Shri Kshetra Dharmasthala Rural Development Project ಶಿವಮೊಗ್ಗ ತಾಲ್ಲೂಕಿನ ಆಯನೂರು ವಲಯದ ಕೋಟೆ ಗ್ರಾಮದ ಜಯಣ್ಣರವರ ಕೃಷಿ ಭೂಮಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಯಾಂತ್ರೀಕೃತ ಭತ್ತ ಬೇಸಾಯಕ್ಕೆ ಚಾಲನೆ ನೀಡಲಾಯಿತು.
Shri Kshetra Dharmasthala Rural Development Project ಈ ಸಂದರ್ಭದಲ್ಲಿ ಯೋಜನೆಯ ಕೃಷಿ ಮೇಲ್ವಿಚಾರಕ ಪ್ರಕಾಶ್ ಮಾತನಾಡಿ ಆಧುನಿಕ ಯುಗದಲ್ಲಿ ಯಾಂತ್ರೀಕೃತ ಭತ್ತ ನಾಟಿ ಮಾಡುವುದರಿಂದ ಕೂಲಿಯಾಳುಗಳ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಯಾಂತ್ರೀಕೃತ ಭತ್ತ ನಾಟಿಯು ವೈಜ್ಞಾನಿಕ ಪದ್ಧತಿ ಆಗಿರುವುದರಿಂದ ಅಧಿಕ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿ.ಹೆಚ್.ಎಸ್.ಸಿ. ಮ್ಯಾನೇಜರ್ ರವೀಶ್, ಯೋಜನೆಯ ಮೇಲ್ವಿಚಾರಕ ಪ್ರಶಾಂತ್, ರೈತರಾದ ಜಯಣ್ಣ, ಶ್ರೀಕಾಂತ್, ರೂಪ, ಅರ್ಚನ ಹಾಗೂ ಸೇವಾ ಪ್ರತಿನಿಧಿ ಶಶಿಕಲಾ ಉಪಸ್ಥಿತರಿದ್ದರು.