ಕನ್ನಡ ಪತ್ರಿಕೆಗಳು, ಮಾಧ್ಯಮಗಳು ಇಂದು ಸಾಹಿತ್ಯಕ್ಕೆ ಆಶ್ರಯ ನೀಡುತ್ತಿವೆ. ಇದು ಉತ್ತಮ ಬೆಳವಣಿಗೆ ಎಂದು ಧರ್ಮಸ್ಥಳ ಧರ್ಮಾದಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.
ಖಡ್ಗದಿಂದ ವಿಶ್ವವನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಸಾಹಿತ್ಯದಿಂದ ಸಾಧ್ಯ. ಪ್ರತಿಯೊಬ್ಬ ಕನ್ನಡಿಗನೂ ಭಾರತೀಯನಾಗಿ, ಶಾಂತಿ ಬಯಸುವ ವಿಶ್ವಮಾನವರಾಗಿ ಬೆಳೆಯಬೇಕು ಎಂದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನವನ್ನು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ , ಡಾ. ಗಜಾನನ ಶರ್ಮ ಸಾಗರ,ಡಾ.ಪಿ. ಚಂದ್ರಿಕಾ ಚಿತ್ರದುರ್ಗ, ಡಾ.ಕೆ.ಪಿ. ಪುತ್ತರಜು ಬೆಂಗಳೂರು ವಿಶೇಷ ಉಪನ್ಯಾಸ ನೀಡಿದರು. ಎಸ್ ಡಿ ಎಂಇ ಸೊಸೈಟಿ ಉಜಿರೆಯ ಪ್ರಾಜೆಕ್ಟ್ ಡೈರೆಕ್ಟರ್ ಡಿ. ಶ್ರೇಯಸ್ ಕುಮಾರ್ ಉದ್ಘಾಟಕರ ಸನ್ಮಾನ ಪತ್ರ ವಾಚಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಅಧ್ಯಕ್ಷರ ಸನ್ಮಾನಪತ್ರ ವಾಚಿಸಿದರು. ಹೇಮಾವತಿ ವೀರೇಂದ್ರ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ರಾಜೇಂದ್ರಕುಮಾರ್, ನೀತಾ ರಾಜೇಂದ್ರಕುಮಾರ್, ಶ್ರದ್ಧಾ ಅಮಿತ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಸಾಹಿತ್ಯದಿಂದ ವಿಶ್ವವನ್ನೇ ಗೆಲ್ಲ ಬಹುದು
Date: