Saturday, September 28, 2024
Saturday, September 28, 2024

Narasimharaju ಹಾಸ್ಯ ಚಕ್ರವರ್ತಿ-100

Date:

Narasimharaju ಕನ್ನಡ ಚಿತ್ರರಂಗದಲ್ಲಿ ಬಾಲಕೃಷ್ಣ- ನರಸಿಂಹ ರಾಜು ಜೋಡಿ ಎಂದರೆ ಅವರು ಕನ್ನಡದ
ಲಾರೆಲ್- ಹಾರ್ಡಿ ನಟರಿಗೆ ಹೋಲಿಕೆ ಮಾಡುವುದುಂಟು. ಆರಂಭದಲ್ಲಿ ರಂಗಭೂಮಿಯ‌ ಪಡಿನೆಳಲಾಗಿದ್ದ ಕನ್ನಡ ಚಿತ್ರರಂಗದ ಹಾಸ್ಯಕ್ಕೆ ಒಂದು ಸ್ಟೇಟಸ್ ಲಭಿಸಲು
ಈ ನಟರ ಕೊಡುಗೆ ಅಪಾರ.

ನರಸಿಂಹರಾಜು ಮಾತು ಮತ್ತು ಆಂಗಿಕ ನಟನೆ ಎರಡರಲ್ಲೂ ನಗೆ ಚಿಮ್ಮುವಂತೆ ಮಾಡುತ್ತಿದ್ದರು.
ಬಾಲಣ್ಣ ಏನೂ‌ ಕಡಿಮೆಯಲ್ಲ. ಅವರ ಮಾತೇ , ಮಾತಿನ ವರಸೆಗಳಿಂದ
ವಿಚಿತ್ರ ವಿದೂಷಕನಂತಾಗಿಬಿಡುತ್ತಿದ್ದರು.ಹೀಗಾಗಿ ಬಾಲಣ್ಣ ಮತ್ತು ನರಸಿಂಹರಾಜು ಕನ್ನಡ ಚಿತ್ರಗಳಲ್ಲಿ ಹಾಸ್ಯ ಸನ್ನಿವೇಶಗಳಿಗೆ ಅನಿವಾರ್ಯವಾಗಿದ್ದರು. ಪ್ರೇಕ್ಷಕರೂ ಹಾಗೇ ಇವರೀರ್ವರ ಹಾಸ್ಯ, ಅಭಿನಯವನ್ನ ಮನದುಂಬಿ‌ಮೆಚ್ವಕೊಂಡಿದ್ದರು . ನರಸಿಂಹರಾಜು ಜನಿಸಿದ್ದು ತಿಪಟೂರಿನಲ್ಲಿ .
(ಜುಲೈ 24, 1923.)
ತಂದೆ ರಾಮರಾಜು ಪೊಲೀಸ್ ಇಲಾಖೆಯಲ್ಲಿದ್ದರು. ತಾಯಿ ವೆಂಕಟಲಕ್ಷ್ಮಮ್ಮ.

ನರಸಿಂಹರಾಜು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಬಾಲಕಲಾವಿದರಾಗಿ ರಂಗಭೂಮಿ ಪ್ರವೇಶಮಾಡಿದರು. ಅವರ ನಿಲುವು,ಭಂಗಿ‌ನೋಡಿದರೆ ಸಾಕು ಜನ ನಗುತ್ತಿದ್ದರಂತೆ. ಇಪ್ಪತ್ತೇಳು ವರ್ಷ ಅವರು ನಾಟಕ ಕಂಪನಿಯಲ್ಲೇ ಇದ್ದರು. ಆರಂಭದಲ್ಲಿ‌ ಶ್ರೀಚಂದ್ರಮೌಳೇಶ್ವರ ನಾಟಕ ಸಭಾ, ಎಡತೊರೆ ಕಂಪೆನಿ, ಹಿರಣ್ಣಯ್ಯ ಮಿತ್ರಮಂಡಳಿ, ಭಾರತ ಲಲಿತ ಕಲಾಸಂಘ, ಗುಂಡಾ‌ಜೊಯಿಸರ ಕಂಪೆನಿ, ಕೊನೆಗೆ ಅವರ ದೀರ್ಘ ಕಲಾಸೇವೆ ಪ್ರಸಿದ್ಧ ಗುಬ್ಬಿಯ ಚೆನ್ನಬಸವೇಶ್ವರ ನಾಟಕ‌ಕಂಪನಿಯಲ್ಲಿ‌‌ ಆಯಿತು.ಅವರಿಗೆ ಬ್ರೇಕ್ ಕೊಟ್ಟ ಚಿತ್ರ ಬೇಡರ ಕಣ್ಣಪ್ಪ. ಈ ಚಿತ್ರ ವರನಟ ಡಾ.ರಾಜ್ ಕುಮಾರ್ ಅವರ ಮೊದಲ ಚಿತ್ರವೂ ಆಗಿತ್ತು. ಮುಂಚೆ ರಂಗಭೂಮಿಯಲ್ಲಿ‌ ಬೇಡರ ಕಣ್ಣಪ್ಪ ನಾಟಕದಲ್ಲಿ ನರಸಿಂಹರಾಜು
ಅವರು ಅಭಿನಯಿಸಿದ ಪಾತ್ರವನ್ನೇ ಅದೇ ಹೆಸರಿನ ಸಿನಿಮಾದಲ್ಲೂ ನಿರ್ವಹಿಸಿ‌ ‌”ಸೈ‌” ಅನಿಸಿಕೊಂಡರು. ನರಸಿಂಹ ರಾಜು ಅವರನ್ನ ಬಹುವಾಗಿ ಮೆಚ್ಚಿದ್ದವರಲ್ಲಿ ಡಾ.ರಾಜ್ ಕುಮಾರ್ ಕೂಡ ಒಬ್ಬರು.
ನಿರ್ಮಾಪಕರು ನರಸಿಂಹ ರಾಜು ಅವರ ಕಾಲ್ ಶೀಟ್ ಪಡೆದುಕೊಂಡೇ ರಾಜಣ್ಣನವರಂತಹ ನಾಯಕರನ್ನ ಬುಕ್ ಮಾಡುತ್ತಿದ್ದರಂತೆ.
” ಮೊದಲು‌ನರಸಿಂಹರಾಜು ಅವರ ಕಾಲ್ ಶೀಟ್ ಪಡೆದುಕೊಂಡು ಬನ್ನಿ ಎಂದು ನಾಯಕ ನಟರು‌ ಹೇಳುತ್ತಿದ್ದರು.
ಅಷ್ಟು ಡಿಮ್ಯಾಂಡ್ ಹಾಸ್ಯ ಚಕ್ರವರ್ತಿಗಿತ್ತು.

ಡಾ.ರಾಜ್ ಅವರೊಂದಿಗೆ ಸಿನಿಮಾ ಜರ್ನಿ‌ ಆರಂಭ. ಆದರೆ 250 ಚಿತ್ರಗಳನ್ನ ಡಾ.ರಾಜ್ ಗಿಂತ ಮುಂಚೆಯೇ ಮುಗಿಸಿದರು.

ಅವರನ್ನ ಮ್ಯಾನರಿಸಂ ನಲ್ಲಿ
ಚಾರ್ಲಿ ಚಾಪ್ಲಿನ್ ಇದ್ದ. ಅವರ ಮಾತುಗಳಲ್ಲಿ‌ ಕನ್ನಡ ಕಸ್ತೂರಿ ತುಂಬಿತ್ತು.
ನಗೆ ಚಿಮ್ಮಿಸುವಲ್ಲಿ ಅವರ ಅಭಿನಯದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ
ಕಡಿಮೆ ಎನಿಸಲಿಲ್ಲ. ಸಿನಿಮಾದಲ್ಲೇ ಇದ್ದರೂ ರಂಗದ ನಂಟು ಬಿಟ್ಟಿರಲಿಲ್ಲ.

ಮುಂಚಿನ ಮದ್ರಾಸಿನಲ್ಲೇ ಆಗಲೇ ಮನೆಮಾಡಿಕೊಂಡಿದ್ದ ಕನ್ನಡ ನಟರಲ್ಲಿ ನರಸಿಂಹರಾಜು ಮೊದಲಿಗರು.ನಂತರ ಬೆಂಗಳೂರಿಗೆ ಶಿಫ್ಟ್ ಆದರು.

ಅಭಿನಯದ ಎಲ್ಲಾ ಮಗ್ಗುಲು ಮತ್ತು ಮಜಲುಗಳಲ್ಲಿ
ಮಾಸ್ಟರ್ ಆಗಿದ್ದರಿಂದಲೇ ಹಾಸ್ಯ ಚಕ್ರವರ್ತಿ‌ ಬಿರುದು ತಾನಾಗಿಯೇ ಒಲಿದು ಬಂದಿತ್ತು.ಡಾ.ರಾಜ್ ಅವರ‌ ಅಭಿನಯದ ಚಿತ್ರಗಳಲ್ಲಿ‌ ನರಸಿಂಹ ರಾಜು ಅವರಿಗೆ ಸೂಕ್ತ ಪಾತ್ರ ಇರುತ್ತಿತ್ತು.
ಡಾ ರಾಜ್ ಅವರೊಂದಿಗೆ ಅಷ್ಟು ಆತ್ಮೀಯತೆ ಬೆಸೆದು ಕೊಂಡಿತ್ತು.

ಉಬ್ಬುಹಲ್ಲು ಎಂದರೆ ಆಗಿನವರ ಮಾತಿನಲ್ಲಿ “ಅವನಾ …
ನರಸಿಂಹ ರಾಜು ಕಣೋ”. ಎನ್ನವ ವಾಡಿಕೆ ಬಂದುಬಿಟ್ಟಿತ್ತು.ನಗೆ ನಟರಿಗೆ ಸಾಮಾಜಿಕ ವಸ್ತುವುಳ್ಳ ಚಿತ್ರಗಳಲ್ಲಿ ಅವಕಾಶ ಆಗ ಹೇರಳವಾಗಿತ್ತು.
ಆದರೆ ” ಬಾಂಡ್ ಶೈಲಿ” ‌ಸಿನಿಮಾಗಳಲ್ಲಿ ನರಸಿಂಹರಾಜುಗೆ
ಸಿಐಡಿ 999 ನಾಯಕ ಡಾ.ರಾಜ್ ಜೊತೆ
ಸಹ ಪತ್ತೇದಾರನ ಪಾತ್ರ ನೀಡಿ ,ಹಾಸ್ತ ಚಕ್ರವರ್ತಿಯ ಸಿನಿಮಾ ಪಯಾಣಕ್ಕೆ ಹೊಸ ತಿರುವು ನೀಡಿದರು.
ಆ ಖ್ಯಾತಿ ದೊರೈ ಭಗವಾನ್ ಜೋಡಿಗೆ ಸಲ್ಲಬೇಕು.ನರಸಿಂಹರಾಜು‌ ಸ್ವಂತ ಚಿತ್ರವನ್ನೂ ನಿರ್ಮಿಸಿದರು.
” ಪ್ರೊಫೆಸರ್ ಹುಚ್ಚೂರಾಯ” ಚಿತ್ರದಲ್ಲಿ ಅವರೇ ಹೀರೋ.ನಗೆ ನಟರ ಜೀವನದಲ್ಲಿ‌ ಆಂತರ್ಯದಲ್ಲಿ ನೋವು ತುಂಬಿರುತ್ತದೆ ಎಂಬ Narasimharaju ಮಾತಿದೆ. ಅದಕ್ಕೆ ನರಸಿಂಹರಾಜು ಹೊರತಾಗಿರಲಿಲ್ಲ.
ಪುತ್ರ ಶ್ರೀಕಾಂತ, ಅಗ್ನಿ ಅನಾಹುತದಲ್ಲಿ‌ ಕೊನೆಯುಸಿರೆಳೆದ
ಘಟನೆಯ ನಂತರ ಅವರಿಗೆ “ನಗೆ” ಸಂಜೀವಿನಿಯಾಗಲಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...