ಭಯದ ವಾತಾವರಣದ ಮಧ್ಯೆ ಅಧಿವೇಶನ ಬೇಡ ಎಂಬ ವಿಧಾನಮಂಡಳದ ನೌಕರರ, ಕೆಲ ಮಾಜಿ ಸಚಿವರ, ಶಾಸಕರ ಒತ್ತಡದ ಮಧ್ಯೆ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನದ ತಯಾರಿ ನಡೆದಿದೆ.
ಈ ಮಧ್ಯೆ ಸರಕಾರ ಕಲಾಪ ನಡೆಸುವ ಸಂಬಂಧ ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ.
ಇತ್ತೀಚೆಗೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನಡೆದ ಅಶಿಸ್ತಿನ ಘಟನೆಗಳು ವೈಯಕ್ತಿಕವಾಗಿ ನನಗೆ ನೋವು ತಂದಿದೆ. ಈ ಕುರಿತು ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದು ತಿಳಿಸಿದ್ದೇನೆ. ನಮ್ಮ ವರ್ತನೆಯನ್ನು ಲಕ್ಷಾಂತರ ಕಣ್ಣುಗಳು ನೋಡುತ್ತಿರುತ್ತವೆ. ನಡುವಳಿಕೆಯಲ್ಲಿ ನಿಯಮ ಸಭ್ಯತೆ ಮೀರದಂತಿರಬೇಕು. ಅಧಿವೇಶನದಲ್ಲಿ ಶಿಸ್ತು ಉಲ್ಲಂಘಿಸುವ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಿಳಿಸಿದ್ದಾರೆ.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ ಸ್ಪೀಕರ್ ಕಾಗೇರಿ, ಆತಂಕ, ಮುಂಜಾಗ್ರತೆ ಅನುಸರಿಸಿ ಡಿ. 13ರಿಂದ ಅಧಿವೇಶನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯ ಸಂಸ್ಥೆ, ಪರಿಷತ್ ಚುನಾವಣೆ, ಅತಿವೃಷ್ಟಿ, ಕೋವಿಡ್ ನಡುವೆ ಅಧಿವೇಶನ ನಡೆಸಲಾಗುವುದೆಂದು ಇದೀಗ ತಾನೆ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಶ್ರೀ ಅಶೋಕ್ ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ವಿಧಾನ ಸಭೆ ಅಧಿವೇಶನ
Date: