Shri Maya Kala Kendra 2023-24 ನೇ ಸಾಲಿನ ಯಕ್ಷಗಾನ ಕಲಿಕಾ ಶಿಬಿರವು ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಾರ್ಯಾಗಾರ ಶ್ರೀ ಮಯ ಕಲಾ ಕೇಂದ್ರದಲ್ಲಿ ದಿನಾಂಕ 02.08.2023 ರಂದು ಶುಭಾರಂಭ ಗೊಂಡಿತು. ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಗಂಗಾಧರ ಗೌಡ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ಮಯ ಕಲಾ ಕೇಂದ್ರ ಹಲವಾರು ವರ್ಷಗಳಿಂದ ಯಕ್ಷಗಾನ ಸೇವೆ ಸಲ್ಲಿಸುತ್ತಾ ಬಂದಿದ್ದು ಯಕ್ಷಗಾನ ಕೆರೆಮನೆ ಮನೆತನದ ತ್ಯಾಗ ಶ್ಲಾಘನೀಯ ಎಂದು ಅವರು ಹೇಳಿದರು.
ಮುಖ್ಯ ಅಭ್ಯಾಗತರಾಗಿ ಯಕ್ಷರಂಗ ಮಾಸ ಪತ್ರಿಕೆಯ ಸಂಪಾದಕರಾದ ಮಾನ್ಯ ಗೋಪಾಲ ಕೃಷ್ಣ ಭಾಗವತ ಇವರು ಯಕ್ಷಗಾನದ ಕುರಿತು ಮಾತನಾಡುತ್ತಾ ಯಕ್ಷಗಾನದ ಹಿರಿಮೆಯನ್ನು ಶಕ್ತಿ ಹಾಗೂ ವಿಸ್ತರತೆಯನ್ನು ತಿಳಿಸಿದರು.
ಹೊರ ರಾಜ್ಯದಿಂದಲೂ ಯಕ್ಷಗಾನ ಕಲಿಕೆಗೆ ಬಂದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಈ ಅನುಭವ ತಮ್ಮ ಕಲಾ ಕ್ಷೇತ್ರಕ್ಕೆ ಹೆಚ್ಚಿನ ಬಲ ಚಿಂತನೆ ನೀಡುತ್ತದೆ ಎಂದು ಹಾರೈಸಿದರು.
Shri Maya Kala Kendra ಕಳೆದ 36 ವರ್ಷಗಳಿಂದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಗುರುಕುಲ ಕಲಾ ಕೇಂದ್ರ 37ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ಶಿಬಿರದಲ್ಲಿ ದೆಹಲಿ, ಚಮಡಿಗಡ, ಝಾರ್ಖಂಡ ರಾಜಸ್ಥಾನ, ಉತ್ತರ ಪ್ರದೇಶ, ಕರ್ನಾಟಕ ರಾಜ್ಯದ 22 ಕಲಾ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಗೆ ಆಗಮಿಸಿದ್ದರು.
ಪ್ರಾರಂಭದಲ್ಲಿ ಎಲ್ಲರನ್ನು ಮಂಡಳಿಯ ನಿರ್ದೇಶಕರು ಕಾರ್ಯಕ್ರಮದ ಸಂಯೋಜಕರು ಆದ ಕೆರೆಮನೆ ಶಿವಾನಂದ ಹೆಗಡೆಯವರು ಸ್ವಾಗತಿಸಿ ತಮ್ಮ ಮಂಡಳಿಯ ಧೈಯೋದ್ದೇಶ ಹಾಗೂ ಕಾರ್ಯಾಗಾರದ ಮಹತ್ವ ತಿಳಿಸಿದರು.
ಮಂಡಳಿಯ ಭಾಗವತರಾದ ಶ್ರೀ ಅನಂತ ಹೆಗಡೆ ದಂತಳಿಗೆ ಗಣಪತಿ ಸ್ತುತಿ ಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಅವರಿಗೆ ಮದ್ದಲೆಯಲ್ಲಿ ಸಹಾಯಕರಾಗಿ ಶ್ರೀಧರ ಮರಾಠಿ, ಚಂಡೆಯಲ್ಲಿ ಶ್ರೀ ರಾಮನ್ ಹೆಗಡೆ ಸಹಾಯ ಒದಗಿಸಿದರು.
ಮುಖ್ಯ ಅತಿಥಿಗಳಾಗಿ ಯಕ್ಷ ರಂಗ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಗೋಪಾಲ ಕೃಷ್ಣ ಭಾಗವತರು ಆಗಮಿಸಿದ ವಿದ್ಯಾರ್ಥಿಗಳಿಗೆ ಯಕ್ಷಗಾನದ ವಿವಿಧ ಆಯಾಮಗಳ ಕುರಿತು ಹಾಗೂ ಯಕ್ಷಗಾನದ ಇಂದಿನ ಸ್ಥಿತಿ ಗತಿಯ ಬಗ್ಗೆ ತಿಳಿಸಿದರಲ್ಲದೇ ಯಕ್ಷಗಾನದ ಕಲಿಕೆಗೆ ದೂರದ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳ ಆಸಕ್ತಿಯನ್ನು ಪ್ರಶಂಸಿಸಿದರು.
ಮಂಡಳಿಯ ನಿರ್ದೇಶಕರು ಹಾಗೂ ಈ ಶಿಬಿರದ ಕುರಿತು ಪ್ರಾಸ್ತಾವಿಕ ಮಾತನಾಡಿ ಇಂಥಹ ಕೆಲಸಕ್ಕೆ ಸಮಾಜ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. ಮಂಡಳಿಯ ಕಲಾವಿದ ಕೆರೆಮನೆ ಶ್ರೀಧರ ಹೆಗಡೆ ವಂದನಾರ್ಪಣೆ ಮಾಡಿದರು. ಊರ ನಾಗರೀಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.