Corruption Control ವಿದ್ಯಾವಂತರು ದೇಶದ ಸಂಪತ್ತು. ಪ್ರಜಾಪ್ರಭುತ್ವದಲ್ಲಿ ಅವರಿಗೆ ನೀಡಿದಂತಹ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿರುವ ಪರಿಣಾಮ ದೇಶ ಅಭಿವೃದ್ದಿ ಯಿಂದ ಕುಂಠಿತವಾಗಲಿದೆ ಎಂದು ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಕೆ.ಸುಂದರಗೌಡ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ದೇಶ ಹಾಗೂ ರಾಜ್ಯದಲ್ಲಿ ಶಾಂತಿ, ಸುವ್ಯವ ಸ್ಥೆ ಕಾಪಾಡುವಂತಾಗಬೇಕಾದರೆ ಭ್ರಷ್ಟಾ ಚಾರವೆಸಗುವ ವ್ಯಕ್ತಿಗೆ ಮಾನವ ಹಾಗೂ ನಾಗರೀಕ ಹಕ್ಕುಗಳಿಂದ ವಂಚಿತಗೊಳಿಸಿದರೆ ಮಾತ್ರ ಭ್ರಷ್ಟಾ ಚಾರ ಎಂಬ ರೋಗವನ್ನು ಬೇರುಮಟ್ಟದಿಂದ ಕಿತ್ತೊಗೆಯಲು ಸಾಧ್ಯ ಎಂದಿದ್ದಾರೆ.
ಪ್ರಸ್ತುತ ಓರ್ವ ನೌಕರ ವೃತ್ತಿಯಲ್ಲಿ ಕೋಟಿಗಟ್ಟಲೇ ಹಣಗಳಿಸಿ ನಾಗರೀಕ ಸಮಾಜದಲ್ಲಿ ರಾಜಾರೋಷವಾಗಿ ಮೆರೆಯುತ್ತಿರುವುದು ಪ್ರಜಾಪ್ರಭುತ್ವದ ಸರ್ವನಾಶದ ಸಂಕೇತವಾಗಿದೆ. ಇಂತಹ ಭ್ರಷ್ಟಾ ಚಾರದಲ್ಲಿ ತೊಡಗಿರುವ ವ್ಯಕ್ತಿಗೆ ಸಮಾಜದ ಪ್ರತಿಯೊಬ್ಬರು ಬಹಿಷ್ಕಾರ ಹಾಕುವ ಮನೋಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇಂದು ಭ್ರಷ್ಟಾಚಾರದಡಿಯಲ್ಲಿ ದೇಶ ಹಾಗೂ ರಾಜ್ಯದ ಸರ್ಕಾರಗಳು ಅಧಿಕಾರ ನಡೆಸಲು ಸನ್ನದ್ದರಾಗಿರು ವುದು ದುರಾದೃಷ್ಟಕರ ಸಂಗತಿ. ಮುಂದಿನ ದಿನಗಳಲ್ಲಿ ಇದನ್ನು ಎಚ್ಚೆತ್ತುಕೊಳ್ಳದಿದ್ದಲ್ಲಿ ದೇಶವು ಅಜಾಗರೂಕತೆಗೆ ತೊಡಗಿಸಿಕೊಳ್ಳುವ ಜೊತೆಗೆ ಶ್ರೀಲಂಕಾ ಸೇರಿದಂತೆ ನೆರೆದೇಶದ ಜನತೆಯ ಬಿಕ್ಕಟ್ಟಿನ ರೀತಿಯಲ್ಲಿ ಭಾರತೀಯರು ಕಷ್ಟಪಡುವ ದುಸ್ಥಿತಿ ಬಂದೋದಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Corruption Control ಇಂದಿನ ಯುವಪೀಳಿಗೆ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಸಾಮಾಜಿಕ ಕಳಕಳಿ ಹೊಂದಿರುವ ನಾಗರೀಕರು ಮುಂದಾಗಬೇಕು. ನಾವುಗಳು ಉಳಿಯುವ ಜೊತೆಗೆ ಪ್ರಜಾಪ್ರಭುತ್ವವನ್ನು ಉಳಿಸುವ ಉದ್ದೇಶ ನಮ್ಮದಾಗಬೇಕು. ಪ್ರಜಾಪ್ರಭುತ್ವ ಇಲ್ಲವಾದರೆ ಮುಂದಿನ ಪೀಳಿಗೆ ಪರಸ್ಪರ ಗೌರವದ ನೀಡದೇ ಪ್ರಶ್ನೆಗಳೇ ಉದ್ಬವವಾಗಲಿದೆ ಎಂದಿದ್ದಾರೆ.
ಆ ನಿಟ್ಟಿನಲ್ಲಿ ದೇಶದಲ್ಲಿ ಭ್ರಷ್ಟಾ ಮುಕ್ತ ಸಮಾಜ ನಿರ್ಮಾಣ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ ದಾಗ ಮಾತ್ರ ಸಮಾಜದಲ್ಲಿ ಶಾಂತಿ, ಸಹನೆ ಹಾಗೂ ನೆಮ್ಮದಿ ಜೀವನ ನಡೆಸಿ ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.