Sunday, December 7, 2025
Sunday, December 7, 2025

Kateel Ashok Pai College ಸುಲಭದಲ್ಲಿ ಹಣ ಎಂಬುದೊಂದು ಮಿಥ್ಯೆ-ಶಾಸಕ ಡಿ. ಎಸ್‌.ಅರುಣ್

Date:

Kateel Ashok Pai College ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ‘ದಿಶಾ’ ಕೆರಿಯರ್ ಗೈಡೆನ್ಸ್ ಸೆಂಟರ್, ನಗರದ ಛೇಂಬರ್ ಅಫ್ ಕಾಮರ್ಸ್ನ ಸಹಯೋಗದಲ್ಲಿ ಹಮ್ಮಿಕೊಂಡ ಎರಡು ದಿನಗಳ ವೃತ್ತಿ ಪೂರ್ವ ತರಬೇತಿ ಕಾರ್ಯಾಗಾರವನ್ನು ದಿನಾಂಕ 05/08/2023 ರಂದು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್.ಅರುಣ್‌ರವರು ಯುವಜನರು ಶಿಕ್ಷಣದೊಂದಿಗೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ ಎಂದು ತಿಳಿಸಿದರು.

ಇಂದು ವ್ಯಕ್ತಿಯೊಬ್ಬ ಉದ್ಯೋಗಕ್ಕಾಗಲೀ, ಸ್ವಉದ್ಯೋಗಕ್ಕಾಗಲೀ ತೆರಳುವಾಗ ತಾನು ಪಡೆದ ಪದವಿಯಷ್ಟೇ ಮುಖ್ಯವಲ್ಲ. ವ್ಯಕ್ತಿಯು ಹೊಂದಿರುವ ಜ್ಞಾನ, ಮನೋಭಾವ ಕೌಶಲ್ಯಗಳೂ ಮುಖ್ಯ. ಇಂದಿನ ಶಿಕ್ಷಣವು ವಿಷಯ ಜ್ಞಾನವನ್ನು ಒದಗಿಸುತ್ತಿದೆ. ಆದರೆ, ವಿದ್ಯಾರ್ಥಿಗಳು ಮೌಲ್ಯವನ್ನೂ ಮೈಗೂಡಿಸಿಕೊಳ್ಳಲು ಸಾಮಾಜಿಕವಾಗಿ ಹಾಗೂ ಭಾವನಾತ್ಮಕವಾಗಿ ಬೆರೆಯಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇಂದು ಬೆರಳ ತುದಿಯಲ್ಲಿ ಮಾಹಿತಿಗಳ ಲಭ್ಯತೆ ಇದೆ. ಆದರೆ ಮಾಹಿತಿಗಳ ಮೂಲದ ಅರಿವು ಬಹಳ ಮುಖ್ಯ. ಬುದ್ಧಿವಂತಿಕೆಯ ಜೊತೆ, ಭಾವನಾತ್ಮಕ ಸಮತೋಲನ ಹಾಗೂ ಸಾಮಾಜಿಕ ಕೌಶಲ್ಯಗಳಿದ್ದಾಗಲೇ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ದೊಡ್ಡ ಸಾಧನೆಗಳ ಕನಸನ್ನು ಕಟ್ಟಿಕೊಳ್ಳಿ. ಆದರೆ ಯಾವುದೇ ಸಾಧನೆಗೂ ಸ್ವಪ್ರಯತ್ನವಿರಬೇಕು. ‘ಸುಲಭದಲ್ಲಿ ಹಣ’ ಎಂಬುದೊಂದು ಮಿಥ್ಯೆ ಅಥವಾ ಮೋಸ ಎಂದು ತಿಳಿಸಿದರು.

Kateel Ashok Pai College ಈ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ರಾಜೇಂದ್ರ ಚೆನ್ನಿಯವರು ಜಾಗತೀಕರಣ ಹಾಗೂ ತಾಂತ್ರಿಕ ಬೆಳವಣ ಗೆಗಳು ವಿಫುಲ ಅವಕಾಶಗಳನ್ನು ಎಲ್ಲರಿಗೂ ತೆರೆದಿಟ್ಟಿದೆ. ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ವಿವಿಧ ಉದ್ಯೋಗದ ಅವಕಾಶಗಳಿವೆ. ಆದುದರಿಂದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಎಂ.ಎಸ್ಸಿ. ಸೈಕಾಲಜಿ ವಿದ್ಯಾರ್ಥಿಗಳಿಗೆ ಮುಂದೆ ಉದ್ಯೋಗ ಪಡೆಯಲು ಅನುಕೂಲವಾಗಲು ಈ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ತರಬೇತಿಯನ್ನು 16,000 ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿರುವ ಅಂತರಾಷ್ಟ್ರೀಯ ತರಬೇತುದಾರರಾದ ಬೆಂಗಳೂರಿನ ಶ್ರೀ ಕೆ.ಎಸ್. ವರದಮೂರ್ತಿಯವರು ನಡೆಸಿಕೊಡಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮಾನಸ ಟ್ರಸ್ಟ್ನ ನಿರ್ದೇಶಕರಾದ ಡಾ.ರಜನಿ ಎ.ಪೈ, ಡಾ.ರಾಜೇಂದ್ರ ಚೆನ್ನಿ, ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಶ್ರೀ ಗೋಪಿನಾಥ್, ಶ್ರೀಮತಿ ಸವಿತಾ ಮಾಧವ, ಪ್ರಾಂಶುಪಾಲರಾದ ಡಾ.ಸಂಧ್ಯಾಕಾವೇರಿ ಕೆ. ಕಾಲೇಜಿನ ಮನ: ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಭಟ್, ಮಂಜುನಾಥಸ್ವಾಮಿ ,‘ದಿಶಾ’ ಕೊ ಆರ್ಡಿನೇಟರ್, ಗಣೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕು.ಆಲಿಯಾ ನಿರೂಪಿಸಿದರು. ಡಾ.ಅರ್ಚನಾ ಸ್ವಾಗತಿಸಿದರು.

ಶ್ರೀಮತಿ ನ್ಯಾನ್ಸಿ ಪಿಂಟೋ ವಂದಿಸಿದರು. ವಿದ್ಯಾರ್ಥಿ ರಕ್ಷಿತ್, ಶ್ರೀ ಅರುಣ್‌ರವರ ಪರಿಚಯವನ್ನೂ ಕು ರಜಿಯಾ ಶ್ರೀ ವರದಾಮೂರ್ತಿಯವರ ಪರಿಚಯವನ್ನೂ ಮಾಡಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...