Transport Department ಬಜೆಟ್ ಘೋಷಣೆಯಂತೆ ಮೋಟಾರ್ ವಾಹನಗಳ ತೆರಿಗೆ ಪರಿಷ್ಕರಣೆ ಜುಲೈ 24 ರಿಂದಲೇ ಜಾರಿಯಾಗಿದೆ.
ಇದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ 472 ಕೋಟಿ ಹೆಚ್ಚುವರಿ ವರಮಾನ ಸಂಗ್ರಹಿಸುವ ಗುರಿ ಇದೆ. ಆಯ್ದ ವಾಹನಗಳ ತೆರಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಮಂಡಿಸಿದ ಬಜೆಟ್ ನಲ್ಲಿ ಪ್ರಕಟಿಸಿದ್ದರು.
ಅದಕ್ಕೆ ಪೂರಕವಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಮಸೂದೆ 2023 ಕ್ಕೆ ವಿಧಾನಮಂಡಲದ ಒಪ್ಪಿಗೆ ಪಡೆಯಲಾಗಿತ್ತು. ಶಾಲೆ, ಕಾಲೇಜುಗಳ ವಾಹನಗಳು, ಅತಿ ಭಾರದ ಸರಕು ಸಾಗಣೆ ವಾಹನಗಳು, ಮೋಟಾರು ಕ್ಯಾಬ್ ಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ.
ಶಾಲೆಗಳ ಒಡೆತನದಲ್ಲಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್ ಗೆ ತೆರಿಗೆಯನ್ನು 20ರೂ. ರಿಂದ 100 ರೂ.ಕ್ಕೆ ಏರಿಕೆ ಮಾಡಲಾಗಿದೆ. ಇತರ ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್ ವಿಸ್ತೀರ್ಣದ ತೆರಿಗೆಯನ್ನು 80 ರೂ .ರಿಂದ 200 ರೂ.ಕ್ಕೆ ಹೆಚ್ಚಿಸಲಾಗಿದೆ.
15 ಲಕ್ಷ ರೂಪಾಯಿ ಕ್ಕಿಂತ ಹೆಚ್ಚಿನ ಬೆಲೆಯ ಕ್ಯಾಬ್ ಗಳಿಗೆ ಮಾತ್ರ ಆ ವಾಹನದ ಮೌಲ್ಯದ ಶೇ.15ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.
Transport Department ಇನ್ನು ಮುಂದೆ 10 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿವರೆಗಿನ ಬೆಲೆಯ ಕ್ಯಾಬ್ ಗಳಿಗೆ ಅವುಗಳ ಮೌಲ್ಯದ ಶೇ. 9ರಷ್ಟು ತೆರಿಗೆ ವಿಧಿಸಲಾಗುತ್ತದೆ. 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ಕ್ಯಾಬ್ ಗಳಿಗೆ ಈ ಹಿಂದಿನಂತೆಯೇ ಅವುಗಳ ಮೌಲ್ಯದ ಶೇ. 15ರಷ್ಟು ತೆರಿಗೆ ವಿಧಿಸಲಾಗುತ್ತದೆ.