Saturday, December 6, 2025
Saturday, December 6, 2025

Ganga Welfare Scheme ಗಂಗಾ ಕಲ್ಯಾಣ ಯೋಜನೆಗೆ ಸುಗಮ ವಿದ್ಯುತ್ ಸಂಪರ್ಕ ನೀಡಲು ಒತ್ತಾಯ

Date:

Ganga Welfare Scheme ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆದು ವಿದ್ಯುತ್ ಸಂಪರ್ಕ ಕಲ್ಪಿಸಲು ಮೇಲ್ವರ್ಗದವರು ತಂಟೆ ತಕರಾರು ಮಾಡುತ್ತಿದ್ದು ಅವರ ವಿರುದ್ದ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚನೆ ನೀಡುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಬ್ಲೂ ಆರ್ಮಿ ಸಂಘಟನೆ ಜಿಲ್ಲಾಡ ಳಿತವನ್ನು ಒತ್ತಾಯಿಸಿದೆ.

ಈ ಸಂಬಂಧ ಅಪರ ಚಿಕ್ಕಮಗಳೂರು ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಅವರಿಗೆ ಶುಕ್ರವಾರ ಸಂಘಟನೆ ನೇತೃತ್ವ ದಲ್ಲಿ ಮನವಿ ಸಲ್ಲಿಸಿದ ತಿಮ್ಲಾಪುರದ ಗ್ರಾಮದ ವಾಸಿ ಗೋವಿಂದಪ್ಪ ನ್ಯಾಯ ಒದಗಿಸಿ ನೆಮ್ಮದಿ ಜೀವನಕ್ಕೆ ಅನುವು ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಬ್ಲೂ ಆರ್ಮಿ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮು ದಾಯಕ್ಕೆ ಸೇರಿದ ಪಂಚನಹಳ್ಳಿ ಹೋಬಳಿ ತಿಮ್ಲಾಪುರ ಗ್ರಾಮದ ಗೋವಿಂದಪ್ಪ ಎಂಬುವವರು 2019-20 ನೇ ಸಾಲಿನಲ್ಲಿ ಸಮಗ್ರ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಮಂಜೂರಾಗಿ 2022ರಲ್ಲಿ ಬಾವಿಯ ನ್ನು ಕೊರೆಯಲಾಗಿತ್ತು ಎಂದರು.

ಬಾವಿ ಕೊರೆಸಿದ ಬಳಿಕ ಉತ್ತಮ ನೀರು ಲಭ್ಯವಾಗಿ ವಿದ್ಯುತ್ ಕಂಬವನ್ನು ಹಾಕಲಾಗಿದೆ. ಆದರೆ ಪಕ್ಕದ ಜಮೀನಿನ ಮೇಲ್ವರ್ಗದ ವ್ಯಕ್ತಿಯೊಬ್ಬರು ಟಿಸಿ ಅಳವಡಿಸಿಕೊಡಲು ಅಡ್ಡಿಪಡಿಸುತ್ತಿದ್ದಾರೆ. ಈಗಾಗಲೇ ಜಮೀನಿನಲ್ಲಿ ತೆಂಗಿನ ಗಿಡಗಳು ಒಣಲಾಗಿ ಬಹಳಷ್ಟು ಸಮಸ್ಯೆಯಾಗಿರುವ ಬಗ್ಗೆ ಮನವಿ ಮಾಡಿಕೊಂಡರು ಸಹ ಗೋವಿಂದಪ್ಪ ನವರ ಮೇಲೆ ಕೇಸು ದಾಖಲಿಸಿ ದೌರ್ಜನ್ಯವೆಸಗಲಾಗುತ್ತಿದೆ ಎಂದು ದೂರಿದರು.
ಕೂಡಲೇ ಗೋವಿಂದಪ್ಪನವರ ಪಕ್ಕದ ಜಮೀನಿನ ವ್ಯಕ್ತಿಗೆ ಜಿಲ್ಲಾಡಳಿತವು ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ನಿರ್ದೇಶನ ನೀಡುವ ಮೂಲಕ ಬಡಪಾಯಿ ಜಮೀನುದಾರರಿಗೆ ಟಿಸಿ ಅಳವಡಿಸಿಕೊಟ್ಟಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

Ganga Welfare Scheme ಈ ಸಂದರ್ಭದಲ್ಲಿ ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಪ್ರಶಾಂತ್ ಕಡೂರಳ್ಳಿ, ಬ್ಲೂ ಆರ್ಮಿ ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಪ್ಪ, ಗಣೇಶ್, ಕುಟುಂಬಸ್ಥರಾದ ಶ್ರೀಧರ್, ದಸಂಸ ಮುಖಂಡರುಗಳಾದ ಮೋಹನ್, ಗಿರೀಶ್, ಸುರೇಶ್, ದಿಲೀಪ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...