Department of Social Welfare ಪ.ಪಂಗಡದ ಧಾರ್ಮಿಕ ಸಂಸ್ಥೆಗಳಲ್ಲದ ಸಂಸ್ಥೆಗೆ ಪರಿಶಿಷ್ಟ ಜಾತಿ ಪರಿವರ್ಗದ ಅನುದಾನದಲ್ಲಿ ಹಣ ಬಿಡುಗಡೆ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ದಸಂಸ ಚಿಕ್ಕಮಗಳೂರು ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮರ್ಲೆ ಅಣ್ಣಯ್ಯ ತರೀಕೆರೆ ಪಟ್ಟಣ ದಲ್ಲಿರುವ ಬಸವಣ್ಣನವರ ಸಹೋದರಿ ವೀರಮಾತೆ ಅಕ್ಕನಾಗಲಾಂಬಿಕೆ ಲಿಂಗೈಕ್ಯೆ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಪ.ಪಜಾತಿಗೆ ಸಂಬಂಧ ಪಡೆದ 2.50 ಕೋಟಿ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರು ಮಾಡಿಸಿಕೊಂಡು ಅನುದಾನ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದರು.
ಇದಲ್ಲದೇ ಹೆಚ್ಚುವರಿಯಾಗಿ 2.60 ಕೋಟಿ ಅನುದಾನ ಮಂಜೂರು ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ.ಜಾತಿ, ಪ.ಪಂಗಡಕ್ಕೆ ಸೇರದ ವೀರಮಾತೆ ಸ್ಥಳದ ಅಭಿವೃದ್ದಿಗೆ ಪ.ಪಂಗಡದ ಅನುದಾನ ಮಂಜೂರು ಮಾಡಿರುವುದು ಜನಾಂಗಕ್ಕೆ ಮಾಡಿ ರುವ ಅನ್ಯಾಯವಾಗಿದೆ ಎಂದು ದೂರಿದರು.
ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಿಡುಗಡೆ ಮಾಡಿರುವ ಅನುದಾನವನ್ನು ವಾಪಸ್ ಪಡೆಯಬೇಕು. ನಂತರ ಪ್ರಸ್ತಾವನೆ ಅರ್ಜಿ ಸಲ್ಲಿಸಿರುವುದನ್ನು ತಡೆಹಿಡಿಯಬೇಕು, ಸುಳ್ಳು ವರದಿ ನೀಡಿ ಹಣ ದುರುಪಯೋಗ ಮಾಡಿರುವ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥೆ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Department of Social Welfare ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಖಜಾಂಚಿ ಸಂತೋಷ್ ಲಕ್ಯಾ, ತರೀಕೆರೆ ತಾಲ್ಲೂಕು ಸಂಚಾಲಕರಾದ ರಾಮಚಂದ್ರ, ಸುಚೇಂದ್ರಕುಮಾರ್, ಎನ್.ಆರ್.ಪುರ ಸಂಚಾಲಕ ಮಂಜುನಾಥ್, ಸಂಘಟನಾ ಸಂಚಾಲಕ ಮೌಂಟ್ ಮತ್ತಿತರರು ಹಾಜರಿದ್ದರು.