Saturday, October 10, 2026
Saturday, October 10, 2026

Cardiac Surgery ಚಿಕ್ಕಮಗಳೂರು ಆಶ್ರಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತರೆದ ಹೃದಯಶಸ್ತ್ರ ಚಿಕಿತ್ಸೆ

Date:

Cardiac Surgery ಚಿಕ್ಕಮಗಳೂರು, ಜಿಲ್ಲೆಯ ಆಶ್ರಯ ಮಲ್ಟಿಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಆಶ್ರಯ ಹೃದಯ ಸಂಸ್ಥೆ ಪ್ರಪ್ರಥಮ ಬಾರಿಗೆ ಡಾ.ಅನಿಕೇತ್ ವಿಜಯ್ ಬಾಳೆಗದ್ದೆ ಮತ್ತು ಡಾ.ಜಿ.ಟಿ.ಸುದರ್ಶನ್ ಅವರ ನೇತೃತ್ವದಲ್ಲಿ ಪ್ರಮುಖ ತೆರೆದ ಹೃದಯ ಬಡಿತ ಹೃದಯ ಹೃದಯ ಬೈಪಾಸ್ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ.

ನಲವತ್ತು ವರ್ಷದ ರೋಗಿ ಯಲ್ಲಪ್ಪ ಅವರು ಎದೆನೋವು ಅಸ್ವಸ್ಥತೆಯಿಂದ ಆಶ್ರಯ ಆಸ್ಪತ್ರೆಗೆ ಬಂದಿದ್ದು ಕೊರೋನರಿ ಅಂಜಿಯೋಗ್ರಮ್ ಮಾಡಿದಾಗ ಹೃದಯದ 3 ರಕ್ತನಾಳಗಳ ನಿರ್ಭಂಧ ರೋಗವನ್ನು ತೋರಿ ಸಲಾಗಿದೆ.

ಬದುಕುಳಿಯಲು ಅವರಿಗೆ ತುರ್ತು ಬೈಪಾಸ್ ಶಸ್ತçಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿದು ಬಂದಿದೆ.
ಮುಖ್ಯ ಹೃದ್ರೋಗ ತಜ್ಞ ಡಾ. ಅನಿಕೇತ್ ವಿಜಯ್ ಬಾಳೆಗದ್ದೆ, ಮುಖ್ಯ ಕಾರ್ಡಿಯೋಥೊರಾಸಿಕ್ ಸರ್ಜನ್ ಡಾ.ಜಿ.ಟಿ.ಸುದರ್ಶನ್, ಅರವಳಿಕೆ ತಜ್ಞ ಡಾ.ಅಶೋಕ್, ಶಸ್ತçಚಿಕಿತ್ಸಾ ಸಹಾಯಕ ಡಾ.ಸಂತೋಷ್, ಪರ್ಪ್ಯೂಷನಿಸ್ಟ್ ಸಿದ್ದಾರ್ಥ್, ತೀವ್ರ ನಿಘಾಘಟಕದ ತಜ್ಞೆ ಡಾ.ಸುಧಾ, ಡಾ.ರವಿಕುಮಾರ್, ನಿರಂಜನ್ ಮತ್ತಿತರರು ಇದ್ದರು.

ಆಸ್ಪತ್ರೆ ಮಲ್ಟಿಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಆಶ್ರಯ ಹೃದಯ ಸಂಸ್ಥೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಸೈಂಟಿoಗ್, ಪೇಸ್‌ಮೇಕರ್ ಮತ್ತು ತೆರೆದ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ.

Cardiac Surgery ಆಶ್ರಯ ಆಸ್ಪತ್ತೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೃದ್ರೋಗ ವಿಭಾಗವು 1500ಕ್ಕೂ ಹೆಚ್ಚು ತುರ್ತು ಅಂಜಿಯೋಗ್ರಾಮ್, ಪೇಸ್‌ಮೇಕರ್ ಮತ್ತು ಇನ್ನಿತರೆ ಜೀವ ಉಳಿಸುವ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...