Karnataka Budget ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ 5 ಗ್ಯಾರಂಟಿಗಳನ್ನು ಈಡೇರಿಸಲು ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದು ಇದನ್ನು ಸಹಿಸಲಾಗದ ವಿರೋಧ ಪಕ್ಷದ ಮುಖಂಡರುಗಳು ಅಧಿವೇ ಶನದಲ್ಲಿ ಸುಖಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಕಿಸಾಲ್ ರಾಜ್ಯ ಕಾರ್ಯದರ್ಶಿ ಸಿ.ಎನ್. ಅಕ್ಮಲ್ ಆರೋಪಿಸಿದ್ದಾರೆ. ಈ ಸಂಬ0ಧ ಬುಧವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು 14ನೇ ಬಾರಿ ಬಜೆಟ್ ಮಂಡಿಸಿ ಇತಿಹಾಸ ದಾಖಲಿಸಿದ್ದಾರೆ. 5 ಗ್ಯಾರಂಟಿಗಳ ಈಡೇರಿಕೆಗೆ ಸತತವಾಗಿ ಕೆಲಸ ಮಾಡು ತ್ತಿರುವ ಮುಖ್ಯಮಂತ್ರಿಗಳಿಗೆ ಅಧಿವೇಷನದಲ್ಲಿ ಗೊಂದಲ ಸೃಷ್ಟಿಸಿ ಟೀಕೆ ಮಾಡುತ್ತಿರುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ರಾಜ್ಯಸರ್ಕಾರ ರಚನೆಗೊಂಡು ಕೆಲವೇ ದಿನಗಳು ಕಳೆದಿದೆ. ಇದರ ನಡುವೆ ಬಿಜೆಪಿ ಹಾಗೂ ಜೆಡಿಎಸ್‌ನವರು ಅನಗತ್ಯವಾಗಿ ಅಧಿವೇಶನದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ರಾಜ್ಯದ ಜನತೆಗೆ ಒಳಿತಾಗುವ ನಿಟ್ಟಿನಲ್ಲಿ ಐದು ಗ್ಯಾರಂಟಿಗಳು ಜಾರಿಗೆ ತರಲು ಮುಖ್ಯಮಂತ್ರಿಗಳು ಶ್ರಮವಹಿಸುತ್ತಿದ್ದರೆ ಇದನ್ನು ಸಹಿಸಿಕೊಳ್ಳದ ವಿರೋಧ ಪಕ್ಷದ ಮುಖಂಡರುಗಳು ವಿನಾಕಾರಣ ಬಜೆಟ್ ಬಗ್ಗೆ ಟೀಕಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಅಧಿವೇಶನ ಪ್ರಾರಂಭವಾಗಿ ಅನೇಕ ದಿನಗಳಾದರೂ ಬಿಜೆಪಿ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆಗೊಳಿಸಿಲ್ಲ. ಜೆಡಿಎಸ್‌ನ ಹೆಚ್.ಡಿ.ಕುಮಾರಸ್ವಾಮಿ ಪೆನ್‌ಡೈವ್ ಹೆಸರೇಳಿಕೊಂಡು ರಾಜ್ಯದ ಜನತೆಗೆ ದಾರಿ ತಪ್ಪಿಸುತ್ತಿದ್ದಾರೆ. ಇಷ್ಟೆಲ್ಲಾ ಗೊಂದಲಗಳನ್ನು ಸೃಷ್ಟಿಸಿದರೆ ರಾಜ್ಯಸರ್ಕಾರ ಎಂದಿಗೂ ಹಿಗ್ಗುವುದಿಲ್ಲ. ಆ ನಿಟ್ಟಿನಲ್ಲಿ ಅಭಿ ವೃದ್ದಿ Karnataka Budget ಪರವಾದ ಬಜೆಟ್‌ಗೆ ಕೈಜೋಡಿಸಿ ಬೆಂಬಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಬಳಿ ನಿಜಾಂಶದ ದಾಖಲೆಗಳು ಹೊಂದಿದರೆ ರಾಜಾರೋಷವಾಗಿ ಪ್ರದರ್ಶಿಸ ಸಬೇಕು ಹೊರತು ಬೇಳೆ ಬೇಯಿಸಿಕೊಳ್ಳುವುದು ಬೇಡ. ಅವರ ದಾಖಲೆಗಳಲ್ಲಿ ಸತ್ಯಾಂಶವನ್ನು ಹೊಂದಿದ್ದರೆ ಸಭಾಪತಿಗಳಿಗೆ ಅಥವಾ ಸಿಬಿಐಗೆ ವಹಿಸಲು ಮುಂದಾಗಬೇಕು. ಇದನ್ನು ಬಿಟ್ಟು ಅಧಿವೇಶನದಲ್ಲಿ ಟೀಕೆ ಮಾಡು ವುದು ತಮ್ಮ ಸ್ಥಾನಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
Karnataka Budget ರಾಜ್ಯದ ಅಭಿವೃದ್ದಿ ಪರವಾದ ಬಜೆಟ್ ಗೆ ಎಲ್ಲರೂ ಬೆಂಬಲಿಸಬೇಕು- ಸಿ.ಎನ್.ಅಕ್ಮಲ್
Date: