Veerabhadreshwar Swami Jayanti ಸನಾತನ ಧರ್ಮದಲ್ಲಿ 33 ಕೋಟಿ ದೇವತೆಗಳಿದ್ದು ಪ್ರತಿಯೊಂದು ಕಾಲಘಟ್ಟದಲ್ಲಿ ಅನ್ಯಾಯ, ಅಧರ್ಮ, ಅನೀತಿ ಇವುಗಳನ್ನು ತಡೆಯಲು, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಲು ದೇವತೆಗಳು ಅನೇಕ ಅವತಾರ ಎತ್ತಿ ಧರ್ಮ ರಕ್ಷಣೆ ಮಾಡಿದ್ದಾರೆ.
ಶಿವಮಾನಸ ಪುತ್ರ ಎನಿಸಿದ ಶ್ರೀ ವೀರಭದ್ರೇಶ್ವರ ಸ್ವಾಮಿಯು ಭಾದ್ರಪದ ಮಾಸದ ಮೊದಲನೇ ಮಂಗಳವಾರ ಜನಿಸಿದರು ಎಂಬ ವಿಷಯ ಜನಜನಿತವಾಗಿದೆ.
ಆದ್ದರಿಂದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ 2019ನೇ ವರ್ಷದಿಂದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತಿ ಆಚರಣೆ ಮಾಡುತ್ತಾ ಬಂದಿದೆ. ಅದೇ ರೀತಿ ಈ ವರ್ಷ ಸೆಪ್ಟೆಂಬರ್ 19ರಂದು ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಆ ಪ್ರಯುಕ್ತ ಶಿವಮೊಗ್ಗ ನಗರದ ಚೌಕಿಮಠದ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯ ಕ್ರಮದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಪ್ರತಿಯೊಂದು ಮನೆ ಮನೆಗಳಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲೆ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಾಗರಾಣಿ ಗಂಗಾಧರಯ್ಯ ಇವರು ಮನವಿ ಮಾಡಿಕೊಂಡಿರುತ್ತಾರೆ.
Veerabhadreshwar Swami Jayanti ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಗೌರಮ್ಮ ಷಡಕ್ಷರಿ, ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಅನುರಾಧ ಉಮೇಶ್, ಮಧ್ಯ ಕರ್ನಾಟಕದ ಉಪಾಧ್ಯಕ್ಷೆ ಶ್ರೀಮತಿ ಶಾರದಮ್ಮ, ಶ್ರೀಮತಿ ವಾಣಿ ಶಶಿಧರ, ಶ್ರೀಮತಿ ಲಲಿತ ಪ್ರಕಾಶ್, ಶ್ರೀಮತಿ ಉಮ,, ಶ್ರೀಮತಿ ಗೀತಾ ಗೌಡರ್, ಶ್ರೀಮತಿ ಪಾರ್ವತಮ್ಮ, ಶ್ರೀಮತಿ ಸಪ್ನಾ ಉಪಸ್ಥಿತರಿದ್ದರು.