ಬೆಂಗಳೂರು ನಗರದಲ್ಲಿ ಇಬ್ಬರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಸೋಂಕು ತಡೆಗೆ ಸರಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ.
ಹೊಸದಿಲ್ಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿಯವರು, ಸಚಿವರು ಮತ್ತು ಅಧಿಕಾರಿಗಳನ್ನೊಳಗೊಂಡ ಮಹತ್ವದ ಸಭೆ ನಡೆಸಲಾಗಿದೆ. ಓಮಿಕ್ರಾನ್ ಸೋಂಕು ತಡೆಗಟ್ಟಲು ಪರಿಷ್ಕೃತ ಮಾರ್ಗಸೂಚಿ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 13 ದೇಶಗಳಲ್ಲಿ
ಓಮಿಕ್ರಾನ್ ಸೋಂಕು ಹೆಚ್ಚಾಗಿ ಹರಡುತ್ತಿದೆ ಆದರೆ, ತೀವ್ರವಾಗಿ ಬಾಧಿಸುವುದಿಲ್ಲ ಎಂಬುದು ಸಮಾಧಾನದ ವಿಷಯ ಎಂದು ತಿಳಿಸಿದರು.
ಸಭೆಯಲ್ಲಿ ಮದುವೆ ಸಮಾರಂಭಗಳಿಗೆ ಕೇವಲ ,500 ಜನರ ಮಿತಿ ಹೊಂದಿರಬೇಕು. ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
ಸಿನಿಮಾ ಮಾಲ್ ಗಳಲ್ಲಿ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ .
ಏರ್ ಪೋರ್ಟ್ ನಲ್ಲಿ ಕೋವಿಡ್ ಟೆಸ್ಟ್ ನಡೆಸಲು 3000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಸರ್ಕಾರಿ ನೌಕರರು ಎರಡೂ ಡೋಸ್ ಲಸಿಕೆ ಪಡೆದಿರಬೇಕು.
ಪೋಷಕರು ಸಹ 2 ಡೋಸ್ ಲಸಿಕೆ ಪಡೆದಿರಬೇಕು.
ಸಾರ್ವಜನಿಕವಾಗಿ ಮಾಸ್ಕ ಕಡ್ಡಾಯವಾಗಿ ಧರಿಸಬೇಕು. ಮಾಸ್ಕ ಧರಿಸದಿದ್ದರೆ ನಗರ ಪ್ರದೇಶಗಳಲ್ಲಿ 250 ರೂಪಾಯಿ ಮತ್ತು ತಾಲೂಕುಗಳಲ್ಲಿ 150 ರೂಪಾಯಿ ದಂಡ ತೆರಬೇಕಾಗುತ್ತದೆ ಎಂಬ ನಿಮಯಗಳನ್ನು ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಇವು ಸಭೆಯ ಪ್ರಮುಖ ನಿರ್ಧಾರಗಳ ಮುಖ್ಯಾಂಶಗಳಾಗಿವೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ RTPCR ಕಡ್ಡಾಯ.
Date: