Tuesday, March 11, 2025
Tuesday, March 11, 2025

Uttaradi Mutt ನಾರದರೆಂದರೆ ಜಗಳ ಹಚ್ಚುವವರಲ್ಲ. ಭಗವದ್ಭಕ್ತಿ ಉದ್ದೀಪಿಸುವವರು- ಶ್ರೀಸತ್ಯಾತ್ಮ ತೀರ್ಥರು

Date:

Uttaradi Mutt ನಾರದ ಮಹರ್ಷಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಅವರು ಜಗಳ ಹಚ್ಚುವವರಲ್ಲ. ಭಗವಂತನ ಸಂಕಲ್ಪವನ್ನು ಪೂರ್ಣ ಮಾಡಿಸುವ ಕೈಂಕರ್ಯ ಮಾಡುತ್ತಿರುವ ಪರಮಹಂಸರು, ಸನ್ಯಾಸಿಗಳು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ಸಜ್ಜನರಿಗೆ ಅವರೊಳಗೆ ಸ್ವಾಭಾವಿಕವಾಗಿಯೇ ಇರುವ ದೇವರಲ್ಲಿನ ಭಕ್ತಿಯನ್ನು ಪ್ರವರ್ಧನ ಮಾಡುವವರು. ಉದ್ದೀಪನ ಮಾಡುವವರು. ಅದೇರೀತಿ ದುರ್ಜನರಿಗೆ ಅವರೊಳಗಿದ್ದ ದೋಷಗಳನ್ನು ಹೊರಹಾಕುವಂತೆ ಮಾಡುವವರೇ ಹೊರತು ನಾರದರೇ ಹೇಳಿ ದೋಷವನ್ನು ಮಾಡಿಸುವವರಲ್ಲ ಎಂದರು.

Uttaradi Mutt ಸಭಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಹೃಷೀಕೇಶಾಚಾರ್ಯ ಮಠದ, ದೇವರು, ಶ್ರೀ ಸತ್ಯಧರ್ಮ ತೀರ್ಥರು ಮತ್ತು ಶ್ರೀ ಸತ್ಯಾತ್ಮ ತೀರ್ಥರು ಮೂವರನ್ನೂ ಕುರಿತ ಒಂದೇ ಶ್ಲೋಕವನ್ನು ಚಮತ್ಕಾರಿಕವಾಗಿ ರಚಿಸಿ ಸಭೆಯಲ್ಲಿ ಅರ್ಥಸಹಿತ ಮಂಡಿಸಿದರು.

ಆಚಾರ್ಯರ ವಾಕ್ಯಗಳು, ದೇವರ ರೂಪಗಳು, ಟೀಕಾಚಾರ್ಯರ ಪ್ರತಿ ಶಬ್ದಕ್ಕೂ ಅನೇಕಾರ್ಥ ತಿಳಿಸುವ ಶ್ರೀ ಸತ್ಯಾತ್ಮ ತೀರ್ಥರು ಶ್ರೀಕೃಷ್ಣ ಮತ್ತು ಮುಖ್ಯ ಪ್ರಾಣದೇವರ ಚರ ಪ್ರತಿಮೆಗಳಂತೆ ಎಂದು ವರ್ಣಿಸಿದರು.

ಶ್ರೀಗಳ ಅನುಗ್ರಹದಿಂದ ನಮ್ಮೆಲ್ಲರಿಗೆ ಒಳ್ಳೆಯ ಚಾರಿತ್ರ‍್ಯ, ಪರಮಾತ್ಮನ ಗುಣಗಳ ಸ್ಮರಣೆ ಮಾಡುವ ಸ್ವಭಾವ, ವಿಶೇಷವಾಗಿ ಪರಮಾತ್ಮನ ಬಗ್ಗೆ ಸತ್ಯವಾದ ಜ್ಞಾನ ಲಭಿಸಲಿ ಎಂದು ಪ್ರಾರ್ಥಿಸಿದರು.

ಇದೇ ವೇಳೆ ಶ್ರೀಪಾದಂಗಳವರಿಗೆ ಶ್ರೀಮುಷ್ಣಂನಿಂದ ವರಾಹದೇವರ ಶೇಷವಸ್ರ್ತ ಮತ್ತು ಪ್ರಸಾದ ಹಾಗೂ ನಿಂಬಾದ್ರಿ ಕ್ಷೇತ್ರದ ಶ್ರೀ ನರಸಿಂಹ ದೇವರ ನಿರ್ಮಾಲ್ಯ ಮತ್ತು ಗಂಧವನ್ನು ಸಮರ್ಪಣೆ ಮಾಡಲಾಯಿತು.

ಸಭೆಯಲ್ಲಿ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಖಜಾಂಚಿ ರಾಮಧ್ಯಾನಿ ಅನಿಲ್, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಜೆಸಿಐ ನಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆ- ಸೂರ್ಯ ನಾರಾಯಣ ವರ್ಮ

JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ...

Karnataka Lokayukta ಮಾರ್ಚ್ 18 ರಿಂದ 21 ವರೆಗೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಫಣೀಂದ್ರ ಅವರ ಜಿಲ್ಲಾ ಕಾರ್ಯಕ್ರಮಗಳ ಮಾಹಿತಿ

Karnataka Lokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18...

CM Siddharamaih ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್…!

CM Siddharamaih ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ...

Guarantee Scheme ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ.‌ ಊಹಾಪೋಹಗಳಿಗೆ ಬೆಲೆಕೊಡಬೇಡಿ- ಸಿ.ಎಸ್.ಚಂದ್ರಭೂಪಾಲ್

Guarantee Scheme ಕರ್ನಾಟಕ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ,...