Kateel Ashok Pai Memorial College ಮಾನಸಿಕ ಆರೋಗ್ಯ ಹಾಗೂ ಮನೋವೈದ್ಯಕೀಯ ಕ್ಷೇತ್ರಗಳಿಗೆ ತನ್ನ ಕೊಡುಗೆಯಿಂದ
ದೇಶದಲ್ಲಿ ಖ್ಯಾತಿ ಪಡೆದಿರುವ ಮಾನಸ ಟ್ರಸ್ಟ್ ನ ಅಂಗಸಂಸ್ಥೆಯಾದ ಕಟೀಲ್ ಅಶೋಕ್ ಪೈ ಸ್ಮಾರಕ
ಕಾಲೇಜು ಈಗ ಇನ್ನೊಂದು ಸಮಾಜಮುಖಿ ಯೋಜನೆಗೆ ಸಹಭಾಗಿಯಾಗುತ್ತಿದೆ. ಪ್ರಸಿದ್ಧ
ಸರಕಾರೇತರ ಸಂಸ್ಥೆಗಳಾಗಿರುವ Heartfulness Institute ಮತ್ತು Ripples of Change Foundation ಗಳ ಜೊತೆಗೆ ಇದೇ 12 ಜುಲೈ 2023 ರಂದು ಒಪ್ಪಂದವನ್ನು ಮಾಡಿಕೊಂಡಿದ್ದು ಅದರ
ಮೂಲಕ ಸಮಾಜೋ ಮಾನಸಿಕ ಸಮಸ್ಯೆಗಳಿರುವ ವ್ಯಕ್ತಿಗಳಿಗೆ 24/7 ಆಪ್ತ ಸಲಹೆಯನ್ನು ಆನ್ಲೈನ್
ವ್ಯವಸ್ಥೆ ಮೂಲಕ ಕೊಡುವ ಕಾರ್ಯದಲ್ಲಿ ಭಾಗಿಯಾಗುತ್ತದೆ. ಈ ಎರಡು ಸಂಸ್ಥೆಗಳು Voice That Cares ಎನ್ನುವ ಕಾರ್ಯಕ್ರಮದ ಮೂಲಕ ತರಬೇತಿ ಪಡೆದಿರುವ ಸ್ವಯಂಸೇವಕ ಪರಿಣಿತರಿಂದ
ಪ್ರಾಥಮಿಕ ಆಪ್ತಸಲಹೆ ನೀಡುತ್ತ ಬಂದಿವೆ. ಅನೇಕ ಭಾಷೆಗಳಲ್ಲಿ 28 ರಾಜ್ಯಗಳ 10,000 ವ್ಯಕ್ತಿಗಳು
ಪ್ರಯೋಜನ ಪಡೆದಿದ್ದಾರೆ ಮತ್ತು 56,000 ವ್ಯಕ್ತಿಗಳು ದೂರವಾಣಿ ಕರೆ ಮೂಲಕ ಸಲಹೆ ಪಡೆದಿದ್ದಾರೆ.
ಅವಶ್ಯವಿದ್ದಲ್ಲಿ ಮುಂದಿನ ಹಂತದ ಚಿಕಿತ್ಸೆಗೆ ಮಾರ್ಗದರ್ಶನ ಪಡೆದಿದ್ದಾರೆ. ಈಗ 127 ತರಬೇತಿ ಪಡೆದ
ಸ್ವಯಂಸೇವಕ ಸಲಹೆಗಾರರು ಮತ್ತು 24 ವಿಶ್ವವಿದ್ಯಾಲಯ ವಿದ್ಯಾರ್ಥಿ ಸ್ವಯಂಸೇವಕರು ಈ ಘೋಷಣೆಯಲ್ಲಿ ಭಾಗಿಯಾಗಿದ್ದಾರೆ. ಈ ಸಂಸ್ಥೆಗಳ ಜೊತೆಗಿನ ಒಪ್ಪಂದದ ಮೂಲಕ KAPMI ಈ ಸಮಾಜಮುಖಿ ಜನಪರ ಯೋಜನೆಯಲ್ಲಿ ಸಹಭಾಗಿಯಾಗುತ್ತಿದೆ.
ಯೋಜನೆಯ ಎಲ್ಲಾ ಹಂತಗಳಲ್ಲಿ ತರಬೇತಿ,ಅವಶ್ಯಕ ಜ್ಞಾನ ಮಾಹಿತಿ, ಸ್ವಯಂ ಸೇವೆ ಇವುಗಳಲ್ಲಿ KAPMI ಭಾಗಿಯಾಗುತ್ತದೆ. 3 ಸಂಸ್ಥೆಗಳು ಸೇರಿ ಮಾನಸಿಕ ಆರೋಗ್ಯಕ್ಕೆ ಪೂರಕವಾದ ಯೋಜನೆ, ಸಂಶೋಧನೆ, ತರಬೇತಿಗಳಲ್ಲಿ ಭಾಗಿಯಾಗುತ್ತವೆ.
KAPMI ಸಂಸ್ಥೆಯ ಮೂಲಕ Diploma ಮತ್ತು M.SC ಪದವಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಈ
ಯೋಜನೆಗಳಲ್ಲಿ ಅವಕಾಶ ನೀಡಲಾಗುತ್ತದೆ.
ಈ ಯೋಜನೆಗಳ ಉದ್ದೇಶವೆಂದರೆ ಮಾನಸಿಕ ಸಮಸ್ಯೆ
ಇರುವ ವ್ಯಕ್ತಿಗಳಿಗೆ ತಕ್ಷಣವೆ ಸಲಹೆ ಪಡೆಯಲು, ಅವಶ್ಯವಿದ್ದಲ್ಲಿ ಮುಂದಿನ ಹಂತದ ಚಿಕಿತ್ಸೆಗಾಗಿ ಸಲಹೆ
ಸೂಚನೆ ಪಡೆಯಲು ಅವಕಾಶವಿರುತ್ತದೆ. 24/7 ಹೆಲ್ಪ್ಲೈನ್ ಮೂಲಕ ಇದನ್ನು ಒದಗಿಸಲಾಗುತ್ತದೆ.
Heartfulness ಸಂಸ್ಥೆಯು 1945 ರಿಂದ ಶ್ರೀ ರಾಮಚಂದ್ರ ಮಿಶನ್ ಮೂಲಕ ಧ್ಯಾನ ಹಾಗೂ
ಜೀವನಶೈಲಿ ಕುರಿತು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಸಾವಿರಾರು ಶಾಲೆಗಳಲ್ಲಿ 160
ದೇಶಗಳಲ್ಲಿ ಸಂಸ್ಥೆಯ ಫಲಾನುಭವಿಗಳಿದ್ದಾರೆ.
Kateel Ashok Pai Memorial College ಈ ಒಡಂಬಡಿಕೆಯನ್ನು ಜಾರಿಗೊಳಿಸುವ ಸಭೆಯಲ್ಲಿ ಎರಡೂ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ
ನಾಗೇಶ್, ಶ್ರೀ ಶರತ್ ಹೆಗ್ಡೆ, ಶ್ರೀಮತಿ ರೇವತಿ, ಡಾ. ರಜನಿ ಪೈ, ಡಾ. ಪ್ರೀತಿ ಶಾನ್‌ಭಾಗ್,
ಪ್ರಾಂಶುಪಾಲರಾದ ಶ್ರೀಮತಿ ಸಂಧ್ಯಾಕಾವೇರಿ, ಶ್ರೀಮತಿ ಅರ್ಚನಾಭಟ್, ಶ್ರೀಮತಿ ಕವಿತಾ ಹಾಗೂ ಶ್ರೀ
ವೆಂಕಟೇಶ್ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ರೀಮತಿ ರೇವತಿ ಸುರೇಶ್ – 9840094701.
ಡಾ.ಸಂಧ್ಯಾ ಕಾವೇರಿ ಕೆ – 9480034495.