Saturday, December 6, 2025
Saturday, December 6, 2025

Adichunchanagiri Education Trust ಕ್ರೀಡಾಪಟುಗಳಿಂದ ದೇಶದ ಹಿರಿಮೆ ಹೆಚ್ಚಾಗುತ್ತದೆ- ಶ್ರೀಪ್ರಸನ್ನನಾಥ ಸ್ವಾಮೀಜಿ

Date:

Adichunchanagiri Education Trust ಕ್ರೀಡೆಯಿಂದ ದೇಹದ ಆರೋಗ್ಯವಷ್ಟೇ ಅಲ್ಲದೇ ದೇಶದ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಅಲ್ಲದೇ ಕ್ರೀಡಾಪಟುಗಳಿಂದ ದೇಶದ ಹಿರಿಮೆ ವಿಶ್ವದಲ್ಲಿ ಹೆಚ್ಚಾಗುತ್ತವೆ ಎಂದು ಆದಿ ಚುಂಚನಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮತ್ತು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ 76 ನೇ ಸ್ವಾತಂತ್ರ್ಯೋತ್ಸವದ ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಸುವರ್ಣ ಮಹೋತ್ಸವ ಅಂಗವಾಗಿ ಶಿವಮೊಗ್ಗ ಜಿಲ್ಲಾ ಮಟ್ಟದ ಆಹ್ವಾನಿತ ಪ್ರೌಢಶಾಲಾ ಬಾಲಕ ಮತ್ತು ಬಾಲಕೀಯರಿಗಾಗಿ ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಆದರೆ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿರುತ್ತದೆ. ಚುಂಚಾದ್ರಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಟವಾಡಿದಂತಹ ಕ್ರೀಡಾಪಟುಗಳು ಇಂದು ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಇದು ಪಂದ್ಯಾವಳಿಯ ಹಿರಿಮೆಯಾಗಿದೆ ಎಂದು ಹೇಳಿದರು.

Adichunchanagiri Education Trust ಕ್ರೀಡಾಪಟುಗಳು ಈ ದೇಶದ ಆಸ್ತಿ. ನಮ್ಮ ಅನೇಕ ಕ್ರೀಡಾ ಸಾಧಕರು ಒಲಂಪಿಕ್ಸ್ ನಲ್ಲಿ ಜಯಶಾಲಿಯಾಗಿ ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯುವ ಮೂಲಕ ಭವ್ಯ ಭಾರತದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ್ದಾರೆಂದು ಹೇಳಿದರು.

ಸತತ 25 ವರ್ಷಗಳ ಕಾಲ ಸಂಸ್ಥೆ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬಂದಿದೆ. ಆದರೆ ಕೋವಿಡ್ ಮಹಾಮಾರಿಯಿಂದಾಗಿ 2 ವರ್ಷಗಳ ಕಾಲ ಪಂದ್ಯಾವಳಿ ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು ಮುಂದಿನ ದಿನಗಳಲ್ಲಿ ಯಾವ ಅಡೆತಡೆಯೂ ಬರದಂತೆ ಪಂದ್ಯಾವಳಿ ಮುಂದೆ ಸಾಗಲಿದೆ ಎಂದು ಆಶಿಸಿದರು.

ಪಂದ್ಯಾವಳಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಮಾತನಾಡಿ, ಚಂಚಾದ್ರಿ ಕಪ್ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಮೊದಲ ಮೆಟ್ಟಿಲಾಗಿದೆ. ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಎರಡನ್ನೂ ಸಮನಾವಾಗಿ ನೋಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಮಠದಿಂದ ಸತತ 21 ವರ್ಷ ಚುಂಚಾದ್ರಿ ಕಪ್ ಆಯೋಜನೆ ಮಾಡುತ್ತಿರುವುದು ಖುಷಿಯ ವಿಚಾರ. ಪ್ರಸ್ತುತ ಗ್ರಾಮ ಪಂಚಾಯಿತಿಗಳಲ್ಲಿ ಸಣ್ಣ ಪುಟ್ಟ ಜಾಗ ಇದ್ದರೂ ವಾಲಿಬಾಲ್ ಆಡುವುದನ್ನು ನೋಡಿದ್ದೇವೆ. ಇಲ್ಲಿ ಸ್ಪರ್ಧಿಸಿರುವ ಕ್ರೀಡಾಪಟುಗಳು ಜಿಲ್ಲಾಮಟ್ಟದಿಂದ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಆಶೀಸಿದರು.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಬಿಇಒ ಪಿ.ನಾಗರಾಜ್, ಜಿಲ್ಲಾ ವಾಲಿಬಾಲ್ ಸ್ಥಂಸ್ಥೆಯ ಕಾರ್ಯದರ್ಶಿ ಶಶಿ, ಅಧ್ಯಕ್ಷ ಭಾಸ್ಕರ್ ಜಿ ಕಾಮತ್ ಮತ್ತು
ಶ್ರಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ)ಶಿವಮೊಗ್ಗ ಶಾಖೆಯ ನಿರ್ದೇಶಕರುಗಳು, ಆಡಳಿತಾಧಿಕಾರಿಗಳು,ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...