Saturday, June 20, 2026
Saturday, June 20, 2026

Uttaradi Mutt ಹೊಳೆಹೊನ್ನೂರಿನಲ್ಲಿ ಶ್ರೀಭೂಸಮೇತ ಶ್ರೀನಿವಾಸ ದೇವರಿಗೆ ವಿಶೇಷ ಪುಷ್ಪಾರ್ಚನೆ

Date:

Uttaradi Mutt ತಿರುಪತಿ ತಿರುಮಲ ದೇವಸ್ಥಾನಮ್‌ ನ ದಾಸಸಾಹಿತ್ಯ ಪ್ರಾಜೆಕ್ಟ್ ಮತ್ತು ಉತ್ತರಾದಿ ಮಠದ ಸಹಯೋಗದಲ್ಲಿ ಶ್ರೀ ಸತ್ಯಾತ್ಮ ತೀರ್ಥರ 28ನೇ ಚಾತುರ್ಮಾಸ ಕಾಲದಲ್ಲಿ ಶ್ರೀಭೂ ಸಮೇತ ಶ್ರೀ ಶ್ರೀನಿವಾಸ ದೇವರಿಗೆ ವಿಶೇಷ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು
ಆ.೬ರ ಭಾನುವಾರ ಸಂಜೆ ೪ ರಿಂದ ೬ ಗಂಟೆಯವರೆಗೆ ಈ ಕಾರ್ಯಕ್ರಮ ಶ್ರೀ ಸತ್ಯಾತ್ಮ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು.
ದಾಸ ಸಾಹಿತ್ಯ ಪ್ರಾಜೆಕ್ಟ್ನ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ ಪಗಡಾಲ ನೇತೃತ್ವದ ತಂಡ ಈ ಕಾರ್ಯಕ್ರಮ ನಡೆಸಿಕೊಡಲಾಯಿತು.
ಈ ಕಾರ್ಯಕ್ರಮದ ನಿಮಿತ್ತ ತಿರುಪತಿಯಿಂದಲೇ ಶ್ರೀಭೂ ಸಮೇತ ಶ್ರೀ ಶ್ರೀನಿವಾಸ ದೇವರ ಉತ್ಸವ ಮೂರ್ತಿಯನ್ನು ಕರೆತರಲಾಗಿದೆ.

ಗ್ರಂಥಗಳ ಲೋಕಾರ್ಪಣೆ :

Uttaradi Mutt ಶುಕ್ರವಾರ ಸಂಜೆ ೨೮ನೇ ಚಾತುರ್ಮಾಸ್ಯದ ವಿದ್ವತ್ ಸಭೆಯಲ್ಲಿ ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶವನ್ನು ಶ್ರೀ ಸತ್ಯಾತ್ಮ ತೀರ್ಥರು ನೀಡಿದರು.
ಧಾರವಾಡದ ಶ್ರೀ ಮಾಧ್ವ ವಿದ್ಯಾಪೀಠ ಸಂಶೋಧನಾ ಸಂಸ್ಥೆ ಹೊರತಂದಿರುವ ಶ್ರೀಮದ್ ಬ್ರಹ್ಮಸೂತ್ರ ಭಾಷ್ಯ ಮತ್ತು ಅಣು ಭಾಷ್ಯ ಗ್ರಂಥಗಳನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಅಧಿಕ ಮಾಸದ ಅಂಗವಾಗಿ 33 ಪುಸ್ತಕಗಳನ್ನು ಪಂಡಿತರಿಗೆ ಶ್ರೀಗಳ ಹಸ್ತೇನ ದಾನವಾಗಿ ನೀಡಲಾಯಿತು.

ವಿಜಯಪುರದ ಪಂಡಿತ ಸಂಜೀವಾಚಾರ್ಯ ಮದಬಾವಿ ಪ್ರವಚನ ನೀಡಿದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...