Friday, December 5, 2025
Friday, December 5, 2025

MLA Shivamogga ಗೋಪಿ ಸರ್ಕಲ್ ಗೆ ಮುಂಚಿನ ಹೆಸರೇ” ಟಿ.ಸೀನಪ್ಪ ಶೆಟ್ಟಿ ಸರ್ಕಲ್” ನಾಮಕರಣ

Date:

MLA Shivamogga “ಟಿ. ಸೀನಪ್ಪ ಶೆಟ್ಟಿ ಸರ್ಕಲ್”ನ ನಾಮಫಲಕದ ಅನಾವರಣ ವನ್ನು ಶಿವಮೊಗ್ಗ ವಿಧಾನಸಭಾ ಶಾಸಕರಾದ ಶ್ರೀ ಚನ್ನಬಸಪ್ಪ(ಚನ್ನಿ) ರವರು ಯಶಸ್ವಿಯಾಗಿ ನಡೆಸಿಕೊಟ್ಟರು.

ಅವರು ಈ ಸಂದರ್ಭದಲ್ಲಿ ಟಿ.ಎಸ್.ಬಿ ಕುಟುಂಬದ ಬಗ್ಗೆ ಮಾತನಾಡುತ್ತಾ 1956ರಲ್ಲಿ ಶಿವಮೊಗ್ಗ ಪುರಸಭೆಯಲ್ಲಿ ಟಿ.ಎಸ್.ಬಿ ಕುಟುಂಬದ ಕೊಡುಗೆಯನ್ನು ಸ್ಮರಿಸಿ ಈ ಸರ್ಕಲ್‌ಗೆ ಟಿ.ಸೀನಪ್ಪಶೆಟ್ಟಿ ಸರ್ಕಲ್‌ಎಂದು ನಾಮಕರಣ ಮಾಡಲು ತೀರ್ಮಾನಿಸಿ, ನಾಮಕರಣ ಮಾಡಿರುವುದನ್ನು ತಿಳಿಸಿದರು.

ಖ್ಯಾತ ಇತಿಹಾಸ ತಜ್ಞರಾದ ಖಂಡೋಬರಾವ್‌ರವರು ಅವರ ಶಿವಮೊಗ್ಗ ಯಶೋಗಾಥೆ ಪುಸ್ತಕದಲ್ಲಿ ಸರ್ಕಲ್ ಬಗ್ಗೆ ಉಲ್ಲೇಖವಾಗಿರುವುದನ್ನು ತಿಳಿಸಿದರು.

MLA Shivamogga ಈ ಕಾರ್ಯಕ್ರಮವು ಟಿ.ಎಸ್.ಬಿ ಕುಟುಂಬದ ಹಿರಿಯ ಮಹಿಳೆಯರ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡು, ಕುಟುಂಬದ ಹಿರಿಯರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿಯವರು ಆಗಮಿಸಿದ್ದ ಗಣ್ಯರು ಹಾಗೂ ಮಾಧ್ಯಮದವರನ್ನು ಸ್ವಾಗತಿಸಿದರು.
ಟಿ.ಆರ್.ವೆಂಕಟೇಶಮೂರ್ತಿಯವರು ಸರ್ಕಲ್ ನ ವೃತ್ತಾಂತವನ್ನು ಸಂಕ್ಷಿಪ್ತವಾಗಿ ವಿವರಿಸಿದರು ಹಾಗೂ ಟಿ.ಜಿ.ವಿಶ್ವನಾಥ್ ರವರು ವಂದನಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಕುಟುಂಬದ ಅನೇಕ ಸದಸ್ಯರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದ ಶ್ರೀ ವಿಜಯಕುಮಾರ್ ಪತ್ರಕರ್ತರು, ಟಿವಿ ಮಾಧ್ಯಮದವರು ಹಾಗೂ ಹಿತೈಷಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...