Thursday, September 17, 2026
Thursday, September 17, 2026

Kateel Ashok Pai Memorial College ವಿದ್ಯಾರ್ಥಿಗಳಿಗೆ ಔದ್ಯೋಗಿಕ ಪೂರ್ವ ತಯಾರಿ ಕಾರ್ಯ ಕ್ರಮ

Date:

Kateel Ashok Pai Memorial College ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ‘ದಿಶಾ’ ಕೆರಿಯರ್ ಗೈಡೆನ್ಸ್ & ಪ್ಲೇಸ್‌ಮೆಂಟ್ ಸೆಲ್ ಹಾಗೂ ಶಿವಮೊಗ್ಗ ಛೇಂಬರ್ ಆಫ್ ಕಾಮರ್ಸ್ನ ಸಹಯೋಗದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಎಂ.ಎಸ್ಸಿ ಸೈಕಾಲಜಿ ವಿದ್ಯಾರ್ಥಿಗಳಿಗೆ ಪ್ರಿ ಪ್ಲೇಸ್‌ಮೆಂಟ್ ಟ್ರೈನಿಂಗ್ (ಔದ್ಯೋಗಿಕ ಪೂರ್ವತಯಾರಿ) ಕಾರ್ಯಕ್ರಮವನ್ನು ಆಗಸ್ಟ್ 05 & 06 ರಂದು ಛೇಂಬರ್ ಆಫ್ ಕಾಮರ್ಸ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಎರಡು ದಿನಗಳ ತರಬೇತಿಯನ್ನು ಬೆಂಗಳೂರಿನ ನುರಿತ ತರಬೇತುದಾರರಾದ ಶ್ರೀ ವೇದಮೂರ್ತಿಯವರು ನಡೆಸಿಕೊಡಲಿದ್ದಾರೆ. ಈ ತರಬೇತಿಯ ಉದ್ಘಾಟನೆಯನ್ನು ನಮ್ಮ ಹೆಮ್ಮೆಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್ ರವರು ನಡೆಸಿಕೊಡಲಿದ್ದಾರೆ.

Kateel Ashok Pai Memorial College ಡಾ.ರಜನಿ ಎ ಪೈ, ಡಾ.ರಾಜೇಂದ್ರ ಚೆನ್ನಿ, ಛೇಂಬರ್ ಆಫ್ ಕಾಮರ್ಸ್ನ ಶ್ರೀ ಗೋಪಿನಾಥ್, ಶ್ರೀಮತಿ ಸವಿತಾ ಮಾಧವ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಕೆ ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವರು.

ಈ ಉದ್ಘಾಟನಾ ಸಮಾರಂಭವು ದಿನಾಂಕ 05/08/2023 ರಂದು ಬೆಳಿಗ್ಗೆ 09:30 ಕ್ಕೆ ಸರಿಯಾಗಿ ಛೇಂಬರ್ ಆಫ್ ಕಾಮರ್ಸ್ ಹಾಲ್‌ನಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...