SC, ST Officers ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಚಿಕ್ಕಮಗಳೂರು ವಿಭಾಗದ ಎಸ್ಸಿ, ಎಸ್ಟಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವಿಭಾಗ ಮಟ್ಟದ ಕಚೇರಿಯನ್ನು ನಗರದ ನೇಕಾರ ಬೀದಿಯಲ್ಲಿ ಶುಕ್ರವಾರ ವಿಭಾಗದ ಗೌರವಾಧ್ಯಕ್ಷ ಹಿರೇಮಗಳೂರು ರಾಮಚಂದ್ರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಾಮಚಂದ್ರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳ ಕುಂದುಕೊರತೆಗಳನ್ನು ಆಲಿಸುವ ನಿಟ್ಟಿನಲ್ಲಿ ನೂತನ ಕಚೇರಿಯನ್ನು ಪ್ರಾರಂಭಿಸಲಾಗಿದೆ.
ವೃತ್ತಿಯಲ್ಲಿರುವ ನೌಕರರು ಯಾವುದೇ ಸಮಸ್ಯೆಗಳು ಎದುರಾದಲ್ಲಿ ಕಚೇರಿ ಬಂದು ಚರ್ಚಿಸುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯ ಪಡೆದುಕೊಳ್ಳಬಹುದು ಎಂದರು.
ಸಮುದಾಯ ಎಲ್ಲಾ ನೌಕರರು ಒಗ್ಗಟ್ಟಿನಿಂದ ಮುನ್ನೆಡೆದರೆ ಜಟಿಲ ಸಮಸ್ಯೆಗಳನ್ನು ಬಗೆಹರಿಸಬಹುದು. ಆ ನಿಟ್ಟಿನಲ್ಲಿ ವೃತ್ತಿಯಲ್ಲಿರುವ ನೌಕರರ ಸಹಕಾರ ಅಗತ್ಯವಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಸಂಘದಿoದ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ. ಚಿಕ್ಕಮಗಳೂರು ವಿಭಾಗದ ಅಧ್ಯಕ್ಷ ಮರ್ಲೆ ಉಮೇಶ್ ಮಾತನಾಡಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಚಿಕ್ಕಮಗಳೂರಿನಲ್ಲಿ ವಿಭಾಗ ಮಟ್ಟದ ಕಚೇರಿಯನ್ನು ಸ್ಥಾಪಿಸಲಾಗಿದ್ದು ಸಂಘದ ನೌಕರರ ಸರ್ವತೋ ಮುಖ ಬೆಳವಣಿಗೆ ಹಾಗೂ ಅಭಿವೃದ್ದಿಗಾಗಿ ಸಂಘವು ಕಾರ್ಯನಿರ್ವಹಿಸಲಿದೆ ಎಂದರು.
ಕೆ.ಎಸ್.ಆರ್.ಟಿ.ಸಿ. ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಆಕಸ್ಮಿಕ ಅವಘಡಗಳು ಸಂಭವಿಸಿ ದ್ದಲ್ಲಿ ಸಂಘದಿoದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಾಗುವುದು. ಜೊತೆಗೆ ಸಾಮಾಜಿಕ ಕಳಕಳಿ ಹೊಂದುವ ನಿಟ್ಟಿನಲ್ಲಿ ನೌಕರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಬೇಲೂರು ಕಾಂಗ್ರೆಸ್ ಮುಖಂಡ ಸಂತೋಷ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ವೃತ್ತಿಯಲ್ಲಿರುವ ಪ್ರತಿ ಯೊಬ್ಬ ನೌಕರರು ಒಗ್ಗಟ್ಟು ಪ್ರದರ್ಶಿಸಿ ಉತ್ತಮ ಸಂಘವನ್ನಾಗಿ ಹೊರಹೊಮ್ಮಿಸಬೇಕು ಎಂದು ಶುಭ ಕೋರಿದರು.
SC, ST Officers ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಚಿಕ್ಕಮಗಳೂರು ಘಟಕದ ವ್ಯವಸ್ಥಾಪಕಿ ಬೇಬಿಬಾಯ್, ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕಾನೂನು ಸಲಹೆಗಾರ ಅನಿಲ್‌ಕುಮಾರ್, ಉಪಾಧ್ಯಕ್ಷರಾದ ಜೆ.ಹೆಚ್. ಕುಮಾರಸ್ವಾಮಿ, ಪುಟ್ಟಸ್ವಾಮಿ, ಶಿವಕುಮಾರ್, ನಾರಾಯಣ್, ಶ್ರೀನಾಥ್, ಖಜಾಂಚಿ ಪ್ರಸನ್ನಕುಮಾರ್, ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಎಂ.ಪ್ರದೀಪ್, ಪದಾಧಿಕಾರಿಗಳಾದ ದಿನೇಶ್‌ಕುಮಾರ್, ಶಶಿ, ಸಕಲೇಶಪುರ ಮಂಜಯ್ಯ, ಮೂಡಿಗೆರೆ ಪರಮೇಶ್ ಹಾಗೂ ದಲಿತ ಪರ ಸಂಘಟನೆಯ ಮುಖಂಡರುಗಳು ಮತ್ತಿತರರು ಹಾಜರಿದ್ದರು.