Friday, September 27, 2024
Friday, September 27, 2024

Dept of Heavy Industries Govt of Karnataka ಸ್ವಿಸ್ ಕಂಪೆನಿಗಳ ಜೊತೆ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಹಭಾಗಿತ್ವಕ್ಕೆ ಸರ್ಕಾರದ ಮುಕ್ತ ಅವಕಾಶ- ಸಚಿವ ಎಂ.ಬಿ.ಪಾಟೀಲ್

Date:

Dept of Heavy Industries Govt of Karnataka ವಿಜ್ಞಾನ ಮತ್ತು ಸಂಶೋಧನೆ ಹಾಗೂ ನಾವೀನ್ಯತೆ ವಿಷಯದಲ್ಲಿ ರಾಜ್ಯದ‌ ಜತೆ ಕೆಲಸ‌ ಮಾಡಲು, ಸ್ವಿಟ್ಜರ್ಲೆಂಡ್ ಆಸಕ್ತಿ ವ್ಯಕ್ತಪಡಿಸಿದ್ದು, ಈ ಸಂಬಂಧವಾಗಿ ಆ ದೇಶದ ಕಾನ್ಸುಲ್‌ ಜನರಲ್‌ ಜೋನಾಸ್ ಬ್ರನ್ಶ್‌ವಿಗ್‌ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರೊಂದಿಗೆ ಸೋಮವಾರ ಇಲ್ಲಿ ವಿಸ್ತೃತ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ರನ್ಶ್‌ವಿಗ್‌ ಅವರು, “ಸ್ವಿಟ್ಜರ್ಲೆಂಡ್‌ ಮತ್ತು ಕರ್ನಾಟಕದ ನಡುವೆ ಇರುವ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಇಂಡೋ-ಸ್ವಿಸ್‌ ಇನ್ನೋವೇಶನ್‌ ಪ್ಲಾಟ್‌ಫಾರಂ ಎನ್ನುವ ಸಾಂಸ್ಥಿಕ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ.

ಬೆಂಗಳೂರಿನಲ್ಲಿರುವ ನ್ಯಾಷನಲ್‌ ಸೆಂಟರ್‍‌ ಫಾರ್‍‌ ಬಯಲಾಜಿಕಲ್‌ ಸೈನ್ಸಸ್‌(ಎನ್‌ಸಿಬಿಎಸ್‌)ನಲ್ಲಿ ಮೂರು ದಿನಗಳ ಸಮಾವೇಶ ನಡೆಸುವ ಮೂಲಕ ಈ ವೇದಿಕೆಗೆ ಚಾಲನೆ ನೀಡಲಾಗುವುದು. ಇದರಲ್ಲಿ ಭಾರತ ಮತ್ತು ಸ್ವಿಸ್‌ಗಳ ತಲಾ 25 ಪರಿಣತರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.

ಕರ್ನಾಟಕದಲ್ಲಿ ಸ್ವಿಟ್ಜರ್ಲೆಂಡ್‌ನ 49 ಕಂಪನಿಗಳು ಸಕ್ರಿಯವಾಗಿದ್ದು, 17,800 ಉದ್ಯೋಗಾವಕಾಶ ಸೃಷ್ಟಿಸಿವೆ. ಇದರ ಪೈಕಿ ಸರಿಸುಮಾರು 40 ಕಂಪನಿಗಳು ರಾಜ್ಯದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿವೆ. ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಸಮಾವೇಶದಲ್ಲಿ ಆಂಟಿಮೈಕ್ರೋಬಯಲ್‌ ರೆಸಿಸ್ಟೆನ್ಸ್‌ (ಎಎಂಆರ್‍‌) ಕುರಿತು ಹೆಚ್ಚಿನ ಗಮನ ಹರಿಸುವುದು ಮುಖ್ಯ ಉದ್ದೇಶವಾಗಿದೆ. ಇದು ಅಂತಿಮವಾಗಿ ಶಿಕ್ಷಣ ಕ್ಷೇತ್ರ ಮತ್ತು ಉದ್ಯಮದ ನಡುವಿನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಲು ನೆರವಾಗಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ಹಲವು ಸ್ವಿಸ್‌ ಉದ್ದಿಮೆಗಳಿವೆ. ಒಟ್ಟಾರೆಯಾಗಿ ತಮ್ಮ ದೇಶದ ಕಂಪನಿಗಳು ಭಾರತದಲ್ಲಿ ಹೂಡುತ್ತಿರುವ ಬಂಡವಾಳ ಪ್ರಮಾಣವು 2015ರಿಂದ 2022ರ ನಡುವೆ ಶೇಕಡ 53ರಷ್ಟು ಏರಿಕೆ ಕಂಡಿದೆ. ಹಾಗೆಯೇ ಭಾರತದ ಕಂಪನಿಗಳು ಸ್ವಿಸ್‌ನಲ್ಲಿ ಹೂಡುತ್ತಿರುವ ಬಂಡವಾಳದಲ್ಲೂ ಕಳೆದ ಏಳು ವರ್ಷಗಳಲ್ಲಿ ಶೇಕಡ 9ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದು ಅವರು ವಿವರಿಸಿದರು.

ಇದಕ್ಕೆ ಸ್ಪಂದಿಸಿ ಮಾತನಾಡಿದ ಸಚಿವರು, “ಭಾರತ ಒಂದು ಬೃಹತ್‌ ರಾಷ್ಟ್ರವಾಗಿದ್ದು, ಇಲ್ಲೂ ರಚನಾತ್ಮಕ ಪರಿವರ್ತನೆಗಳು ಕಾಣಿಸುತ್ತಿವೆ. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಮಂದಿರದಂತಹ ಹತ್ತಾರು ಅತ್ಯುತ್ತಮ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿದ್ದು, ಸ್ವಿಸ್‌ ಕಂಪನಿಗಳು ಇವುಗಳ ಜತೆಗೂಡಿ ಅಧ್ಯಯನ ಮತ್ತು ಸಹಭಾಗಿತ್ವ ನಡೆಸಬೇಕು. ಇದಕ್ಕೆ ಸರಕಾರವು ಮುಕ್ತ ಅವಕಾಶ ನೀಡಲಿದೆ” ಎಂದರು.

Dept of Heavy Industries Govt of Karnataka ಡಿಕಾರ್ಬನೈಸೇಷನ್‌, ಪರಿಸರಸ್ನೇಹಿ ಇಂಧನ ಇವೆಲ್ಲವೂ ಇಲ್ಲಿ ನಡೆಯಬೇಕಿದೆ. ಇದಕ್ಕಾಗಿ ಎಲ್ಲೆಡೆ ಹಸಿರು ಕವಚವನ್ನು ಸೃಷ್ಟಿಸಬೇಕು. ಇಂತಹ ಆಸಕ್ತಿ ಸಾರ್ವಜನಿಕರಲ್ಲೂ ಹುಟ್ಟಬೇಕು. ಮಂಗಳೂರಿನಲ್ಲಿ ಹಸಿರು ಇಂಧನ ಉತ್ಪಾದಿಸಲು ಸರಕಾರ ಮುಂದಡಿ ಇಟ್ಟಿದ್ದು, ಅಪಾರ ಪ್ರಮಾಣದ ಹೂಡಿಕೆ ಹರಿದು ಬರುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅವರು, ತಮ್ಮ ಸ್ವಂತ ಜಿಲ್ಲೆಯಾದ ವಿಜಯಪುರದಲ್ಲಿ ತಾವು ಸ್ವಯಂ ಆಸಕ್ತಿಯಿಂದ 1.5 ಕೋಟಿ ಸಸಿ ನೆಟ್ಟಿರುವ ಕೋಟಿ ವೃಕ್ಷ‌ ಅಭಿಯಾನದ ವಿಡಿಯೋ ತುಣಕನ್ನು ಸ್ವಿಸ್‌ ಕಾನ್ಸುಲ್‌ ಜನರಲ್‌ಗೆ ತೋರಿಸಿದರು.

ಮಾತುಕತೆಯ ವೇಳೆ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ, ಉದ್ಯೋಗ ಮಿತ್ರದ ಸಿಇಒ ದೊಡ್ಡ‌ ಬಸವರಾಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...