Eye Donation ಸಂಗ್ರಹಣೆಯೇ ಬದುಕಿನ ಸಾರ್ಥಕ್ಯವಲ್ಲ, ಸಂಗ್ರಹಿಸಿದ್ದರಲ್ಲಿ ಸಾಕಷ್ಟನ್ನು ಸಮಾಜಕ್ಕೆ ವಿತರಿಸಲೇಬೇಕು ಇದನ್ನೇ ‘ದಾನ’ವೆನ್ನುತ್ತಾರೆ. ದಾನದಲ್ಲಿ ದ್ರವ್ಯದಾನವು ಶ್ರೇಷ್ಠವಾದರೆ ಜ್ಞಾನದಾನವು ಪರಮ ಶ್ರೇಷ್ಠ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಹೇಳಿದರು.
ಅವರು ನಿಟುವಳ್ಳಿಯ ಶ್ರೀ ಶಿವ ಚಿದಂಬರ ಅಖಂಡ ವೀಣಾ ಸಪ್ತಾಹದಂಗವಾಗಿ ‘ದಾನ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ದಾನವು ಪ್ರತಿಫಲಾಪೇಕ್ಷೆ ಇಲ್ಲದ, ಅಹಂಕಾರ,ಅಹಂ ಭಾವವಿಲ್ಲದ ಕ್ರಿಯೆಯಾಗಿ ಸತ್ಪಾತ್ರರಿಗೆ ಸಲ್ಲಬೇಕು, ದಾನ ಮಾಡಬೇಕೆಂದರೆ ಸಂಪತ್ತು, ಶ್ರೀಮಂತಿಕೆ ಇರಲೇಬೇಕೆಂದಿಲ್ಲ, ಬುದ್ಧಿ ಶ್ರೀಮಂತಿಕೆ ಇರುವವರು ಜ್ಞಾನದಾನವನ್ನೂ, ಆರೋಗ್ಯವಂತರು ರಕ್ತದಾನವನ್ನೂ ಮಾಡಬಹುದು, ಇದಕ್ಕೂ ಮಿಗಿಲಾಗಿ ನೇತ್ರದಾನ, ಅಂಗಾಂಗಗಳ ದಾನ, ಕೊನೆಯಲ್ಲಿ ದೇಹ ದಾನವನ್ನೂ ಸಹಾ ಮಾಡಿ ಸಮಾಜಕ್ಕೆ ಉಪಕಾರಿಗಳಾಗ ಬಹುದು ಎಂಬುದನ್ನು ಸ್ವಾರಸ್ಯಕರ ಕಥೆಗಳ ಮುಖಾಂತರ ವಿವರಿಸಿದರು.
Eye Donation ಶ್ರೀ ಶಿವ ಚಿದಂಬರ ಕ್ಷೇತ್ರದ ಗೌರವಾಧ್ಯಕ್ಷರಾದ ವಿ ಮೋಹನ ದೀಕ್ಷಿತ್ ಹಾಗೂ ಭಕ್ತ ಮಂಡಳಿಯ ಬಂಧು ಭಗಿನಿಯರು ಉಪಸ್ಥಿತರಿದ್ದರು.