Thursday, December 18, 2025
Thursday, December 18, 2025

M. B. Patil ಸಿಎಂ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಜೊತೆ ಸಭೆ ನಡೆಸಿದ ಕಂಪನಿ ನಿಯೋಗ

Date:

M. B. Patil ಫಾಕ್ಸ್ ಕಾನ್ ಐಟಿಐಆರ್ ಘಟಕಕ್ಕೆ ಪೂರಕವಾಗಿ ತುಮಕೂರಿನಲ್ಲಿ ಮತ್ತೊಂದು ಘಟಕ ಪ್ರಸ್ತಾವ

ಬೆಂಗಳೂರು: ದೇವನಹಳ್ಳಿಯ ಐಟಿಐಆರ್ ವಲಯದಲ್ಲಿ ಫಾಕ್ಸ್ ಕಾನ್ ಕಂಪನಿಯು ಸ್ಥಾಪಿಸಲು ಉದ್ದೇಶಿಸಿರುವ ಐಫೋನ್ ತಯಾರಿಕಾ ಘಟಕಕ್ಕೆ ಪೂರಕವಾಗಿ ತುಮಕೂರಿನಲ್ಲಿ ಮತ್ತೊಂದು ಘಟಕ ಸ್ಥಾಪಿಸುವ ಪ್ರಸ್ತಾವ ಹೊಂದಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಂಪನಿಯ ನಿಯೋಗದೊಂದಿಗೆ ಸೋಮವಾರ ಉನ್ನತ ಮಟ್ಟದ ಪ್ರಾಥಮಿಕ ಸಭೆ ನಡೆಯಿತು.

ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಫಾಕ್ಸ್ ಕಾನ್ ಕಂಪನಿಯ ಅಂಗಸಂಸ್ಥೆ ಫಾಕ್ಸ್ ಕಾನ್ ಇಂಡಸ್ಟ್ರಿಯಲ್ ಇಂಟರ್ನೆಟ್ (ಎಫ್ಐಟಿ) ಇದಕ್ಕಾಗಿ 8,800 ಕೋಟಿ ರೂ. ಹೂಡಿಕೆ ಮಾಡುವ ಯೋಜನೆ ಹೊಂದಿದೆ. ಇದು 14,000 ಉದ್ಯೋಗ ಸೃಷ್ಟಿಸಲಿದ್ದು ಘಟಕ ಸ್ಥಾಪನೆಗೆ 100 ಎಕರೆ ಜಾಗ ಬೇಕಾಗುತ್ತದೆ. ತುಮಕೂರಿನ ಜಪಾನ್ ಇಂಡಸ್ಟ್ರಿಯಲ್ ಟೌನ್ ಷಿಪ್ ನಲ್ಲಿ ನಿಯೋಗದ ಸದಸ್ಯರು ಇಂದೇ ಲಭ್ಯ ಭೂಮಿಯನ್ನು ವೀಕ್ಷಿಸಲಿದ್ದಾರೆ.

ಫೋನ್ ಪರದೆ, ಹೊರ ಕವಚ ಹಾಗೂ ಇತರ ಯಾಂತ್ರೀಕೃತ ಬಿಡಿಭಾಗಗಳನ್ನು ಎಫ್ಐಐ ಘಟಕ ತಯಾರಿಸಲಿದೆ. ದೇವನಹಳ್ಳಿ ಬಳಿಯ ಉದ್ದೇಶಿತ ಐಫೋನ್ ತಯಾರಿಕಾ ಘಟಕವು ‘ಎಂಡ್ ಅಸೆಂಬ್ಲಿ’ ಘಟಕವಾಗಿದ್ದರೆ, ಎಫ್ ಐಐ ಘಟಕವು ಅದಕ್ಕೆ ಪೂರಕ ಘಟಕವಾಗಿರಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುವಂತಹ ಉತ್ತಮ ಕಾರ್ಯ ಪರಿಸರ ಇದೆ. ಶೈಕ್ಷಣಿಕ ಹಾಗೂ ಉದ್ಯಮ ವಲಯದ ನಡುವೆ ನಿರಂತರ ಸಂಪರ್ಕ ಮತ್ತು ಸಮನ್ವಯತೆ ಇದೆ. ಜೊತೆಗೆ ಕೌಶಲ್ಯಯುಕ್ತ ಸಿಬ್ಬಂದಿಯನ್ನು ಲಭ್ಯವಾಗಿಸಲು ಸರ್ಕಾರ ಮುತುವರ್ಜಿ ವಹಿಸಲಿದೆ. ಹೀಗಾಗಿ ಕರ್ನಾಟಕದಲ್ಲೇ ಈ ಉದ್ಯಮವನ್ನೂ ಆರಂಭಿಸಿ ಎಂದು ಸಿಇಒ ಬ್ರ್ಯಾಂಡ್ ಚೆಂಗ್ ನೇತೃತ್ವದ ಎಫ್ಐಐ ನಿಯೋಗದ ಪ್ರತಿನಿಧಿಗಳಿಗೆ ವಿವರಿಸಿದರು.

ಸಚಿವ ಎಂ ಬಿ ಪಾಟೀಲ ಮಾತನಾಡಿ, ಫಾಕ್ಸ್ ಕಾನ್ ಕಂಪನಿಯು ಸೆಮಿಕಂಡಕ್ಟರ್ ಸೇರಿದಂತೆ ಬೇರೆ ಯಾವುದೇ ಉದ್ದಿಮೆಯನ್ನು ರಾಜ್ಯದಲ್ಲಿ ಸ್ಥಾಪಿಸಲು ಬಯಸಿದರೆ, ಎಲ್ಲಾ ಸಹಕಾರ ನೀಡಲಾಗುವುದು ಎಂದರು.

ಎಫ್ಐಐ ಪ್ರಧಾನ ವ್ಯವಸ್ಥಾಪಕರುಗಳಾದ ಮೈಕೇಲ್ ಲಿಂಗ್, ಜೇಸನ್ ಲಾವು, ಆಂಜಿ ಲಿನ್, ನಿರ್ದೇಶಕ ರಾದ ಸೆಂಥಿಲ್ ಕುಮಾರ, ಭರತ್ ದಂಡಿ ಮತ್ತಿತರರು ಇದ್ದರು.

M. B. Patil ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...