Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ಶಿವಮೊಗ್ಗ ರವರಿಂದ ಜಿಲ್ಲಾ ಸ್ಕೌಟ್ ಭವನ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ವಿಶ್ವ ಸುರ್ಯೋದಯ ವಿಶ್ವ ಸ್ಕಾರ್ಫ್ ದಿನವನ್ನು ಆಚರಣೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸ್ಕೌಟ್ ಆಯುಕ್ತರಾದ ಶ್ರೀ ಕೆ.ಪಿ.ಬಿಂದುಕುಮಾರರವರು ಮಾತನಾಡುತ್ತಾ “ಸ್ಕೌಟ್ ಸಂಸ್ಥಾಪಕರಾದ ಲಾರ್ಡ್ ಬೆಡನ್ ಪಾವೆಲ್ ರವರು 1907 ರಲ್ಲಿ ಇಂಗ್ಲೆಂಡಿನಲ್ಲಿ ಮಕ್ಕಳ ಚಟುವಟಿಕೆಗಳನ್ನು ಮತ್ತು ಅವರ ಧ್ಯೇಯ, ದೃಷ್ಟಿಕೋನಗಳನ್ನು ನೋಡಿ ಮಕ್ಕಳಿಗೆ ತರಬೇತಿಯನ್ನು ನೀಡುವ ಸಲುವಾಗಿ ಕೇವಲ 20 ಮಕ್ಕಳನ್ನೊಳಗೊಂಡ ಮೊದಲನೆ ಪ್ರಾಯೋಗಿಕ ತರಬೇತಿ ಶಿಬಿರವನ್ನು ಅಗಸ್ಟ 01 ರಂದು ಬ್ರೌನ್ಸಿ ದ್ವೀಪದಲ್ಲಿ ಹಮ್ಮೀಕೊಂಡು ಯಶಸ್ವಿಗೊಳಿಸಲಾಯಿತು.
ಈ ದಿನವನ್ನು ಸ್ಕಾರ್ಫ ದಿನವನ್ನಾಗಿ ಹಾಗೂ ಸುರ್ಯೋದಯ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು. ಸ್ಕಾರ್ಫ್ನ್ನು ಯಾವಯಾವ ಸಂದರ್ಭದಲ್ಲಿ ಉಪಯೋಗಿಸುತ್ತೇವೆ ಎಂದು ವಿವರಿಸಿ ಎಲ್ಲಾರಿಗೂ ಶುಭ ಕೋರಿ ಪ್ರತಿ ಮಗುವು ತಮ್ಮ ಗೆಳೆಯರನ್ನು ಇಲ್ಲವೆ ಬೆರೆ ಮಕ್ಕಳಿಗೆ ಸ್ಕಾರ್ಫ ತೋಡಿಸುವುದರ ಮೂಲಕ ಅವರನ್ನು ನಮ್ಮ ಸಂಸ್ಥೆಗೆ ಬರಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.
Bharat Scouts and Guides ಸ್ಕೌಟಿಂಗ್ ಪ್ರಾರಂಭವಾದ ದಿನವಾದ್ದರಿಂದ ಹಾಗೂ ಸುರ್ಯೋದಯ ದಿನವಾದ್ದರಿಂದ ಸ್ಕೌಟ್ ಗೈಡ್ ಪ್ರತಿಜ್ಞೆಯನ್ನು ಪುನರ್ ಉಚ್ಚರಿಸಲು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ್‌ಎಲ್.ಟಿ(ಗೈಡ್)ಹೆಚ್.ಡಬ್ಲೂ.ಬಿ(ರೇಂ) ರವರು ಬೋಧಿಸಿದರು ಹಾಗೂ ಸಭೆಯ ನಿರೂಪಣೆಯನ್ನು ನಿರ್ವಹಿಸಿದರು.
ಈ ಕಾರ್ಯಕ್ರಮದ ಬಗ್ಗೆ ಪ್ರಾಸ್ಥಾವಿಕ ನುಡಿಯನ್ನು ಎಲ್.ಎ ಕಾರ್ಯದರ್ಶಿ ಶ್ರೀ ರಾಜೇಶ್ ಅವಲಕ್ಕಿಎ.ಎಲ್.ಟಿ(ರೋ) ರವರು ನುಡಿದರು. ಸ್ವಾಗತವನ್ನು ಎಲ್.ಎ ಸಹ ಕಾರ್ಯದರ್ಶಿ ಶ್ರೀ ಘನಸ್ಯಾಮ್ ಗಿರಿಮಾಜಿ ರವರು ನಿರ್ವಹಿಸಿದರು ವಂದನೆಯನ್ನು ಪಿ.ಆರ್.ಓ ಶ್ರೀ ಜಿ.ವಿಜಯಕುಮಾರ್ ನೇರವೇರಿಸಿದರು.
ಜಿಲ್ಲಾ ಖಜಾಂಚಿ ಚೂಡಾಮಣಿ ಪವಾರ, ಎಲ್.ಎ ಉಪಾಧ್ಯಕ್ಷರಾದ ಓಂ ಗಣೇಶ, ಸಿ.ಎಸ್.ಕಾತ್ಯಾಯಿನಿ, ಮಲ್ಲಿಕಾರ್ಜುನ ಕಾನೂರು, ಪ್ರಿಯದರ್ಶಿನಿ ನಗರ ಶಾಲೆಯ ಸುಮಾರು 50ಸ್ಕೌಟ್ಸ್, ಗೈಡ್ಸ್ಗಳು ಉಪಸ್ಥಿತರಿದ್ದರು.