Sunday, December 7, 2025
Sunday, December 7, 2025

Anna Bhagya Schemeಅಕ್ಕಿ ವಿತರಣೆ ಸಮಸ್ಯೆ ಬಗ್ಗೆ ಸಂಸದರ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ

Date:

Anna Bhagya Scheme ಅಕ್ಕಿ ವಿತರಣೆ ಸಂಬಂಧ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿ ಸುತ್ತಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಲೋಕಸಭಾ ಸದಸ್ಯರ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಯುವಕಾಂಗ್ರೆಸ್ ಅಧ್ಯಕ್ಷ ಸಂತೋಷ್ ರಾಜ್ಯದ ಸುಮಾರು 26 ಬಿಜೆಪಿ ಸಂಸದರು ಬಡವರಿಗೆ ಅಕ್ಕಿ ವಿತರಣಾ ಸಂಬಂಧ ಕೇಂದ್ರದಲ್ಲಿ ಚರ್ಚಿಸುವ ಮೂಲಕ ಸ್ಪಂದಿಸುವ ಬದಲು ರಾಜ್ಯಸರ್ಕಾರದ ಯೋಜನೆ ಕಿಮ್ಮತ್ತು ನೀಡದೇ ಸತಾವಣೆಯಲ್ಲಿ ತೊಡಗಿ ದ್ವೇಷದ ಹುನ್ನಾರ ನಡೆಸುತ್ತಿದೆ ಎಂದರು.

ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಬಡವರ ಹಸಿವು ನೀಗಿಸುವ ಸಲುವಾಗಿ ಪ್ರತಿ ವ್ಯಕ್ತಿಗೆ 10 ಕೆಜಿಯಂತೆ ಅಕ್ಕಿ ವಿತರಣೆ ಯೋಜನಾ ಕಾರ್ಯಕ್ರಮ ರೂಪಿಸಿದೆ. ಇದನ್ನು ಸಹಿಸಿಕೊಳ್ಳಲಾರದ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಬಿಜೆಪಿ ಸಂಸದರುಗಳು ಅಡ್ಡಿಪಡಿಸಿ ಬಡವರಿಗೆ ದ್ರೋಹ ಮಾಡಲಾಗುತ್ತಿದೆ ಎಂದು ದೂರಿದರು.

ಕೂಡಲೇ, ಪ್ರಧಾನ ಮಂತ್ರಿಗಳ ಜೊತೆ ಸಂಸದರುಗಳು ಚರ್ಚಿಸಿ ಬಡವರ ಅಕ್ಕಿ ವಿತರಣೆಗೆ ಶೀಘ್ರವೇ ಕ್ರಮ ವಹಿಸಲು ಮುಂದಾಗದಿದ್ದರೆ ಹೋರಾಟಗಳ ಮೂಲಕ ಎಚ್ಚರಿಸಬೇಕಾಗುತ್ತದೆ. ಹಠವನ್ನು ಬಿಡದೇ ಕೇಂದ್ರ ಸರ್ಕಾ ರವು ಈ ರೀತಿಯೇ ಮುಂದುವರೆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರು ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದಾರೆ. ಮತ ನೀಡಿದವರಿಗೆ ಕೊರೊನಾ, ಪ್ರವಾಹ ಎಂಬ ಸಂಕಷ್ಟವಿದ್ದರೂ ಸಹ ಧಾವಿಸದೇ ಬೆಂಗಳೂರು, ದೆಹಲಿಯಲ್ಲಿ ಮಾತ್ರ ಕಾಣಿಸಿಕೊಂಡು ಪುಕ್ಕಟೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಯುವಕಾಂಗ್ರೆಸ್ ಉಪಾಧ್ಯಕ್ಷ ರಾಹೀಲ್ ಷರೀಫ್ ಮಾತನಾಡಿ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಸುಮಾರು 3 ಲಕ್ಷ ಕೋಟಿಯಷ್ಟು ತೆರಿಗೆ ಹಣ ನೀಡಲಾಗುತ್ತಿದೆ. ಇದರಿಂದ ಕೇವಲ 38 ಸಾವಿರ ಕೋಟಿ ಮಾತ್ರ ವಾಪಸ್ ಬರುತ್ತಿದೆ. ರಾಜ್ಯದ ಜನತೆ ತಮ್ಮ ತೆರಿಗೆ ಹಣದಿಂದಲೇ ಅಕ್ಕಿ ವಿತರಿಸಿ ಎನ್ನುತ್ತಿದ್ದರೆ ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ಮಾಡಿ ರಾಜ್ಯಸರ್ಕಾರಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಇದೇ ವೇಳೆ ಪ್ರತಿಭಟನಾಕಾರರು ಸಂಸದರ ಕಚೇರಿಗೆ ಮುತ್ತಿಗೆ ಹಾಕುವ ವೇಳೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ತಡೆದರು.

Anna Bhagya Scheme ಈ ಸಂದರ್ಭದಲ್ಲಿ ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಜಿತ್, ಬ್ಲಾಕ್ ಅಧ್ಯಕ್ಷ ಸುಬಾನ್, ನಗರ ಉಪಾಧ್ಯಕ್ಷ ಭರತ್‌ಚೆಟ್ಟಿಯಾರ್, ಎನ್.ಎಸ್.ಯು.ಐ. ಬ್ಲಾಕ್ ಅಧ್ಯಕ್ಷ ಸುಮಂತ್, ಮುಖಂಡರುಗಳಾದ ಸುದೀಪ್, ರಿಜ್ವಾನ್, ರಮೇಶ್, ದರ್ಶನ್, ಸುನೀಲ್, ಉದಯ್, ಶಿವಶಂಕರ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...