Department of Sainik Welfare and Rehabilitation ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂತಿಮ ಘಟ್ಟವಾಗಿ ‘ಮೇರಿ ಮಾಟಿ ಮೇರಾ ದೇಶ್’ ಪರಿಕಲ್ಪನೆಯಡಿ ದೇಶಾದ್ಯಂತ ಗ್ರಾಮೀಣ, ನಗರ ಹಾಗೂ ರಾಜಧಾನಿ ಮಟ್ಟದಲ್ಲಿ ಆಗಸ್ಟ್ 09 ರಿಂದ 15 ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸರ್ವೋಚ್ಚ ತ್ಯಾಗಗೈದ ಭಾರತ ಮಾತೆಯ ವೀರ ಪುತ್ರರಿಗೆ ಶ್ರದ್ದಾಂಜಲಿ ಅರ್ಪಿಸಿ, ಅವರುಗಳ ಸ್ಮರಣಾರ್ಥ ‘ಶಿಲಾಫಲಕಂ’ ಸ್ಥಾಪಿಸುವುದರೊಂದಿಗೆ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
Department of Sainik Welfare and Rehabilitation ಸ್ವಾಂತಂತ್ರ್ಯ ಹೋರಾಟಗಾರರು, ಸೇನೆಯ ಶೌರ್ಯಪ್ರಶಸ್ತಿ ವಿಜೇತರು, ಸಶಸ್ತ್ರಪಡೆಗಳ ಹುತಾತ್ಮರ ವೀರ ನಾರಿಯರು, ಸೈನಿಕರು, ಮಾಜಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಾಲತಾಣ https://yuva.gov.in
ವನ್ನು ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದೆಂದು ಇಲಾಖೆಯ ಉಪನಿರ್ದೇಶಕ(ಪ್ರ) ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.