Gyanvapi Mosque ವಾರಣಾಸಿ ಮಸೀದಿ ಸಂಕೀರ್ಣದ ವಿಸ್ತೃತ ವೈಜ್ಞಾನಿಕ ಸಮೀಕ್ಷೆಗೆ ಜುಲೈ 26 ರ ಸಂಜೆ 5:00 ವರೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಮಸೀದಿ ಸ್ಥಳದಲ್ಲಿ ಯಾವುದೇ ಸಮೀಕ್ಷೆ ನಡೆಸಬಾರದು ಎಂದು ಸೂಚಿಸಿದೆ.
ವಾರಣಾಸಿ ಜಿಲ್ಲಾ ಕೋರ್ಟ್ ಜುಲೈ 21ರಂದು ಸಮೀಕ್ಷೆಗೆ ಆದೇಶಿಸಿದೆ. ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಅಗತ್ಯ ಇರುವುದರಿಂದ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ಯಾಜ್ಞೆ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ತಕ್ಷಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಗಮನಕ್ಕೆ ತರಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ಅವರಿಗೆ ಕೋರ್ಟ್ ಸೂಚಿಸಿತು. ಅಲ್ಲದೆ ಪ್ರತಿ ವಾದಿಯಾದ ಮಸೀದಿ ಸಮಿತಿಯ ಅಹವಾಲು ಆಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಗೆ ನಿರ್ದೇಶನ ನೀಡಿತು.
Gyanvapi Mosque ಜಿಲ್ಲಾ ಕೋರ್ಟ್ ಆದೇಶದಂತೆ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳುವ ಹಿನ್ನೆಲೆಯಲ್ಲಿ, ತುರ್ತು ವಿಚಾರಣೆ ಕೋರಿ ಜ್ಞಾನವ್ಯಾಪಿ ಮಸೀದಿಯ ಅಂಜುಮನ್ ಇಂತೆಜಾಮೀಯಾ ಸಮಿತಿಯು ಸುಪ್ರೀಂ ಮೆಟ್ಟಿಲೇರಿತ್ತು. ಜಿಲ್ಲಾ ಕೋರ್ಟ್ ಆದೇಶವನ್ನು ಪ್ರಶ್ನಿಸಿ, ಹೈಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು ಎಂದು ಸಂವಿಧಾನದ 227 ನೇ ವಿಧಿ ಯಲ್ಲಿ ದತ್ತವಾಗಿರುವ ಅಧಿಕಾರಿ ವ್ಯಾಪ್ತಿಯಲ್ಲಿ ಸೂಚನೆ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿತು.