Sunday, August 2, 2026
Sunday, August 2, 2026

M. B. Patil ಲಿಂಗಾಯತ ಮಠಮಾನ್ಯಗಳು ಅಮೋಘವಾದ ಕಾರ್ಯ ಮಾಡುತ್ತಿವೆ- ಸಚಿವ ಎಂ.ಬಿ.ಪಾಟೀಲ್

Date:

M. B. Patil ಭಾರತ ಮತ್ತು ಕರ್ನಾಟಕದ ಚರಿತ್ರೆಯಲ್ಲಿ ಶಿಕ್ಷಣ ಮತ್ತು ದಾಸೋಹದ ಸಂಸ್ಕೃತಿಯನ್ನು ಆರಂಭಿಸುವ ಮೂಲಕ ಲಿಂಗಾಯತ ಮಠಮಾನ್ಯಗಳು ಅಮೋಘವಾದ ಕೆಲಸ ಮಾಡಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುಪೂರ್ಣಿಮೆ ಪ್ರಯುಕ್ತ ಅವರು, ಬೆಂಗಳೂರು ನಗರದಲ್ಲಿ ಶನಿವಾರ ಶ್ರೀಶೈಲ ಮಹಾಸಂಸ್ಥಾನದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನ ಪಡೆದು, ಆಶೀರ್ವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶ್ರೀಗಳು, ಪುಷ್ಪಮಾಲೆ ಹಾಕಿ, ಶಾಲು ತೊಡಿಸಿ, ಸಚಿವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸ್ವತಃ ನಾನು ವರ್ಷದಲ್ಲಿ ಎರಡು ಸಲವಾದರೂ ಶ್ರೀಶೈಲ ಕ್ಷೇತ್ರಕ್ಕೆ ಹೋಗಿ, ಶ್ರೀಗಳ ಆಶ್ರಯದಲ್ಲಿ ಇದ್ದುಬರುತ್ತೇನೆ. ಇದರಿಂದ ನನಗೆ ಅವರ ಮಾರ್ಗದರ್ಶನ, ಪ್ರೋತ್ಸಾಹ, ಪ್ರೇರಣೆಗಳ ಕೃಪೆ ಸಿಗುತ್ತಿದೆ. ಅವರು ಮಾಡುವ ಒಳ್ಳೆಯ ಕೆಲಸಗಳಿಗೆ ಸರಕಾರದ ಬೆಂಬಲವೂ ಇರಲಿದೆ” ಎಂದರು.

ನಮ್ಮ ಮಠಮಾನ್ಯಗಳು ಮಾಡುತ್ತಿರುವ ಕೆಲಸಗಳು ಉಳಿದ ಧರ್ಮಗಳ ಸಂಸ್ಥೆಗಳಿಗೆ ಮಾದರಿಯಾಗಿವೆ. ಈ ಮೂಲಕ ಸುಸಂಸ್ಕೃತ ಮತ್ತು ಮೌಲ್ಯಾಧಾರಿತ ಸಮಾಜವನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಶ್ರೀಗಳು ತೋರುತ್ತಿರುವ ಹಾದಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

M. B. Patil ಯಾವುದೇ ಸಂದರ್ಭದಲ್ಲೂ ಗುರುಗಳ ಆಶೀರ್ವಾದ ಎಲ್ಲರಿಗೂ ಸಿಗುತ್ತಿರಬೇಕು. ಇದರಿಂದ ಬದುಕಿನಲ್ಲಿ ಮಹತ್ತ್ವವಾದುದನ್ನು ಸಾಧಿಸುವ ಶಕ್ತಿ ಬರಲಿದೆ. ಇದರ ಜತೆಗೆ ಅವರ ಕೃಪೆಯಿಂದ ವಿನೀತ ಪ್ರಜ್ಞೆ ಬಂದು, ಧನ್ಯತೆಯ ಭಾವನೆ ಲಭ್ಯವಾಗಲಿದೆ ಎಂದು ಸಚಿವರು ಬಣ್ಣಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...