇಲೂ ಮತ್ತೆ ಬೇರೊ೦ದು ಬೋರ್ಡ್ ಸದಸ್ಯರು ಅದರಲ್ಲಿ-ಡಾಕ್ಟರ್ ಗಳು ವಕೀಲರು ಸೈಕಾಲಜಿಸ್ಟ್, ಜಡ್ಜ್, ಪೋಲಿಸ್, ಮಾನವ ಹಕ್ಕು ಆಯೋಗದ ಸದಸ್ಯರು ಹೀಗೆ ಹಲವು ಗಣ್ಯರು ಸೇರಿ ಹಲವಾರು ಸುತ್ತು ಪ್ರಶ್ನೆಗಳಿ೦ದ ನಮಗೆ ಕಾ೦ಪ್ಲಿಕೇಶನ್ ಗಳ ಬಗ್ಗೆ ಎಷ್ಟರ ಮಟ್ಟಿಗೆ ತಿಳಿದಿದೆ, ನಾವೇನು ಅರ್ಥ ಮಾಡಿಕೊ೦ಡಿದ್ದೇವೆ, ಅದನ್ನು ಸರಿಯಾಗಿ ಗ್ರಹಿಸಿದ್ದೇವೆಯೇ ಎಂದು ಅಳೆದು ಒಪ್ಪಿಗೆ ಸೂಚಿಸುತ್ತಾರೆ. ಇಷ್ಟೆಲ್ಲಾ ಆದಮೇಲೆ ಓಟಿಗೆ ಕರೆದುಕೊಳ್ಳುವ ಮುನ್ನವೂ ನಮಗೆ ಮತ್ತೊಮ್ಮೆ ಹಿ೦ತೆಗೆಯುವ ಮನಸ್ಸಿದ್ದರೆ ಅದಕ್ಕೂ ಅವಕಾಶ ಮಾಡಿಕೊಡುತ್ತಾರೆ.

ಈ ಸಂದರ್ಭದಲ್ಲಿ ನಾನು ಚೆನೈನ ಗ್ಲೋಬಲ್ ಆಸ್ಪತ್ರೆಯನ್ನೂ, ವಿಶ್ವ ವಿಖ್ಯಾತ ಕಸಿ ಸರ್ಜನ್ ಡಾ|| ಮೊಹಮ್ಮದ್ ರೇಲಾ ರವರನ್ನು ಸ್ಮರಿಸಲೇಬೇಕು. ನಮಗೆ ಖುದ್ದು ನಿ೦ತು ಮಾರ್ಗದರ್ಶನ ಧೈರ್ಯ, ಸಾಂತ್ವನ ನೀಡಿದರು.

ಯಾರಾದರೂ ಡೋನರ್ ಆಗಬಹುದೇ?

ಈಗ ಆಗಬಹುದು. ಮು೦ಚೆ ಏಜ್ ಲಿಮಿಟ್ ಇತ್ತು. ಈಗ ಸರ್ಕಾರ ಆ 65 ವರ್ಷದ ಏಜ್ ಲಿಮಿಟ್ ತೆಗೆದು ಹಾಕಿದೆ. 18 ವರ್ಷದೊಳಗಿನವರಿಗೆ ಪೋಷಕರ ಒಪ್ಪಿಗೆ ಅಗತ್ಯ. ಜೀವಂತ ವ್ಯಕ್ತಿ ತನ್ನ ರಕ್ತಸಂಬಂಧಿಗಳಿಗೆ ಮಾತ್ರ ಅಂಗಾಂಗ ದಾನ
ಮಾಡಬಹುದು. ಬೇರೆಯವರಿಗೆ ಕೊಡಬೇಕಾದರೆ ರಾಷ್ಟ್ರೀಯ ಏಜೆನ್ಸಿ ಒಂದರ ಅನುಮತಿ ಪಡೆಯಬೇಕು. ಅಂಗಾಂಗ ದಾನದಲ್ಲಿ ವ್ಯಾಪಾರ ನಡೆಯಬಾರದೆಂಬ ಉದ್ದೇಶದಿಂದ ಇದನ್ನು ಮಾಡಿದ್ದಾರೆ. ಮೃತ ವ್ಯಕ್ತಿಯ ಅಂಗ ಕಸಿಗೆ ಈ ಬದ್ಧತೆ ಇಲ್ಲ.

ವೈದ್ಯಕೀಯ ವಿಜ್ಞಾನ ಈಗ ಸಾಕಷ್ಟು ಬೆಳೆದಿದೆ. ಜೀವ೦ತ ವ್ಯಕ್ತಿಯಾಗಲಿ, ಮೃತಯಾಗಲಿ ಏನೆಲ್ಲ ದಾನ ಮಾಡಬಹುದು ಅಂತೀರಾ?

ಜೀವಂತ ವ್ಯಕ್ತಿ ಒಂದು ಮೂತ್ರಪಿಂಡ, ಅರ್ಧ ಭಾಗದ ಲಿವರ್ ಮತ್ತು ಅರ್ಧ ಭಾಗದ ಪ್ಯಾಂಕ್ರಿಯಾಸ್ ಕೊಡಬಹುದು. ಆದರೆ ಒಬ್ಬ ಮೃತ ವ್ಯಕ್ತಿ ಸುಮಾರು 20 ಅಂಗಗಳನ್ನು ದಾನ ಮಾಡಬಹುದು. ಕಣ್ಣು, ಒಳಗಿವಿಯ ಕೆಲವು ಭಾಗ, ಹೃದಯದ ವ್ಯಾಲ್ವ್ಗಳು, ಚರ್ಮ, ಲಿಗಮೆ೦ಟ್ಸ್, ಕಿಡ್ನಿ, ಕರುಳು, ಲಿವರ್, ಪ್ಯಾನ್‌ಕ್ರಿಯಾಸ್, ಮೂಳೆ ಮಜ್ಜನ ಇಷ್ಟೆಲ್ಲಾ ಕೊಡಬಹುದು. ಮೆದುಳು ಒಂದನ್ನು ಬಿಟ್ಟು ಎಲ್ಲವನ್ನು ಮೃತ ವ್ಯಕ್ತಿಯ ದೇಹದಿ೦ದ ಪಡೆಯಬಹುದು.

ಈ ಹತ್ತು ವರ್ಷಗಳ ನಂತರದ ಹಿನ್ನೋಟದಲ್ಲಿ ನೀವು ಹೇಳುವುದು ಏನಾದರೂ ಇದೆಯಾ?

ಹಾಂ!ಈ ಹತ್ತು ವರ್ಷಗಳ ಪಯಣ ಅತ್ಯದ್ಭುತವಾಗಿದೆ. ಸಾರ್ಥಕ ಭಾವನೆ ಮೂಡಿದೆ. ನಾನೂ ನನ್ನ ಸೋದರ ಸೊಸೆ ಇಬ್ಬರೂ ಆರೋಗ್ಯವಾಗಿದ್ದೇವೆ. ನನ್ನ 65 ಪರ್ಸೆಂಟ್ ಲಿವರನ್ನು ತೆಗೆದುಕೊಂಡಿದ್ದರು. ಆರೇ ತಿಂಗಳಲ್ಲಿ ಅದು ಸಂಪೂರ್ಣವಾಗಿ ಬೆಳೆದುಬಿಟ್ಟಿತು.
ನಾನೀಗ ಮತ್ತಷ್ಟು ಸಕ್ರಿಯಳಾಗಿದ್ದೇನೆ. ದಿವ್ಯ ಯೋಗ, ಜಿಮ್ಮಿಂಗ್, ಮ್ಯಾರಥಾನ್ ಓಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಕಥೆಯಿಂದ ಇತರರು ಪ್ರೇರೇಪಿತರಾಗಿ ಅಂಗ ದಾನಕ್ಕೆ ಮುಂದಾದರೆ ನನಗೆ ಹೆಚ್ಚಿನ ಸಾರ್ಥಕತೆ ಉಂಟಾಗುತ್ತದೆ. ನಾನು ಎಲ್ಲರಲ್ಲೂ ಬೇಡುವುದು
ಇಷ್ಟೇ: ದಾನವೇ ಪುಣ್ಯ ಕೆಲಸ ಎಂದಾದರೆ ಜೀವದಾನಕ್ಕಿಂತ ಪುಣ್ಯ ಬೇರಿಲ್ಲ.

ನಿಮ್ಮ ಸಂದರ್ಶನಕ್ಕಾಗಿ ಹಾಗೂ ನೀವು ಸಾಮಾನ್ಯ ಜನರಿಗೆ ನೀಡಿರುವ ಸಂದೇಶಕ್ಕಾಗಿ ಅನಂತ ವಂದನೆಗಳು.

ನಮ್ಮ ಭಾರತದಲ್ಲಿ ಪ್ರತಿ ವರ್ಷ ೫ ಲಕ್ಷ ಜನ ಅಂಗಾಂಗ ಸಿಗದೇ ಅಸುನೀಗುತ್ತಿದ್ದಾರೆ. ಹತ್ತು ಜನರಲ್ಲಿ ಒಬ್ಬರಿಗೆ ಸಿಗುವುದೂ ಕಷ್ಟವಾಗಿದೆ. ಅಂಗಾಂಗ ದಾನ ಮತ್ತು ಅದರಲ್ಲಿನ ನೂತನ ಆವಿಷ್ಕಾರಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವಿನ ಕೊರತೆ ಇರುವುದೇ ಒಂದು ದೊಡ್ಡ ತಡೆಯಾಗಿದೆ. ವಿಪರ್ಯಾಸ ಎ೦ದರೆ ನಮ್ಮ ಭಾರತದಲ್ಲಿ ೯೫% ಅಂಗಾಂಗ ದಾನ ಸಜೀವ ವ್ಯಕ್ತಿಯಿ೦ದ ಪಡೆದಿದ್ದು. ಕೇವಲ ೫% ಮೃತ ವ್ಯಕ್ತಿಯಿಂದ ಪಡೆದಿದ್ದು. ಹಾಸ್ಪಿಟಲ್ ಐಸಿಯುಗಳಲ್ಲಿ ಬ್ರೈನ್ ಡೆತ್ ಆದವರು, ಆಕ್ಸಿಡೆಂಟ್ ನಲ್ಲಿ ಸತ್ತವರು, ಇವರೆಲ್ಲ ಅಂಗಾಂಗ ದಾನಕ್ಕೆ ಒಳಪಟ್ಟರೆ ಪರಿಸ್ಥಿತಿ ಎಷ್ಟೋ ಸುಧಾರಿಸಬಹುದು. ಆಶಾ ಕಿರಣವೆಂದರೆ ಕೋವಿಡ್ ನಂತರ ಅಂಗಾಂಗ ದಾನ ಹೆಚ್ಚಾಗಬೇಕಾಗಿದೆ. ಇದಕ್ಕಾಗಿ ಜನಪ್ರಿಯ ಸಿನಿ ತಾರೆಯರು, ಧರ್ಮದರ್ಶಿಗಳು, ಮಠಾಧಿಪತಿಗಳು ಕೈಜೋಡಿಸಬೇಕಾಗಿದೆ. ಶಾಲಾ ಪಠ್ಯಪುಸ್ತಕಗಳಲ್ಲಿ ಇದರ ಬಗ್ಗೆ ಒಂದು ಅಧ್ಯಾಯವನ್ನು ಮೀಸಲಿಡಬೇಕಾಗಿದೆ.
ಬನ್ನಿ, ನಾವೆಲ್ಲರೂ ಈ ಪುಣ್ಯಕಾರ್ಯದಲ್ಲಿ
ಕೈಜೋಡಿಸುವ ಪಣತೊಡೋಣ.

ಸಂದರ್ಶನ ನಡೆಸಿಕೊಟ್ಟವರು: ಡಾ|| ಉಷಾ ರಮೇಶ್
ಸಿ.ಎಸ್.ಆಸ್ಪತ್ರೆ, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News
  • United States+1
  • United Kingdom+44
  • Afghanistan+93
  • Albania+355
  • Algeria+213
  • American Samoa+1
  • Andorra+376
  • Angola+244
  • Anguilla+1
  • Antigua & Barbuda+1
  • Argentina+54
  • Armenia+374
  • Aruba+297
  • Ascension Island+247
  • Australia+61
  • Austria+43
  • Azerbaijan+994
  • Bahamas+1
  • Bahrain+973
  • Bangladesh+880
  • Barbados+1
  • Belarus+375
  • Belgium+32
  • Belize+501
  • Benin+229
  • Bermuda+1
  • Bhutan+975
  • Bolivia+591
  • Bosnia & Herzegovina+387
  • Botswana+267
  • Brazil+55
  • British Indian Ocean Territory+246
  • British Virgin Islands+1
  • Brunei+673
  • Bulgaria+359
  • Burkina Faso+226
  • Burundi+257
  • Cambodia+855
  • Cameroon+237
  • Canada+1
  • Cape Verde+238
  • Caribbean Netherlands+599
  • Cayman Islands+1
  • Central African Republic+236
  • Chad+235
  • Chile+56
  • China+86
  • Christmas Island+61
  • Cocos (Keeling) Islands+61
  • Colombia+57
  • Comoros+269
  • Congo - Brazzaville+242
  • Congo - Kinshasa+243
  • Cook Islands+682
  • Costa Rica+506
  • Croatia+385
  • Cuba+53
  • Curaçao+599
  • Cyprus+357
  • Czech Republic+420
  • Côte d’Ivoire+225
  • Denmark+45
  • Djibouti+253
  • Dominica+1
  • Dominican Republic+1
  • Ecuador+593
  • Egypt+20
  • El Salvador+503
  • Equatorial Guinea+240
  • Eritrea+291
  • Estonia+372
  • Eswatini+268
  • Ethiopia+251
  • Falkland Islands+500
  • Faroe Islands+298
  • Fiji+679
  • Finland+358
  • France+33
  • French Guiana+594
  • French Polynesia+689
  • Gabon+241
  • Gambia+220
  • Georgia+995
  • Germany+49
  • Ghana+233
  • Gibraltar+350
  • Greece+30
  • Greenland+299
  • Grenada+1
  • Guadeloupe+590
  • Guam+1
  • Guatemala+502
  • Guernsey+44
  • Guinea+224
  • Guinea-Bissau+245
  • Guyana+592
  • Haiti+509
  • Honduras+504
  • Hong Kong+852
  • Hungary+36
  • Iceland+354
  • India+91
  • Indonesia+62
  • Iran+98
  • Iraq+964
  • Ireland+353
  • Isle of Man+44
  • Israel+972
  • Italy+39
  • Jamaica+1
  • Japan+81
  • Jersey+44
  • Jordan+962
  • Kazakhstan+7
  • Kenya+254
  • Kiribati+686
  • Kosovo+383
  • Kuwait+965
  • Kyrgyzstan+996
  • Laos+856
  • Latvia+371
  • Lebanon+961
  • Lesotho+266
  • Liberia+231
  • Libya+218
  • Liechtenstein+423
  • Lithuania+370
  • Luxembourg+352
  • Macau+853
  • Madagascar+261
  • Malawi+265
  • Malaysia+60
  • Maldives+960
  • Mali+223
  • Malta+356
  • Marshall Islands+692
  • Martinique+596
  • Mauritania+222
  • Mauritius+230
  • Mayotte+262
  • Mexico+52
  • Micronesia+691
  • Moldova+373
  • Monaco+377
  • Mongolia+976
  • Montenegro+382
  • Montserrat+1
  • Morocco+212
  • Mozambique+258
  • Myanmar (Burma)+95
  • Namibia+264
  • Nauru+674
  • Nepal+977
  • Netherlands+31
  • New Caledonia+687
  • New Zealand+64
  • Nicaragua+505
  • Niger+227
  • Nigeria+234
  • Niue+683
  • Norfolk Island+672
  • North Korea+850
  • North Macedonia+389
  • Northern Mariana Islands+1
  • Norway+47
  • Oman+968
  • Pakistan+92
  • Palau+680
  • Palestine+970
  • Panama+507
  • Papua New Guinea+675
  • Paraguay+595
  • Peru+51
  • Philippines+63
  • Poland+48
  • Portugal+351
  • Puerto Rico+1
  • Qatar+974
  • Romania+40
  • Russia+7
  • Rwanda+250
  • Réunion+262
  • Samoa+685
  • San Marino+378
  • Saudi Arabia+966
  • Senegal+221
  • Serbia+381
  • Seychelles+248
  • Sierra Leone+232
  • Singapore+65
  • Sint Maarten+1
  • Slovakia+421
  • Slovenia+386
  • Solomon Islands+677
  • Somalia+252
  • South Africa+27
  • South Korea+82
  • South Sudan+211
  • Spain+34
  • Sri Lanka+94
  • St Barthélemy+590
  • St Helena+290
  • St Kitts & Nevis+1
  • St Lucia+1
  • St Martin+590
  • St Pierre & Miquelon+508
  • St Vincent & Grenadines+1
  • Sudan+249
  • Suriname+597
  • Svalbard & Jan Mayen+47
  • Sweden+46
  • Switzerland+41
  • Syria+963
  • São Tomé & Príncipe+239
  • Taiwan+886
  • Tajikistan+992
  • Tanzania+255
  • Thailand+66
  • Timor-Leste+670
  • Togo+228
  • Tokelau+690
  • Tonga+676
  • Trinidad & Tobago+1
  • Tunisia+216
  • Turkey+90
  • Turkmenistan+993
  • Turks & Caicos Islands+1
  • Tuvalu+688
  • US Virgin Islands+1
  • Uganda+256
  • Ukraine+380
  • United Arab Emirates+971
  • United Kingdom+44
  • United States+1
  • Uruguay+598
  • Uzbekistan+998
  • Vanuatu+678
  • Vatican City+39
  • Venezuela+58
  • Vietnam+84
  • Wallis & Futuna+681
  • Western Sahara+212
  • Yemen+967
  • Zambia+260
  • Zimbabwe+263
  • Åland Islands+358

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....