Saturday, December 6, 2025
Saturday, December 6, 2025

ZP Chikkamagalur ಹರಿಹರದಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜೆ.ಎನ್.ಮಂಜೇಗೌಡ ಅವಿರೋಧ ಆಯ್ಕೆ

Date:

ZP Chikkamagalur ಚಿಕ್ಕಮಗಳೂರು ತಾಲ್ಲೂಕಿನ ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಾರದಾ ಮಾಸ್ತೇಗೌಡ ಹಾಗೂ ಉಪಾಧ್ಯಕ್ಷರಾಗಿ ಜೆ.ಎನ್.ಮಂಜೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶಾರದಾ ಮತ್ತು ಮಂಜೇಗೌಡ ಹೊರತು ಪಡಿಸಿ ಬರ‍್ಯಾವ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮಂಜುನಾಥ್ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ ಗ್ರಾ.ಪಂ. ಅಧ್ಯಕ್ಷ ಹುದ್ದೆ ಪ್ರಜಾ ಪ್ರಭುತ್ವ ಸರ್ಕಾರದ ಸ್ಥಳೀಯ ಮೂಲ ಬೇರು. ಇಂತಹ ಹುದ್ದೆಯನ್ನು ವಹಿಸಿಕೊಂಡಿರುವವರು ಅಂಬೇಡ್ಕರ್ ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಕಳೆದ ಹಲವಾರು ವರ್ಷಗಳಿಂದ ಅಧ್ಯಕ್ಷ ಹುದ್ದೆ ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲಿತ್ತು. ತದನಂತರ ಪ್ರಜಾ ಪ್ರಭುತ್ವದ ಸಂವಿಧಾನದ ಮೂಲಕ ತಿದ್ದುಪಡಿ ತಂದು ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸುವ ಮೂಲಕ ವಾರ್ಡಿನ ಮೀಸಲಾತಿ ಬದಲಾವಣೆ ಮಾಡಿ ಎರಡು ಅವಧಿಗೆ ಸೀಮಿತಗೊಳಿಸಿರುವುದರಿಂದ ರಾಜಕೀ ಯ ಹಿನ್ನೆಲೆ ಹೊಂದಿರದವರು ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ZP Chikkamagalur ಅಧ್ಯಕ್ಷೆ ಶಾರದಾ ಮಾಸ್ತೇಗೌಡ ಮಾತನಾಡಿ ಪಂಚಾಯಿತಿಗೆ ಒಟ್ಟು ಏಳು ಗ್ರಾಮಗಳು ಒಳಗೊಂಡಿರುವ ಹಿನ್ನೆಲೆಯಲ್ಲಿ ಹಲವಾರು ಕುಂದುಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಗಮನಹರಿಸಲಾಗಿದೆ. ಪಶುಆಸ್ಪತ್ರೆ, ಸ್ಮಶಾನದ ಅವಶ್ಯಕತೆಯಿರುವ ಕಾರಣ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡ ಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಜೆ.ಎನ್.ಮಂಜೇಗೌಡ, ಸದಸ್ಯರಾದ ಹೆಚ್.ಎಂ.ಮಂಜೇಗೌಡ, ಯಶ್ವಂತ್ ರಾಜ್ ಅರಸ್, ಲಲಿತ ಶಿವಾನಂದ, ಸ್ವಪ್ನ ಚಂದ್ರಶೇಖರ್, ಕವಿತ ಶಿವರಾಮ್, ಜಯಂತಿ ನಾಗರಾಜ್, ಅಂಬಳೆ ಹೋಬಳಿ ಬಿಜೆಪಿ ಅಧ್ಯಕ್ಷ ಕೃಷ್ಣೇಗೌಡ, ಮುಖಂಡರುಗಳಾದ ಎಂ.ಎಸ್.ನಿರಂಜನ್, ಪುಷ್ಪರಾಜ್, ಮಣೇನಹಳ್ಳಿ ರಾಜು, ಪಿ.ರಾಜೀವ, ಕೃಷ್ಣಮೂರ್ತಿ, ದಿನೇಶ್, ಮಾಸ್ತೇಗೌಡ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...