Wednesday, October 2, 2024
Wednesday, October 2, 2024

UPSC ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎ.ಎಲ್.ಆಕಾಶ್ ಗೆ 210 ನೇ ಶ್ರೇಣಿ

Date:

UPSC ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 210ನೇ ಹಾಗೂ ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದ ಎ.ಎಲ್.ಆಕಾಶ್ ಅವರಿಗೆ ಚಿಕ್ಕಮಗಳೂರು ನಗರದ ಮೈಸೂರು ಶ್ರೀ ನಾಲ್ವಡಿ ಕೃಷ್ಣರಾಜ್ ಒಡೆಯರ್ ಪ್ರತಿಷ್ಟಾನ, ಕನ್ನಡಪರ ಸಂಘಟನೆ ಹಾಗೂ ವಿವಿಧ ಪಕ್ಷದ ಮುಖಂಡರುಗಳು ಗೌರವಿಸಿದರು.

ಅಭಿನಂದನೆ ಸಲ್ಲಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಅಗ್ಗಡಲು ಎಂಬ ಒಂದು ಸಣ್ಣ ಹಳ್ಳಿಯ ಸಾಮಾನ್ಯ ಕುಟುಂಬದಿಂದ ಜನಿಸಿದ ಆಕಾಶ್ ಎಂಬುವವರು ಸತತ ಶ್ರಮದಿಂದ ರಾಷ್ಟçಮಟ್ಟದಲ್ಲಿ ಇಂದು ಅತ್ಯುತ್ತಮ ರ‍್ಯಾಂಕ್ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಎಂದರು.

ವಿದ್ಯೆ ಯಾರ ಸ್ವತ್ತಲ್ಲ ಎಂಬುದನ್ನು ಹಿಂದುಳಿದ ಕುಟುಂಬದಿಂದ ಬಂದಿರುವ ಆಕಾಶ್ ದೃಢಪಡಿಸಿದ್ದಾರೆ. ಸಾಧನೆ ಮಾಡಲು ಎಂದಿಗೂ ಬಡತನ ಅಡ್ಡಿ ಬರೋಲ್ಲ. ಶಿಸ್ತು, ಸಂಯಮ ಹಾಗೂ ಉನ್ನತ ನಡತೆ ಹೊಂದಿದರೆ ಗಗನಕ್ಕೇತ್ತರ ಬೆಳೆಯಬಹುದು ಎಂದು ತಿಳಿಸಿದರು.

ಹಿರಿಯರ ಮಾರ್ಗದರ್ಶನದೊಂದಿಗೆ ಜೀವನದಲ್ಲಿ ನಂಬಿಕೆ, ಆತ್ಮವಿಶ್ವಾಸ ಹಾಗೂ ಶ್ರಮಪಡುವ ಹುಮಸ್ಸು ಹೊಂದಿದರೆ ಯಶಸ್ಸು ಶತಸಿದ್ಧ ಎನ್ನುವುದಕ್ಕೆ ಆಕಾಶ್ ಉದಾಹರಣೆಯಾಗಿದ್ದಾರೆ.

ಇಂತಹ ರೀತಿಯಲ್ಲಿ ಪ್ರತಿ ಯೊಬ್ಬ ವಿದ್ಯಾರ್ಥಿಗಳು ಸಾಧನೆ ಮಾಡಿದರೆ ದೇಶಕ್ಕೂ ಕೀರ್ತಿ ತಂದಾಗುತ್ತದೆ ಎಂದು ಕಿವಿಮಾತು ಹೇಳಿದರು.

UPSC ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ ಮಾತನಾಡಿ ರಾಷ್ಟ್ರಮಟ್ಟದಲ್ಲಿ ರ‍್ಯಾಂಕ್ ಪಡೆದು ಕೊಂಡಿರುವ ಅವರು ಆಯಾ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ ಉನ್ನತಮಟ್ಟದಲ್ಲಿ ಯಶಸ್ಸು ಕಂಡಿರುವ ಆಕಾಶ್ ಅವರಿಗೆ ಪ್ರತಿಯೊಂದು ಹೆಜ್ಜೆಯಲ್ಲೂ ಗೆಲುವು ಸಿಗುವಂತಾಗಲಿ. ಮುಂದಿನ ಅವರ ಎಲ್ಲಾ ರೂಪುರೇಷೆಗಳು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಕೋರಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸಹಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಪ್ರಾಸ್ತಾವಿಕ ಮಾತ ನಾಡಿ ಆಕಾಶ್ ಜೀವನದಲ್ಲಿ ನಡೆದು ಹಾದಿಯನ್ನು ಸವಿವರವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಎ.ಎಂ.ಶಕುಂತಲಾ, ಬಿ.ಟಿ.ಪರಮೇಶ್, ಪ್ರತಿಷ್ಟಾನದ ಅಧ್ಯಕ್ಷ ಮಾವಿನಕೆರೆ ದಯಾನಂದ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಆರ್.ನಂಜೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಸವಿನಮನೆ ಬೈರೇಗೌಡ, ದಲಿತ ಮುಖಂಡ ದುರ್ಗೇಶ್, ಆಕಾಶ್ ಪೋಷಕರಾದ ಎ.ಎಂ.ಪ್ರೇಮ ಲಕ್ಷ್ಮಣಗೌಡ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...